»   » ಡಬ್ಬಿಂಗ್ ಎನ್ನುವ "ಹೊಸ ಬೆಳಕಿನ, ಹೊಸ ಗಾಳಿಯ ತಂದ ಅತಿಥಿ" 'ಸತ್ಯದೇವ್ IPS'

ಡಬ್ಬಿಂಗ್ ಎನ್ನುವ "ಹೊಸ ಬೆಳಕಿನ, ಹೊಸ ಗಾಳಿಯ ತಂದ ಅತಿಥಿ" 'ಸತ್ಯದೇವ್ IPS'

Posted By: ಕನ್ನಡ-ಕ
Subscribe to Filmibeat Kannada

ಸತ್ಯದೇವ್ IPS ಎನ್ನುವ ಒಂದು ಡಬ್ಬಿಂಗ್ ಚಿತ್ರ ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಈಗ ಅದು https://vimeo.com/ondemand/sathyadevips ಮೂಲಕ ಅನ್‌ ಲೈನ್ ನಲ್ಲೂ ಲಭ್ಯವಾಗಿ ಒಂದು ಪುಟ್ಟ ಕ್ರಾಂತಿ ಮಾಡಿದೆ. ನಾವು ಹೊರನಾಡು ಕನ್ನಡಿಗರು ಈ ಚಿತ್ರವನ್ನು Rs.200 (3$) ಕೊಟ್ಟು ನೋಡಿ ಅದನ್ನು ಬೆಂಬಲಿಸುವ ಅವಶ್ಯಕತೆ ಇದೆ. ಅದು ಈ ಕೆಳಗಿನ ಕಾರಣಗಳಿಗಾಗಿ...

- ಈ ಚಿತ್ರ, ಗಾಂಧಿನಗರವನ್ನೇ ಚಿತ್ರರಂಗ, ಕನ್ನಡವೆಂದರೆ ಕೇವಲ ಸಿನಿಮಾ, ಕರ್ನಾಟಕ ಎಂದರೆ ಬೆಂಗಳೂರು ಎಂಬ 5 ದಶಕಗಳ ಮೂಢನಂಬಿಕೆಯನ್ನು ಪೋಷಿಸಿ ಬೆಳೆಸಿದ ಕೆಲವೇ ಕೆಲವು ಕೂಪ ಮಂಡೂಕಗಳು ಕಟ್ಟಿದ ಅಭೇದ್ಯ ಕೋಟೆಯನ್ನು ಒಂದೇ ಸಾರಿ ಪುಡಿ ಪುಡಿ ಮಾಡಿದೆ.

Reasons to watch 'Sathyadev IPS': Written Horanadu Kannadiga

- ಈ ಚಿತ್ರದ ಯಶಸ್ಸು ಹೊರನಾಡು ಕನ್ನಡಿಗರಿಗೆ ತುಂಬಾ ಮುಖ್ಯ. ಕನ್ನಡದ ಮಟ್ಟಿಗೆ ಜ್ಞಾನದ ಹೆಬ್ಬಾಗಿಲನ್ನು ತೆರೆಯುತ್ತದೆ ಈ ಚಿತ್ರ. ಒಮ್ಮೆ ಯೋಚಿಸಿ. IPL ನಲ್ಲಿ ಕನ್ನಡ ವೀಕ್ಷಕ ವಿವರಣೆ, ನ್ಯಾಷನಲ್ ಜಿಯೋಗ್ರಾಫಿಕ್/ ಡಿಸ್ಕವರಿ ಚಾನೆಲ್ ಗಳಲ್ಲಿ ಕನ್ನಡ ವಿವರಣೆಗಳು, ಪೋಗೋ ಮತ್ತಿತರ ಮಕ್ಕಳ ಚಾನೆಲ್ ಗಳಲ್ಲಿ ಕನ್ನಡ ಮಾತಾಡುವ ಕಾರ್ಟೂನ್ ಗಳು, ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಬಾಯಲ್ಲಿ ಕನ್ನಡ ಮಾತು. ಒಂದೇ ಎರಡೇ. ಒಮ್ಮೆ ಎದೆ ಮುಟ್ಟಿ ಹೇಳಿ... ನಿಮಗೆ ಇಂಗ್ಲಿಷ್ ಸಿನಿಮಾಗಳ ಸಂಭಾಷಣೆ ಪೂರ್ತಿ ಅರ್ಥವಾಗುತ್ತದೆಯೇ? 'ಮಗಧೀರ'ನ ಹಾಡು, 'ರೋಬೊ'ನ ಸಂಭಾಷಣೆ ಅರ್ಥವಾಗಿದೆಯಾ? ನಿಮಗೆ ಅರ್ಥವಾಗಿಲ್ಲ ಎಂದರೆ ಅರ್ಥವಾಗಬೇಕು. ಅದು ನಿಮ್ಮ ಜನ್ಮ ಸಿದ್ಧ ಹಕ್ಕು.

-ಹೊರನಾಡು. ಹೊರದೇಶದಲ್ಲಿ ಬೆಳೆದ ನಮ್ಮ ಮಕ್ಕಳು ಸ್ವಲ್ಪವಾದರೂ ಕನ್ನಡದ ಜೊತೆಗೆ ಅನುಬಂಧ ಬೆಳೆಯಬೇಕಾದರೆ ನಾವು ಈ ಡಬ್ಬಿಂಗ್ ಚಿತ್ರಗಳನ್ನು ಪ್ರೋತ್ಸಾಹಿಸಲೇಬೇಕು.

-ಎಲ್ಲಾ ಕನ್ನಡಿಗರಿಗೆ ಸಂವಿಧಾನ ಬದ್ಧವಾದ, ಮಾತೃಭಾಷೆಯಲ್ಲೇ ಮನೋರಂಜನೆಯ ಆಯ್ಕೆಯ ಸ್ವಂತಂತ್ರ್ಯ ಬೇಕೇ ಬೇಕು. ಡಬ್ಬಿಂಗ್ ಕನ್ನಡ ಗ್ರಾಹಕನ ಹಕ್ಕು ಎಂದು CCI ತೀರ್ಪು ಎತ್ತಿ ಹಿಡಿದಿದೆ. ಕನ್ನಡ ಗ್ರಾಹಕರ ಕೂಟ, ಬನವಾಸಿ ಬಳಗದವರ 5 ವರ್ಷದ ಕಾನೂನು ಬದ್ಧ ಹೋರಾಟದ ವಿಜಯ, ಕೃಷ್ಣಮೂರ್ತಿ ಯಂತಹ ಧೈರ್ಯವಂತ ನಿರ್ಮಾಪಕನ ಕನಸು, ಕ್ರೌಡ್ ಫಂಡ್ ಮೂಲಕ ಹಣ ಹೂಡಿದ, ಚಿತ್ರರಂಗಕ್ಕೆ ಸಂಭಂದವೇ ಇಲ್ಲದ IT, BT, ಹೊರನಾಡು ಮತ್ತು ಅನಿವಾಸಿ ಕನ್ನಡಾಭಿಮಾನಿಗಳ ಪ್ರೋತ್ಸಾಹದ ಫಲವಾಗಿ ಇಂದು ಕುವೆಂಪು ಅವರ ಭಾವಗೀತೆ "ತೆರೆದಿದೆ ಮನೆ ಓ ಬಾ ಅತಿಥಿ, ಹೊಸ ಬೆಳಕಿನ ಹೊಸ ಗಾಳಿ" ಯನ್ನು ಆಸ್ವಾದಿಸಲು ಸಾಧ್ಯವಾಗಿದೆ. ನಮ್ಮ ನಿಮ್ಮೆಲ್ಲರ ಸಹಕಾರ ಇದಕ್ಕೆ ಬೇಕು.

ಬರೆದವರು - ಕನ್ನಡ-ಕ , ಒಬ್ಬ ಹೊರನಾಡು ಕನ್ನಡಿಗ

English summary
Horanadu Kannadiga written reasons to watch, Ajith Starrer Dubbed Kannada Cinema 'Sathyadev IPS'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada