»   » ಗೋವಾದಲ್ಲಿ ನಿಶ್ಚಿತಾರ್ಥ: ಯಶ್ ಬಿಚ್ಚಿಟ್ಟ ರಹಸ್ಯ

ಗೋವಾದಲ್ಲಿ ನಿಶ್ಚಿತಾರ್ಥ: ಯಶ್ ಬಿಚ್ಚಿಟ್ಟ ರಹಸ್ಯ

Posted By:
Subscribe to Filmibeat Kannada

ಮಹದಾಯಿ ಯೋಜನೆಗೆ ಸಂಬಂಧ ಪಟ್ಟಂತೆ ಗೋವಾ ಸರ್ಕಾರದ ವಿರುದ್ಧ ಕನ್ನಡ ನಾಡಿನ ರೈತರು ಹಿಡಿಶಾಪ ಹಾಕುತ್ತಿದ್ದಾರೆ. ಅನ್ನದಾತರ ಪರ ಕನ್ನಡ ಸ್ಟಾರ್ ನಟರುಗಳ ಪೈಕಿ ರಾಕಿಂಗ್ ಸ್ಟಾರ್ ಯಶ್ ಕೂಡ ದನಿ ಎತ್ತಿದ್ದರು.

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ನೀರು-ಜಲದ ವಿಚಾರವಾಗಿ ಕೆಚ್ಚೆದೆಯಿಂದ ಯಶ್ ಮಾತನಾಡಿದ್ದರು. ಇತ್ತೀಚೆಗಷ್ಟೇ ನಡೆದ 'ಕರ್ನಾಟಕ ಬಂದ್'ನಲ್ಲೂ ಕೈ ಜೋಡಿಸಿದ್ದರು. [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

ಇಷ್ಟೆಲ್ಲಾ ಇದ್ದರೂ, ನಟಿ ರಾಧಿಕಾ ಪಂಡಿತ್ ಜೊತೆಗಿನ ತಮ್ಮ ನಿಶ್ಚಿತಾರ್ಥವನ್ನ ಗೋವಾದಲ್ಲಿ ನೆರವೇರಿಸಿದ್ದಕ್ಕೆ ಯಶ್ ವಿರುದ್ಧ ಕೆಲವರು ಟೀಕೆ ಮಾಡಿದ್ದರು. [ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]

ಟೀಕಾಕಾರರಿಗೆ ನಟ ಯಶ್ ಕೊಟ್ಟಿರುವ ಪ್ರತಿಕ್ರಿಯೆ ಹೀಗಿದೆ - ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ.....

ಬಾಯಿ ಮಾತಲ್ಲ, ಕೆಲಸ ಮಾಡಿದ್ದೇನೆ!

''ಉತ್ತರ ಕರ್ನಾಟಕದ ಜನರ ಬಗ್ಗೆ ಯಾವುದೇ ವಿಷಯ ಬಂದಾಗಲೂ ನಾನೇ ಮೊದಲು ಮುಂದೆ ನಿಂತು ಹೋರಾಟ ಮಾಡಿದ್ದೀನಿ. ಅದು ಅಲ್ಲದೇ, ನನ್ನದೇ ಆದ 'ಯಶೋ ಮಾರ್ಗ' ಸಂಸ್ಥೆ ಕಡೆಯಿಂದ ನೀರಿನ ವಿಷಯ ಬಂದಾಗ ಕೆಲಸ ಕೂಡ ಮಾಡಿಕೊಟ್ಟಿದ್ದೇನೆ. ಬಾಯಿ ಮಾತಲ್ಲಿ ಮಾತ್ರ ಮಾತನಾಡಿಲ್ಲ'' - ಯಶ್, ನಟ [ಗೋವಾ ಬೀಚ್ ನಲ್ಲಿ ಯಶ್-ರಾಧಿಕಾ ಮೋಜು-ಮಸ್ತಿ]

ನಾವು ಭಾರತೀಯರು!

''ಎಲ್ಲಕ್ಕಿಂತ ಹೆಚ್ಚಾಗಿ ನಾವು ಭಾರತೀಯರು. ನಾನು ಪಾಕಿಸ್ತಾನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ, ನಾನು ಉತ್ತರ ನೀಡಬೇಕಿತ್ತು. ನಾನು ಭಾರತದಲ್ಲೇ ಮಾಡಿಕೊಂಡಿರೋದು. ಎಲ್ಲರೂ ಭಾರತೀಯರು. ನೀರು-ಜಲ ಅಂತ ಬಂದಾಗ ನಾವು ಯಾವತ್ತೂ ಮುಂದೆ ಬರ್ತೀವಿ'' - ಯಶ್, ನಟ [ಟ್ವೀಟ್ಸ್ : ಯಶ್ -ರಾಧಿಕಾ ರಾಕಿಂಗ್ ಜೋಡಿ ನೂರ್ಕಾಲ ಬಾಳಿ]

ಮದುವೆ ಎಲ್ಲಿ ಆಗ್ತಾರೆ.?

''ನಮ್ಮ ಊರು, ಬೆಂಗಳೂರಿನಲ್ಲೇ ಮದುವೆ ಆಗ್ತೀವಿ'' - ಯಶ್, ನಟ

ಅತ್ತೆ ಆಸೆ ಅದು!

''ನಿಶ್ಚಿತಾರ್ಥ ಮಾತ್ರ ಅತ್ತೆ ಅವರ ಊರು. ಅವರ ಆಸೆ ಇತ್ತು. ಅವರು ನಡೆಸಿಕೊಟ್ಟರು. ಬಹಳ ಸಂತೋಷ. ನಾನು ಭಾರತೀಯ. ನಾವೆಲ್ಲರೂ ಭಾರತೀಯರು. ಅದರ ಮೇಲೆ ಇದೊಂದು ಪ್ರೈವೇಟ್ ಅಫೇರ್'' - ಯಶ್, ನಟ

ರಾಧಿಕಾ ಪಂಡಿತ್ ಏನಂದ್ರು.?

''ನನ್ನ ತಾಯಿ ಊರು ಗೋವಾ. ನನ್ನ ತಾಯಿಯ ಇಡೀ ಕುಟುಂಬ ಗೋವಾದಲ್ಲಿ ಇದ್ದಾರೆ. ರಜಾ ದಿನಗಳನ್ನ ಗೋವಾದಲ್ಲಿ ಇರುವ ನನ್ನ ಅಜ್ಜಿ ಮನೆಯಲ್ಲಿ ಕಳೆಯುತ್ತೇನೆ. ಎಂಗೇಜ್ ಮೆಂಟ್ ಅನ್ನೋದು ಹುಡುಗಿ ಕಡೆಯಿಂದ ಆಗುವ ಸಂಭ್ರಮ. ಅದಕ್ಕೆ ನಾವು ನಮ್ಮ ಅಜ್ಜಿ ಊರು ಆದ ಗೋವಾ ಆಯ್ಕೆ ಮಾಡಿಕೊಂಡ್ವಿ. ನಮ್ಮ ತಾಯಿಯ ಇಡೀ ಕುಟುಂಬ ನಿಶ್ಚಿತಾರ್ಥಕ್ಕೆ ಭಾಗಿ ಆಗ್ಬೇಕು ಅಂತ ಅಲ್ಲೇ ಮಾಡಿದ್ದು'' - ರಾಧಿಕಾ ಪಂಡಿತ್

ಬೆಂಗಳೂರಿನಲ್ಲೇ ಮದುವೆ!

''ಮದುವೆ, ರಿಸೆಪ್ಷನ್ ಎಲ್ಲಾ ಬೆಂಗಳೂರಿನಲ್ಲೇ ಆಗುತ್ತೆ. ನಾವಿಬ್ಬರು ಆಕ್ಟರ್ಸ್. ನಾವು ಕನ್ನಡದವರು ಅಂತ ಇಲ್ಲೇ ಮದುವೆ ಆಗಲು ನಿರ್ಧಾರ ಮಾಡಿದ್ದೀವಿ'' - ರಾಧಿಕಾ ಪಂಡಿತ್

English summary
Kannada Actor Yash revealed the reason behind getting engaged with Radhika Pandit in Goa, in a press meet held at Gold Finch Hotel, Bengaluru on Aug 16th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada