»   » ಫೆ.12 ಕ್ಕೆ ಕೊನೆಯಾಗಬೇಕಿದ್ದ 'ಜಾಗ್ವಾರ್' ಶೂಟಿಂಗ್ ಮುಂದೂಡಿದ್ದೇಕೆ?

ಫೆ.12 ಕ್ಕೆ ಕೊನೆಯಾಗಬೇಕಿದ್ದ 'ಜಾಗ್ವಾರ್' ಶೂಟಿಂಗ್ ಮುಂದೂಡಿದ್ದೇಕೆ?

Posted By:
Subscribe to Filmibeat Kannada

ಇಲ್ಲಿಯವರೆಗೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ನಿಖಿಲ್ ಕುಮಾರಸ್ವಾಮಿ ಅಭಿನಯದ ಚೊಚ್ಚಲ ಚಿತ್ರ 'ಜಾಗ್ವಾರ್' ಶೂಟಿಂಗ್ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಶುಕ್ರವಾರ (ಫೆಬ್ರವರಿ 12) ದಂದು ಕೊನೆಯಾಗಬೇಕಿತ್ತು. ಆದರೆ ಸದ್ಯದ ಮಟ್ಟಿಗೆ ನಿಖಿಲ್ ಕುಮಾರ್ ಅವರ 'ಜಾಗ್ವಾರ್' ಶೂಟಿಂಗ್ ಮುಂದಕ್ಕೆ ಹಾಕಲಾಗಿದೆ.

ಕಳೆದ ತಿಂಗಳು ಜನವರಿ 4 ರಿಂದಲೂ ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರೀಕರಣ ನಡೆಯುತ್ತಿದೆ.[ಮೈಸೂರಿನಲ್ಲಿ ಸರಳವಾಗಿ ಬರ್ತ್ ಡೇ ಆಚರಿಸಿಕೊಂಡ ನಿಖಿಲ್ ಕುಮಾರ್]

Reason behind the delay of Nikhil's 'Jaguar' shooting in mysore

ಆದರೆ ಚಿತ್ರತಂಡ ಅಂದುಕೊಂಡಂತೆ ಎಲ್ಲಾ ನಡೆದಿದ್ದರೆ, ಈಗಾಗಲೇ ಮೈಸೂರಿನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿ ಹಾಂಕಾಂಗ್ ಗೆ ಚಿತ್ರದ ಹಾಡಿನ ಚಿತ್ರೀಕರಣ ನಡೆಸಲು ಪ್ರಯಾಣ ಬೆಳೆಸಬೇಕಿತ್ತು.[ನಿಖಿಲ್ ಕುಮಾರ್ ಜೊತೆ ಡ್ಯುಯೆಟ್ ಹಾಡುವ ಬೆಡಗಿ ಯಾರು?]

ಅಂದಹಾಗೆ ಶೂಟಿಂಗ್ ಮಧ್ಯದಲ್ಲೇ ಸ್ಥಗಿತಗೊಳ್ಳಲು ಮುಖ್ಯ ಕಾರಣ ಚಿತ್ರದ ನಾಯಕ ನಿಖಿಲ್ ಗೌಡ ಅವರ ಆರೋಗ್ಯದಲ್ಲಿ ದಿಢೀರ್ ಉಂಟಾದ ಸಮಸ್ಯೆ.

ಕಳೆದ 35 ದಿನಗಳಿಂದ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ಮಧ್ಯೆ ನಟ ನಿಖಿಲ್ ಕುಮಾರ್ ಅವರ ಆರೋಗ್ಯದಲ್ಲಿ ಏರು-ಪೇರಾದ ಕಾರಣ ನಾಲ್ಕೈದು ದಿನದ ಚಿತ್ರೀಕರಣ ನಿಲ್ಲಿಸಲಾಗಿತ್ತು.

Reason behind the delay of Nikhil's 'Jaguar' shooting in mysore

ಈ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೈಸೂರು ಇನ್ಫೋಸಿಸ್ ಕ್ಯಾಂಪಸ್ ಗೆ ಆಗಮಿಸಿ ಮುಂದಿನ ನಾಲ್ಕೈದು ದಿನ ಕ್ಯಾಂಪಸ್ ನಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಕೇಳಲಿದ್ದಾರೆ.[ನಿಖಿಲ್ ಕುಮಾರ್ 'ಜಾಗ್ವಾರ್' ಸ್ಪೆಷಾಲಿಟೀಸ್ ಏನು ಗೊತ್ತಾ?]

ಒಟ್ನಲ್ಲಿ ಅದ್ಧೂರಿಯಾಗಿ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಎಂಟ್ರಿ ಪಡೆದುಕೊಂಡ ನವ ನಟ ನಿಖಿಲ್ ಕುಮಾರ್ ಅವರ 60 ಕೋಟಿಯ ಭರ್ಜರಿ ಬಜೆಟ್ ನ ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಸಾಕಷ್ಟು ಕುತೂಹಲವಿದ್ದು, ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

English summary
Kannada Actor Nikhil Kumar's Kannada Movie 'Jaguar' shooting delay in Mysore. Here is the reason. The movie is directed by Mahadev.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada