»   » ಅಂಬರೀಶ್ ಅನಾರೋಗ್ಯ; ಲೇಟೆಸ್ಟ್ ರಿಪೋರ್ಟ್

ಅಂಬರೀಶ್ ಅನಾರೋಗ್ಯ; ಲೇಟೆಸ್ಟ್ ರಿಪೋರ್ಟ್

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಅವರು ಚಿರಾಯು, ಅಣ್ಣ ನೂರು ವರ್ಷ ಬಾಳಲಿ ಎಂದು ಅವರ ಅಭಿಮಾನಿಗಳು ಪೂಜೆ ಹವನ ವಿಶೇಷ ಪಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ನಾಡಿನಾದ್ಯಂತ ಇರುವ ಅಂಬರೀಶ್ ಅಭಿಮಾನಿ ಬಳಗ ಬೆಂಗಳೂರು ವಿಕ್ರಂ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.

ಏತನ್ಮಧ್ಯೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರು ಇದೀಗ ತಾನೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಆಗಮಿಸಿದರು. ಸೋಮವಾರ (ಫೆ.24) ಮುಂಜಾನೆ 4 ಗಂಟೆಗೆ ಲಂಡನ್ ನಿಂದ ಆಗಮಿಸಿದ ಅಭಿಷೇಕ್ ತಂದೆಯವರ ಆರೋಗ್ಯ ವಿಚಾರಿಸಿದರು.

Rebel Star Ambareesh health latest report

ಇನ್ನೊಂದು ಕಡೆ ವಿಕ್ರಂ ಆಸ್ಪತ್ರೆ ಬಳಿ ಅಂಬರೀಶ್ ಅಭಿಮಾನಿಗಳು ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಮೃತ್ಯುಂಜಯ ಹೋಮ ಮಾಡುತ್ತಿದ್ದಾರೆ. ವೆಂಟಿಲೇಟರ್ ನಲ್ಲಿ ಅಂಬರೀಶ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಅಭಿಮಾನಿಗಳು ಅಂಬಿ ಬೇಗ ಗುಣಮುಖರಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. [ಅಂಬಿಯಣ್ಣನ ಆರೋಗ್ಯಕ್ಕಾಗಿ ಪೂಜೆ, ಹೋಮ-ಹವನ]

ಅಂಬರೀಶ್ ಬೇಗ ಗುಣಮುಖರಾಗಲಿ ಎಂದು ಗದಗದ ಶಿವಾನಂದ ಮಠದಲ್ಲಿ ರುದ್ರಾಭಿಷೇಕ, ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲದಲ್ಲಿ ವಿಶೇಷ ಪೂಜೆ ಪ್ರಾರ್ಥನೆಗಳನ್ನು ಅಭಿಮಾನಿಗಳು ಮಾಡಿಸುತ್ತಿದ್ದಾರೆ.

ಡೋಂಟ್ ವರಿ ಅಂಬಿಗೆ ಏನಾಗಿಲ್ಲ ಎಂದು ವೈದ್ಯರು ಪದೇಪದೇ ಹೇಳುತ್ತಿದ್ದರೂ ಅಭಿಮಾನಿಗಳ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ (ಫೆ.24) ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ ಅಂಬಿ ಯೋಗಕ್ಷೇಮವನ್ನು ಅವರ ಆಸ್ಪತ್ರೆಯಲ್ಲಿ ವಿಚಾರಿಸಿದರು. (ಒನ್ಇಂಡಿಯಾ ಕನ್ನಡ)

English summary
Karnataka housing minister and actor Rebel Star Ambareesh health report. His son Abhishekh visits Vikram hospital on 24th February. Ambareesh health condition improved. Rebel Star is recovering gradually and his health condition is slightly better at the moment. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada