Don't Miss!
- Sports
U-19 Women's T20 World Cup 2023: ಇಂಗ್ಲೆಂಡ್ ಮಣಿಸಿದರೆ ಭಾರತದ ವನಿತೆಯರೇ ವಿಶ್ವ ಚಾಂಪಿಯನ್
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಂತಿಮ ಕ್ಷಣದಲ್ಲಿ ಸರ್ಪ್ರೈಸ್: 'ಕುರುಕ್ಷೇತ್ರ'ದಲ್ಲಿ ಇವರಿಗೇನು ಕೆಲಸ?
ಮುನಿರತ್ನ ಕುರುಕ್ಷೇತ್ರದಲ್ಲಿ ಬಹುಭಾಷಾ ನಟಿ ಸ್ನೇಹಾ ದ್ರೌಪದಿ ಪಾತ್ರದಲ್ಲಿ ನಟಿಸಿದ್ದಾರೆ. ಹರಿಪ್ರಿಯಾ ನೃತ್ಯಗಾರ್ತಿಯಾಗಿ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ದುರ್ಯೋಧನನ ಪತ್ನಿ ಪಾತ್ರದಲ್ಲಿ ಮೇಘನಾ ರಾಜ್ ನಟಿಸಿದ್ದು, ಚಿತ್ರಕ್ಕೆ ಮೈಲೇಜ್ ಹೆಚ್ಚಿದೆ.
ಈ ಮೂರು ಪಾತ್ರಗಳನ್ನ ಬಿಟ್ಟರೇ ಕುರುಕ್ಷೇತ್ರದಲ್ಲಿ ಗ್ಲಾಮರ್ ಇಲ್ಲ ಎನ್ನಲಾಗಿತ್ತು. ಆದ್ರೀಗ, ಅಚ್ಚರಿ ಮತ್ತು ಸರ್ಪ್ರೈಸ್ ಎಂಬಂತೆ ಇನ್ನು ಕೆಲವು ನಟಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಕುರುಕ್ಷೇತ್ರದಲ್ಲಿ
'ರವಿಚಂದ್ರನ್'ಗೂ
ಇದ್ದಾರೆ
ನಾಯಕಿ:
ಯಾರು
ಈಕೆ?
ಹೌದು, ಅಭಿಮನ್ಯುವಿನ ಜೋಡಿ ಉತ್ತರೆ ಪಾತ್ರದಲ್ಲಿ ಅಧಿತಿ ಆರ್ಯ ಕಾಣಿಸಿಕೊಂಡಿದ್ದು, ಮತ್ತೆ ಮೂವರು ಯುವನಟಿಯರು ಈ ಚಿತ್ರದಲ್ಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ, ಸುಯೋಧನನಿಗೆ ಸಾಥ್ ಕೊಟ್ಟಿರುವ ಆ ನಟಿಯರು ಯಾರು?

ಕುರುಕ್ಷೇತ್ರದಲ್ಲಿ ರೆಜಿನಾ.!
ಈ ಹಿಂದೆ ಅಭಿಮನ್ಯು ಪತ್ನಿ ಪಾತ್ರದಲ್ಲಿ ರೆಜಿನಾ ನಟಿಸಬಹುದು ಎಂಬ ಸುದ್ದಿಯಾಗಿತ್ತು. ಆಮೇಲೆ ಉತ್ತರೆ ಪಾತ್ರದಲ್ಲಿ ಆಧಿತಿ ಆರ್ಯ ಎಂಬ ಇನ್ನೊಬ್ಬ ನಟಿ ಬಣ್ಣ ಹಚ್ಚಿದ್ದರು. ಅಲ್ಲಿಗೆ ರೆಜಿನಾ ಕುರುಕ್ಷೇತ್ರದಲ್ಲಿ ಇಲ್ಲದಂತಾಯಿತು ಎಂದು ನಿರಾಸೆಯಾಗಿತ್ತು. ಆದ್ರೀಗ, ಕುರುಕ್ಷೇತ್ರ ಕಲಾವಿದರ ಪಟ್ಟಿಯಲ್ಲಿ ರೆಜಿನಾ ಹೆಸರು ಕೂಡ ಕಾಣಿಸಿಕೊಂಡಿದೆ. ಇದು ಸರ್ಪ್ರೈಸ್ ಆಗಿದೆ.

ರೆಜಿನಾ ಜೊತೆ ರಮ್ಯಾ ನಂಬಿಸೇನ್
ಅದೇ ರೀತಿ ಕುರುಕ್ಷೇತ್ರ ಆರಂಭವಾದಾಗ ಮಲಯಾಂಳ ನಟಿ ರಮ್ಯಾ ನಂಬಿಸೇನ್ ಕೂಡ ಅಭಿನಯಿಸಲಿದ್ದಾರೆ ಎನ್ನಲಾಯ್ತು. ಮೇಘನಾ ರಾಜ್ ಮಾಡಿರುವ ಭಾನುಮತಿ ಪಾತ್ರದಲ್ಲಿ ರಮ್ಯಾ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಮೇಘನಾ ಎಂಟ್ರಿಯ ನಂತರ ಇದು ಸೈಲೆಂಟ್ ಆಗಿತ್ತು. ಈಗ ಕುರುಕ್ಷೇತ್ರ ವಿಕಿಪೀಡಿಯದಲ್ಲಿ ಇವರಿಬ್ಬರ ಹೆಸರು ಪ್ರತ್ಯಕ್ಷವಾಗಿದೆ.
'ಮುನಿರತ್ನ
ಕುರುಕ್ಷೇತ್ರ'
ನೋಡುವುದಕ್ಕೆ
10
ಕಾರಣಗಳು

ಅನುಸೂಯ ಭಾರಾಧ್ವಜ್ ಹೆಸರು.!
ರೆಜಿನಾ ಮತ್ತು ರಮ್ಯಾ ಹೆಸರು ಮಾತ್ರವಲ್ಲ ತೆಲುಗು ನಟಿ ಅನುಸೂಯ ಭಾರಾಧ್ವಜ್ ಹೆಸರು ಕೂಡ ಕುರುಕ್ಷೇತ್ರ ವಿಕಿಪೀಡಿಯದಲ್ಲಿ ಕಾಣಿಸಿಕೊಂಡಿದೆ. ಕ್ರಾಸ್ ಚೆಕ್ ಮಾಡಿದಾಗ ರಮ್ಯಾ ಅವರ ವಿಕಿಪೀಡಿಯದಲ್ಲೂ ಕುರುಕ್ಷೇತ್ರ ಹೆಸರಿದೆ. ಆದ್ರೆ, ರೆಜಿನಾ ಮತ್ತು ಅನುಸೂಯ ವಿಕಿಪೀಡಿಯದಲ್ಲಿ ಕುರುಕ್ಷೇತ್ರ ಹೆಸರಿಲ್ಲ.
ದುರ್ಯೋಧನನ
ಜೊತೆ
ಅವರೊಬ್ಬರದೇ
ಕಟೌಟ್:
ಅದಕ್ಕೊಂದು
ಕಾರಣನೂ
ಇದೆ.!

ಪಕ್ಕಾನಾ ಅಥವಾ ಅಪ್ ಡೇಟ್ ಆಗಿಲ್ವಾ.?
ವಿಕಿಪೀಡಿಯವನ್ನ ಯಾರೂ ಬೇಕಾದರೂ ಎಡಿಟ್ ಮಾಡಬಹುದು. ಬಟ್, ಇಂತಹ ಸಿನಿಮಾ ವಿಚಾರದಲ್ಲಿ ಚಿತ್ರತಂಡದವರು ಕಾಲಕಾಲಕ್ಕೆ ಅಪ್ ಡೆಟ್ ಮಾಡ್ತಾರೆ. ಇನ್ನು ಈ ಮೂವರ ಹೆಸರಿನ ಮುಂದೆ ಯಾವ ಪಾತ್ರಗಳು ಎಂಬುದನ್ನ ಕೂಡ ನಮೂದಿಸಿಲ್ಲ. ಉಳಿದ ಎಲ್ಲ ಪಾತ್ರಗಳ ವಿವರವೂ ಇದೆ. ಹಾಗಾಗಿ, ಇದು ಮಿಸ್ಟೇಕ್ ಆಗಿದ್ಯಾ ಅಥವಾ ಯಾವುದಾದರೂ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.