»   » ಅಂಬರೀಶ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪಾತ್ರ ಬಹಿರಂಗ

ಅಂಬರೀಶ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪಾತ್ರ ಬಹಿರಂಗ

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಅವರು ಶಾರ್ಟ್ ಬ್ರೇಕ್ ನ ಬಳಿಕ ಮತ್ತೆ ಬಣ್ಣ ಹಚ್ಚಿಕೊಳ್ಳಲು ಅಣಿಯಾಗಿದ್ದಾರೆ. ಶ್ವಾಸಕೋಶದ ಸೋಂಕಿಗೆ ಒಳಗಾಗಿ ಸಿಂಗಪುರದಲಿ ಚಿಕಿತ್ಸೆ ಪಡೆದುಬಂದಿರುವ ಅವರು ಈಗ ಫರ್ಫೆಕ್ಟ್ ಲಿ ಆಲ್ ರೈಟ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿರುವ ಅಂಬರೀಶ್ ಚಿತ್ರದಲ್ಲಿನ ಅವರ ಪಾತ್ರ ಬಹಿರಂಗವಾಗಿದೆ. ಈ ಚಿತ್ರದಲ್ಲಿ ಅಂಬಿ ಅವರದು ಬೆಂಗಳೂರು ನಿರ್ಮಾಪಕ ಕೆಂಪೇಗೌಡನ ಪಾತ್ರದಲ್ಲಿ ಝಗಮಗಿಸಲಿದ್ದಾರೆ.

Ambareesh

ವಿಜಯನಗರ ಸಾಮ್ರಾಜ್ಯದ ಅರಸ ಕೃಷ್ಣದೇವರಾಯನ ಪಾತ್ರವನ್ನು ತೆಲುಗು ನಟ ಸುಮನ್ ಪೋಷಿಸಿದ್ದಾರೆ. ಸಿಂಗಪುರದಿಂದ ಬಳಿಕ ಈಗ ಸಂಪೂರ್ಣ ಚೇತರಿಸಿಕೊಂಡಿರುವ ಅಂಬರೀಶ್ ಅವರು ಅಂಬರೀಶ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.

ಈ ಹಿಂದೆ ಅವರು ಕಲ್ಲರಳಿ ಹೂವಾಗಿ ಚಿತ್ರದಲ್ಲಿ ಮದಕರಿ ನಾಯಕನ ಪಾತ್ರ ಪೋಷಿಸಿದ್ದರು. ಈಗ ಮತ್ತೊಮ್ಮೆ ಕೃಷ್ಣದೇವರಾಯನ ಸಾಮಂತ ರಾಜನಾಗಿ ತೆರೆಯ ಮೇಲೆ ಕತ್ತಿ ಝಳಪಿಸಲಿದ್ದಾರೆ. ಸುಖಧರೆ ಪಿಕ್ಚರ್‍ಸ್ ಲಾಂಛನದಡಿಯಲ್ಲಿ ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರವಿದು.

ಚಿತ್ರಕ್ಕೆ ಕಥೆ, ಸಂಭಾಷಣೆ ಚಿಂತನ್, ಛಾಯಾಗ್ರಹಣ ಸತ್ಯ, ಸಂಗೀತ ಹರಿಕೃಷ್ಣ, ಕಲೆ ಈಶ್ವರಿ ಕುಮಾರ್, ಸಾಹಸ ರವಿವರ್ಮ, ನೃತ್ಯ ಮುರುಳಿ, ಗಣೇಶ್, ಕಲೈ, ಸಂಕಲನ ಪ್ರಕಾಶ್, ನಿರ್ಮಾಣ ಮೇಲ್ವಿಚಾರಣೆ ಮೋಹನ್, ನಿರ್ಮಾಣ ನಿರ್ವಹಣೆ ಅನಿಲ್‌ಕುಮಾರ್, ಚಿತ್ರದ ಸಹ ನಿರ್ಮಾಪಕರು ಮಹೇಶ್ ನಂಜಯ್ಯ, ಎಂ.ಸುರೇಶ್.

ತಾರಾಗಣದಲ್ಲಿ ದರ್ಶನ್, ಪ್ರಿಯಾಮಣಿ, ಡಾ.ಅಂಬರೀಶ್, ಸುಮಲತಾ, ಉಮಾಶ್ರೀ, ನಿಶಾ ಯೋಗೀಶ್ವರ್, ಸಾಧು ಕೋಕಿಲ, ಶರತ್ ಲೋಹಿತಾಶ್ವ, ಬುಲೆಟ್ ಪ್ರಕಾಶ್, ರವಿಶಂಕರ್, ರಾಜೇಂದ್ರ ಕಾರಂತ್, ಸಿದ್ಧಾರ್ಥ (ಬಾಂಬೆ), ಬಿರಾದಾರ್, ರೋಹಿತ್, ಭರತ್, ಸತೀಶ್, ಬೆಸ್ಟ್‌ಕ್ಲಬ್ ಆರ್. ಅರುಣಾಚಲಂ, ಜಯರಾಂ, ಚೇತನ, ಲೋಕಿ, ಉದಯ್, ಚೇತನ್ ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
Rebel Star Ambareesh role revealed in Kannada upcoming movie Ambareesha. Ambareesh has played the role of Bangalore-founder Kempe Gowda. The film is directed by Mahesh Sukhdhare. The movie introduces Nisha, the daughter of politician CP Yogeshwar. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada