ತಮಿಳುನಾಡಿನಲ್ಲಿ ಡಾಕ್ಟರೇಟ್ ಪಡೆದ ಕನ್ನಡ ನಟಿ ರೇಖಾ ದಾಸ್
Recommended Video
ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿ ರೇಖಾ ದಾಸ್ ಅವರಿಗೆ ತಮಿಳು ವಿಶ್ವವಿದ್ಯಾಲಯವೊಂದು ಡಾಕ್ಟರೇಟ್ ನೀಡಿ ಗೌರವಿಸಿದೆ. ಸುಮಾರು ಮೂರು ದಶಕಗಳಿಂದ ಬಣ್ಣದ ಜಗತ್ತಿನಲ್ಲಿ ತೊಡಗಿಕೊಂಡಿರುವ ರೇಖಾ ದಾಸ್ ಅವರ ಸೇವೆಯನ್ನ ಗುರುತಿಸಿ ಈ ಗೌರವ ನೀಡಲಾಗಿದೆ.
ಕಿರುತೆರೆಯಲ್ಲೂ ಹಲವು ಧಾರಾವಾಹಿ ಮಾಡಿರುವ ರೇಖಾ ದಾಸ್ ಸುಮಾರು 500ಕ್ಕೂ ಅಧಿಕ ಸಿನಿಮಾ ಮಾಡಿದ್ದಾರೆ. ವಿಶೇಷ ಅಂದ್ರೆ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರೊಂದಿಗೆ ನೂರು ಸಿನಿಮಾ ಮಾಡಿರುವ ಖ್ಯಾತಿ ಹೊಂದಿದ್ದಾರೆ ರೇಖಾ ದಾಸ್.
ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರನ್ನ ಮದುವೆ ಆಗಿದ್ದ ರೇಖಾ ಅವರು ಕಾರಣಾಂತರಗಳಿಂದ ದೂರುವಾದರು. ಇವರಿಗೆ ಶ್ರಾವ್ಯ ರಾವ್ ಎಂಬ ಮಗಳು ಕೂಡ ಇದ್ದಾರೆ. ಈಕೆಯೂ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಮೂಲತಃ ನೇಪಾಳದವರಾಗಿದ್ದ ರೇಖಾ ದಾಸ್, ಕರ್ನಾಟಕದಲ್ಲೇ ನೆಲೆಸಿದ್ದಾರೆ. ಕನ್ನಡ ಕಲಿತು, ಕನ್ನಡ ಸಿನಿಮಾ, ನಾಟಕ, ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. 14ನೇ ವಯಸ್ಸಿನಲ್ಲೇ ನಟನೆ ಆರಂಭಿಸಿದ ರೇಖಾ ಅನೇಕ ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ.
ಗೋಪಿಕೃಷ್ಣ, ಮಾಲಾಶ್ರೀ ಮಾಮಾಶ್ರೀ, ಕರ್ಫುರದ ಗೊಂಬೆ, ಅಮ್ಮವ್ರ ಗಂಡ, ಮಾಂಗಲ್ಯಂ ತಂತು ನಾನೇನಾ, ಫ್ರೆಂಡ್ಸ್, ಸಿಂಹಾದ್ರಿಯ ಸಿಂಹ ಸೇರಿದಂತೆ ಅನೇಕ ಸಿನಿಮಾ ಮಾಡಿದ್ದಾರೆ. ವರ್ಲ್ಡ್ ತಮಿಳು ಕ್ಲಾಸಿಕಲ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.


Click it and Unblock the Notifications











