twitter
    For Quick Alerts
    ALLOW NOTIFICATIONS  
    For Daily Alerts

    ಯಶ್ ಹೇಳಿದಂತೆ ಕೆಜಿಎಫ್‌ಗಿಂತ ದೊಡ್ಡ ದಾಖಲೆ ಬರೆದ 'ಗಂಧದಗುಡಿ'; ಮಲ್ಟಿಪ್ಲೆಕ್ಸ್ ಕಿಂಗ್ ಈಸ್ ಬ್ಯಾಕ್!

    |

    ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರ ಗಂಧದ ಗುಡಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ಚಿತ್ರ ನಾಳೆ ( ಅಕ್ಟೋಬರ್ 28 ) ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಕರ್ನಾಟಕದ ಹಲವು ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಇಂದಿನಿಂದಲೇ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳು ಆರಂಭಗೊಳ್ಳಲಿವೆ.

    ಇನ್ನು ಗಂಧದಗುಡಿ ಬಳಿಕ ಪುನೀತ್ ರಾಜ್ ಕುಮಾರ್ ಅಭಿನಯದ ಬೇರೆ ಯಾವುದೇ ಹೊಸ ಚಿತ್ರ ಬಿಡುಗಡೆಯಾಗುವುದಿಲ್ಲ, ಅಪ್ಪು ಅಭಿನಯದ ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿ ಸಂಭ್ರಮಿಸುವ ಅವಕಾಶ ಮತ್ತೆ ಸಿಗುವುದಿಲ್ಲ ಎಂಬ ಕಾರಣದಿಂದಾಗಿ ಪುನೀತ್ ರಾಜ್ ಕುಮಾರ್ ಅವರನ್ನು ಕೊನೆಯ ಬಾರಿಗೆ ತೆರೆಮೇಲೆ ಸಂಭ್ರಮಿಸಲು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ.

    ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ನಗರಗಳಲ್ಲಿ ಒಟ್ಟು ನಲವತ್ತಕ್ಕೂ ಹೆಚ್ಚು ಪೇಯ್ಡ್ ಪ್ರೀಮಿಯರ್ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಬಿಡುಗಡೆಯ ದಿನವೂ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಗಂಧದಗುಡಿ ತೆರೆಕಾಣುತ್ತಿದೆ. ಇನ್ನು ಅಪ್ಪುಗೆ ಮಲ್ಟಿಫ್ಲೆಕ್ಸ್ ಆಡಿಯನ್ಸ್ ಹೆಚ್ಚಿರುವ ಕಾರಣ ಪ್ರತಿ ಸಿನಿಮಾದಂತೆ ಈ ಸಿನಿಮಾಗೂ ಹೆಚ್ಚೆಚ್ಚು ಮಲ್ಟಿಪ್ಲೆಕ್ಸ್ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಮಲ್ಟಿಪ್ಲೆಕ್ಸ್ ಶೋಗಳು ಸೋಲ್ಡ್ ಔಟ್ ಆಗುತ್ತಿದ್ದಂತೆ ಮತ್ತಷ್ಟು ಹೆಚ್ಚಿನ ಪ್ರದರ್ಶನಗಳನ್ನು ಆಯೋಜನೆ ಮಾಡಲಾಗುತ್ತಿದೆ. ಮಲ್ಟಿಪ್ಲೆಕ್ಸ್ ಕಿಂಗ್ ಎಂದೇ ಹೆಸರನ್ನು ಹೊಂದಿರುವ ಪುನೀತ್ ರಾಜ್ ಕುಮಾರ್ ಅಂತಿಮ ಚಿತ್ರ ಗಂಧದಗುಡಿ ಕೂಡ ಮಲ್ಟಿಪ್ಲೆಕ್ಸ್ ದಾಖಲೆಯೊಂದನ್ನು ಬರೆದಿದೆ.

     ಹತ್ತು ಗಂಟೆಯೊಳಗೆ ಬರೋಬ್ಬರಿ 50 ಪ್ರದರ್ಶನ!

    ಹತ್ತು ಗಂಟೆಯೊಳಗೆ ಬರೋಬ್ಬರಿ 50 ಪ್ರದರ್ಶನ!

    ಬಿಡುಗಡೆ ದಿನ ಬೆಳಿಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನ ಫೋರಂ ಮಾಲ್, ಒರಾಯನ್ ಮಾಲ್, ವೈಷ್ಣವಿ ಸಫೈರ್ ಮಾಲ್, ವೆಗಾ ಸಿಟಿ ಮಾಲ್ ಹಾಗೂ ಜಿಟಿ ಮಾಲ್‌ನಲ್ಲಿರುವ ಪಿವಿಆರ್ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಒಟ್ಟು 50 ಬಾರಿ ಪ್ರದರ್ಶನಗೊಳ್ಳಲಿದೆ. ಈ ಕುರಿತಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಚಿತ್ರದ ವಿತರಕ ಕಾರ್ತಿಕ್ ಗೌಡ ಇದು ನೂತನ ದಾಖಲೆ ಎಂಬುದನ್ನು ಘೋಷಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಈ ಕೇಂದ್ರಗಳಲ್ಲಿ ಗಂಧದಗುಡಿ ಪ್ರದರ್ಶನ ಆರಂಭವಾಗಲಿದೆ.

     ಯಶ್ ಹೇಳಿದಂತೆ ದಾಖಲೆ ಮಾಡ್ತಿದೆ ಗಂಧದ ಗುಡಿ

    ಯಶ್ ಹೇಳಿದಂತೆ ದಾಖಲೆ ಮಾಡ್ತಿದೆ ಗಂಧದ ಗುಡಿ

    ಇನ್ನು ಗಂಧದಗುಡಿ ಪ್ರೀ ರಿಲೀಸ್ ಕಾರ್ಯಕ್ರಮವಾದ ಪುನೀತ ಪರ್ವದಲ್ಲಿ ಅಪ್ಪು ಅವರ ಈ ಚಿತ್ರವು ಎಲ್ಲಾ ದಾಖಲೆಯನ್ನು ಹೊಡೆದು ಹಾಕಬೇಕು, ಕೆಜಿಎಫ್ ಕೂಡ ಇರಬಾರದು ಎಂದು ಘೋಷಿಸಿದ್ದರು. ಅದರಂತೆ ಇದೀಗ ಈ ಹಿಂದೆ ಕೆಜಿಎಫ್ ಹೊಂದಿದ್ದ ಈ ಕೇಂದ್ರಗಳಲ್ಲಿನ ಬೆಳಗಿನ ಜಾವದ ಅತಿಹೆಚ್ಚು ಪ್ರದರ್ಶನದ ದಾಖಲೆಯನ್ನು ಗಂಧದ ಗುಡಿ ಮುರಿದು ಹಾಕಿದೆ.

     ಪ್ರೀಮಿಯರ್ ಮೂಲಕವೇ 28 ಲಕ್ಷ!

    ಪ್ರೀಮಿಯರ್ ಮೂಲಕವೇ 28 ಲಕ್ಷ!

    ಇನ್ನು ಗಂಧದಗುಡಿ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳಿಂದ ರಾಜ್ಯಾದ್ಯಂತ ಒಟ್ಟು 24 ಲಕ್ಷ ರೂಪಾಯಿಗಳನ್ನು ಸಂಪಾದಿಸಿದೆ ಎಂದು ಬಾಕ್ಸ್ ಆಫೀಸ್‌ ಪರಿಣಿತರು ತಿಳಿಸಿದ್ದಾರೆ. ಬೆಂಗಳೂರು ನಗರ ಒಂದರಲ್ಲಿಯೇ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳ ಮೂಲಕ 18,40,000 ರೂಪಾಯಿ ಕಲೆಕ್ಷನ್ ಮಾಡಿದೆ ಗಂಧದ ಗುಡಿ.

     ಕ್ರಿಕೆಟಿಗರಿಂದ ಗಂಧದ ಗುಡಿಗೆ ವಿಶಸ್

    ಕ್ರಿಕೆಟಿಗರಿಂದ ಗಂಧದ ಗುಡಿಗೆ ವಿಶಸ್

    ಗಂಧದ ಗುಡಿ ಚಿತ್ರಕ್ಕೆ ಕ್ರಿಕೆಟಿಗರಾದ ಅಮಿತ್ ಮಿಶ್ರಾ, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಹಾಗೂ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವಾರು ಕ್ರಿಕೆಟಿಗರು ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಒಳ್ಳೆಯ ಹೆಸರು ಮಾಡಲಿ ಎಂದು ಬರೆದುಕೊಂಡಿದ್ದಾರೆ.

    English summary
    Record 50 shows of Gandhada Gudi will be played in bengaluru PVR centres before 10 am on release day . Read on
    Thursday, October 27, 2022, 17:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X