For Quick Alerts
  ALLOW NOTIFICATIONS  
  For Daily Alerts

  'ಸಂತು' ಯಾಕೆ ನೋಡಬೇಕು, ಇಲ್ಲಿದೆ ಕೆಲವು ಕಾರಣಗಳು

  By Suneetha
  |

  'ಮಾಸ್ಟರ್ ಪೀಸ್' ಮೂಲಕ ಎಲ್ಲಾ ದಾಖಲೆ ಪೀಸ್-ಪೀಸ್ ಮಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ 'Straight Forward' 'ಸಂತು' ಆಗಿ ಅಭಿಮಾನಿಗಳಿಗೆ ರಂಜಿಸಲು ಹೊರಟಿದ್ದಾರೆ. ಚಿತ್ರತಂಡ ಹೇಳಿದಂತೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ 'ಸಂತು Straight Forward' ಚಿತ್ರವನ್ನು ರಿಲೀಸ್ ಮಾಡುತ್ತಿದೆ.

  'ಸಂತು Straight Forward' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಅದೆಷ್ಟು ಬೇಗ ನಾಳೆ ಆಗುತ್ತೋ ಅಂತ, ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಾಳೆ (ಅಕ್ಟೋಬರ್ 28) ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ಈ ಸಿನಿಮಾ ತೆರೆ ಕಾಣುತ್ತಿದೆ.['ಸಂತು' ಟ್ರೈಲರ್: ರೋಮ್ಯಾನ್ಸ್, ಡ್ಯುಯೆಟ್, ಫೈಟ್ ಎಲ್ಲವೂ ಭರ್ಜರಿಯಾಗಿದೆ]

  ಯಶ್-ರಾಧಿಕಾ ಪಂಡಿತ್ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಮಹೇಶ್ ರಾವ್ ಆಕ್ಷನ್-ಕಟ್ ಹೇಳಿದ್ದಾರೆ. ಕೆ.ಮಂಜು ನಿರ್ಮಾಣದಲ್ಲಿ ಮೂಡಿಬಂದಿರೋ ಈ ಸಿನಿಮಾ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

  ನಾಳೆ ತೆರೆ ಕಾಣುತ್ತಿರುವ 'ಸಂತು Straight Forward' ಚಿತ್ರವನ್ನು ಯಾಕೆ ನೋಡಬೇಕು?, ಅನ್ನೋದಕ್ಕೆ ಕೆಲವು ಕಾರಣಗಳನ್ನು ಕೊಡುತ್ತೇವೆ ನೋಡಲು ಮುಂದೆ ಓದಿ....

  ಯಶ್ ನಿಜ ವ್ಯಕ್ತಿತ್ವ ತೆರೆ ಮೇಲೆ

  ಯಶ್ ನಿಜ ವ್ಯಕ್ತಿತ್ವ ತೆರೆ ಮೇಲೆ

  ರಾಕಿಂಗ್ ಸ್ಟಾರ್ ಯಶ್ ಅವರ ಸ್ವಭಾವ ನಿಜ ಜೀವನದಲ್ಲಿ ಹೇಗಿದೆಯೋ ಹಾಗೆ 'ಸಂತು Straight Forward' ಸಿನಿಮಾದಲ್ಲಿದೆಯಂತೆ. ಬಹಳ ನೈಜ ನಟನೆಗೆ ಯಶ್ ಅವರು ಒತ್ತು ನೀಡಿದ್ದಾರೆ. ಅವರು ರಿಯಲ್ ಲೈಫ್ ನಲ್ಲಿ ಕೂಡ ಸಖತ್ Straight Forward. ಇದನ್ನೇ ಸಿನಿಮಾದಲ್ಲೂ ತೋರಿಸಲಾಗಿದೆ.['ಸಂತು' ಚಿತ್ರದ ಕಡೆಯಿಂದ ಬಂದ ಇನ್ನೊಂದು ದಾಖಲೆ ಸುದ್ದಿ]

  ಮತ್ತೆ ಯಶ್-ರಾಧಿಕಾ ಮೋಡಿ

  ಮತ್ತೆ ಯಶ್-ರಾಧಿಕಾ ಮೋಡಿ

  ತೆರೆ ಮೇಲೆ ಹ್ಯಾಟ್ರಿಕ್ ಆಗಿ ಮೋಡಿ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರು ಮತ್ತೆ ನಾಲ್ಕನೇ ಬಾರಿಗೆ, ಈ ಚಿತ್ರದ ಮೂಲಕ ಮೋಡಿ ಮಾಡಲು ತಯಾರಾಗಿದ್ದಾರೆ. ಈ ಜೋಡಿಯ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ರಿಯಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡು, ರೀಲ್ ನಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದಾರೆ. ಆದ್ದರಿಂದ ಈ ಜೋಡಿಯ ಡ್ಯುಯೆಟ್ ಅನ್ನು ತೆರೆಯ ಮೇಲೆ ನೋಡಲು ಇಬ್ಬರ ಅಭಿಮಾನಿಗಳು ಕಾತರರಾಗಿದ್ದಾರೆ.

  ಕೆ.ಮಂಜು-ಯಶ್ ಕಾಂಬಿನೇಷನ್

  ಕೆ.ಮಂಜು-ಯಶ್ ಕಾಂಬಿನೇಷನ್

  ನಿರ್ಮಾಪಕ ಕೆ.ಮಂಜು ಮತ್ತು ನಟ ಯಶ್ ಅವರ ಕಾಂಬಿನೇಷನ್ ನ ಎರಡನೇ ಸಿನಿಮಾ ಇದು. ಈ ಮೊದಲು ಇವರಿಬ್ಬರು ಮಾಡಿದ್ದ 'ರಾಜಾಹುಲಿ' ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡಿತ್ತು. ಆದಾದ ನಂತರ ಇದೀಗ ಮತ್ತೆ 'ಸಂತು Straight Forward' ಚಿತ್ರದ ಮೂಲಕ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಲು ತಯಾರಾಗಿದ್ದಾರೆ.

  ಮಹೇಶ್ ರಾವ್ ಆಕ್ಷನ್-ಕಟ್

  ಮಹೇಶ್ ರಾವ್ ಆಕ್ಷನ್-ಕಟ್

  'ಕೇಸ್ ನಂ 18/9' ಚಿತ್ರದ ನಿರ್ದೇಶನ ಮಾಡಿದ್ದ ನಿರ್ದೇಶಕ ಮಹೇಶ್ ರಾವ್ ಅವರು 'ಸಂತು' ಗೆ ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. 'ಕೇಸ್ ನಂ 18/9' ಬಾಕ್ಸಾಫೀಸ್ ನಲ್ಲಿ ಅಷ್ಟಾಗಿ ಯಶಸ್ಸು ಕಾಣದಿದ್ದರೂ, ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಪಡೆದುಕೊಂಡಿತ್ತು. ಜೊತೆಗೆ ಮಹೇಶ್ ರಾವ್ ಅವರು ಸ್ಟಾರ್ ನಟ ಯಶ್ ಅವರಿಗೆ ಆಕ್ಷನ್-ಕಟ್ ಹೇಳುತ್ತಿರೋದು ಇದೇ ಮೊದಲು ಅನ್ನೋದು ಇನ್ನೊಂದು ವಿಶೇಷ.

  ಸ್ವಮೇಕ್ ಸಿನಿಮಾ

  ಸ್ವಮೇಕ್ ಸಿನಿಮಾ

  ಇದೆಲ್ಲಕ್ಕಿಂತ ಹೆಚ್ಚಾಗಿ 'ಸಂತು Straight Forward' ಸ್ವಮೇಕ್ ಸಿನಿಮಾ ಅನ್ನೋದು ಮತ್ತೊಂದು ವಿಚಾರ. ಈ ಮೊದಲು ಇದು ಕೂಡ ರೀಮೇಕ್ ಎಂದು ಹೇಳಲಾಗುತ್ತಿತ್ತು. ಆದರೆ ಇದಕ್ಕೆ ಖುದ್ದು ಚಿತ್ರತಂಡದ ಮೂಲಗಳೇ ಸ್ವಮೇಕ್ ಸಿನಿಮಾ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.[ಯಾರಪ್ಪಾ ಹೇಳಿದ್ದು 'ಸಂತು Straight Forward' ರೀಮೇಕ್ ಸಿನಿಮಾ ಅಂತ?]

  English summary
  Here is the Top 5 Reasons to watch Kannada Movie 'Santhu Straight Forward'. Kannada Actor Yash, Kannada Actress Radhika Pandit in the lead role. The Movie is directed by Mahesh Rao and Produced by K Manju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X