»   » ರಿಮೇಕ್ ಡಾರ್ಲಿಂಗ್ಸ್ ಆದ ಕಸ್ತೂರಿ ಕನ್ನಡಿಗರು

ರಿಮೇಕ್ ಡಾರ್ಲಿಂಗ್ಸ್ ಆದ ಕಸ್ತೂರಿ ಕನ್ನಡಿಗರು

Posted By:
Subscribe to Filmibeat Kannada
Puneeth, Yogesh in Hudugaru Movie
ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಡ ಆದರೆ, ರಿಮೇಕ್ ಬೇಕು. ಕನ್ನಡ ಸಿನಿಮಾ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ತಾಕತ್ತಿಲ್ಲ. ವಿತರಕರ ತಾಳಕ್ಕೆ ತಕ್ಕಂತೆ ನಿರ್ಮಾಪಕರು, ನಿರ್ಮಾಪಕರ ರಾಗಕ್ಕೆ ತಕ್ಕಂತೆ ನಿರ್ದೇಶಕರು, ನಿರ್ದೇಶಕರ ಮಾತಿಗೆ ತಕ್ಕಂತೆ ನಟ ನಟಿಯರು ಕುಣಿಯುತ್ತಿದ್ದಾರೆ.ಈ FOOD Chain ಕಟ್ ಮಾಡೋಕೆ ಆಗೋಲ್ಲ.

ಕನ್ನಡ ಚಿತ್ರರಂಗದಲ್ಲಿ ಒಂದು ಕೆಟ್ಟ ಚಾಳಿ ಇದೆ. ರಿಮೇಕ್ ಮಾಡಿದರೂ ಮಾಡಿಲ್ಲ. ನಾವು ಪ್ರಭಾವಿತರಾದೆವು ಎಂದು ಹೇಳಿಕೊಂಡು ತಿರುಗುತ್ತಾರೆ. ಇದು ಚಿತ್ರಕಥೆ, ಸನ್ನಿವೇಶ ಮಾತ್ರವಲ್ಲ. ಹಾಡು, ಹಿನ್ನೆಲೆ ಸಂಗೀತಕ್ಕೂ ಅನ್ವಯಿಸುತ್ತದೆ.

ಸ್ಫೂರ್ತಿ ಪಡೆಯುವುದು ತಪ್ಪಲ್ಲ ಆದರೆ, ಮೂಲ ಕಥೆಗಾರ, ಸಂಗೀತಗಾರರಿಗೆ ಮನ್ನಣೆ ಕೊಡಿ. ಏನು ತಿಳಿಯದ ಅಮಾಯಕ ಪ್ರೇಕ್ಷಕರ ಮುಂದೆ ಪೋಸ್ ಕೊಡುವುದನ್ನು ಬಿಡಿ.

2011 ರಲ್ಲಿ ಅತಿಹೆಚ್ಚು ಗಳಿಕೆ ಪಡೆದು ಬಾಕ್ಸಾಫೀಸ್ ನಲ್ಲಿ ಹಿಟ್ ಎನಿಸಿದ ಚಿತ್ರಗಳ ಪಟ್ಟಿಯಲ್ಲಿ ಬರೀ ರಿಮೇಕ್ ಚಿತ್ರಗಳದ್ದೇ ದರ್ಬಾರು. ಪಟ್ಟಿ ನಿಮ್ಮ ಮುಂದಿದೆ ನೋಡಿಕೊಳ್ಳಿ...

ಹುಡುಗರು, ಕೆಂಪೇಗೌಡ, ಕಿರಾತಕ ಯಶಸ್ಸು ಗಳಿಸಿದ ರಿಮೇಕ್ ಚಿತ್ರಗಳಾಗಿದೆ. ಹೀಗಿದ್ದಾಗ ಕನ್ನಡ ಕಾದಂಬರಿ ಓದಿ ಚಿತ್ರ ಮಾಡುವುದು ಯಾರಿಗೆ ಬೇಕು. ಒಂದಿಪ್ಪತ್ತು ರು ನಲ್ಲಿ ಸಿಗುವ ಸಿಡಿ ಸಾಕು.

ಡಬ್ಬಿಂಗ್ ಬೇಡ ಎನ್ನುವ ರಿಮೇಕ್ ರಾಜ ಎಸ್ ನಾರಾಯಣ್ ಅವರ ನಿರ್ದೇಶನದ 'ಶೈಲೂ' ಚಿತ್ರ ತಮಿಳಿನ 'ಮೈನಾ' ರಿಮೇಕ್.

ಸೂರಿ-ಪುನೀತ್ ರಾಜ್ ಕಾಂಬಿನೇಷನ್ ನ ಜಾಕಿ ಚಿತ್ರ ಹಲವಾರು ಹಾಲಿವುಡ್ ಚಿತ್ರಗಳಿಂದ ಸ್ಪೂರ್ತಿ ಪಡೆದಿದ್ದು, ಮುಖ್ಯವಾಗಿ ದಿ ಟ್ರೇಡ್ ಚಿತ್ರದ ಆಧಾರವಾಗಿತ್ತು.

ದರ್ಶನ್ ತೂಗುದೀಪ ಅವರ ಈವರೆಗಿನ ಯಶಸ್ವಿ ಚಿತ್ರ ಸಾರಥಿ ಕಥೆ ದಿ ಲಯನ್ ಕಿಂಗ್ಸ್ ನಿಂದ ಕದ್ದಿದ್ದು(ಸ್ಸಾರಿ ಸ್ಪೂರ್ತಿ ಪಡೆದಿದ್ದು)

ಹೀಗೆ ಹೇಳುತ್ತಾ ಹೋದರೆ ಟ್ರಕ್, ಫೋನ್ ಬೂತ್ ಎಂಬ ಕೊರಿಯನ್ ಚಿತ್ರ, ಜನಪ್ರಿಯವಾಗಿರುವ ಗೋಸ್ಟ್, ಸೆರೆಂಡಿಪಿಟಿ, ಶಟರ್ ಐಲ್ಯಾಂಡ್(ಆರಕ್ಷಕ),ಟೇಕನ್, ಸಿಟಿ ಆಫ್ ಗಾಡ್, ಬ್ಲಡ್ ಡೈಮಂಡ್, ವಾಟ್ ವುಮೆನ್ ವಾಂಟ್, ದಿ ಗಲ್ಸ್ ನೆಸ್ಟ್ ಡೋರ್, ಡಾಗ್ ಬೈಟ್ ಡಾಗ್, ಅಲೋನ್, ಅವರ್ ಹಾಸ್ಪಿಟಾಲಿಟಿ, ಬಿಯಾಂಡ್ ದಿ ಕ್ಲೌಡ್ಸ್,ಮೈ ವೈಫ್ ಈಸ್ ಆನ್ ಆಕ್ಟ್ರೆಸ್ ...ಇತ್ಯಾದಿ ಹಾಲಿವುಡ್ ಚಿತ್ರಗಳನ್ನು ನೋಡುತ್ತಿರುವ ಕನ್ನಡದ ನಿರ್ದೇಶಕ, ನಿರ್ಮಾಪಕ, ಕಥೆಗಾರರಿಗೆ ಹ್ಯಾಟ್ಸ್ ಆಫ್..ಹೀಗೆ ಕಳ್ಳತನ ಮುಂದುವರೆಸಿ...

ತೆಲುಗು, ತಮಿಳಿನಿಂದ ಭಟ್ಟಿ ಇಳಿಸಿದ ಪಟ್ಟಿ ಅವಶ್ಯಕತೆ ಇಲ್ಲ ಎನ್ನಿಸುತ್ತದೆ. ಆದರೂ 2011ರಲ್ಲಿ ಬಿಡುಗಡೆಗೊಂಡ ಚಿತ್ರಗಳ ಮಾಹಿತಿ ಆಧಾರಿಸಿದರೆ,

* ಕಂಠೀರವ: ಸಿಂಹಾದ್ರಿ (ತೆಲುಗು)
* ಮನಸಿನ ಮಾತು: ರೋಜ ಕೂಟಂ (ತಮಿಳು)
* ಕಳ್ ಮಂಜ: ಛಾತಿಕ್ಕಥ ಚಾಂತು (ಮಲೆಯಾಳಂ)
* ಕೆಂಪೇಗೌಡ : ಸಿಂಗಂ (ತಮಿಳು)
* ಜರ್ನಿ: ರೋಡ್ (ಹಿಂದಿ)
* ದಂಡಂ ದಶಗುಣಂ: ಕಾಕ್ಕಾ ಕಾಕ್ಕಾ (ತಮಿಳು)
* ಡಬ್ಬಲ್ ಡೆಕ್ಕರ್: ಸ್ಯಾಂಡ್ ವಿಚ್ (ಹಿಂದಿ)
* ಧೂಳ್: ತಿರುವಿಲೈಯಾಡಲ್ ಆರಂಭಂ (ತಮಿಳು)
* ಹೋರಿ: ಮೀಸಾ ಮಾಧವನ್ (ಮಲೆಯಾಳಂ)
* ಹುಡುಗರು: ನಾಡೋಡಿಗಳ್ (ತಮಿಳು)
* ಮಲ್ಲಿಕಾರ್ಜುನ: ಥವಸಿ (ತಮಿಳು)
* ಕಿರಾತಕ: ಕಳಾವಣಿ (ತಮಿಳು)
* ಜಾಲಿ ಬಾಯ್: ಪಥಿನಾರು (ತಮಿಳು)
* ಶ್ರೀಮತಿ: ಐತರಾಜ್ (ಹಿಂದಿ)
* ಮಿ. ಡೂಪ್ಲಿಕೇಟ್: ಮಿನ್ನಾಲೆ (ತಮಿಳು)
* ಭದ್ರ: ರಣಂ (ತೆಲುಗು)
* ಕಳ್ಳ ಮಳ್ಳ ಸುಳ್ಳ: ನೋ ಎಂಟ್ರಿ (ಹಿಂದಿ)
* ಮರ್ಯಾದೆ ರಾಮಣ್ಣ: ಮರ್ಯಾದಾ ರಾಮಣ್ಣ (ತೆಲುಗು)
* ಪುತ್ರ: ಎನ್ ಮಗನ್ (ತಮಿಳು)
* ಬಾಡಿಗಾರ್ಡ್ : ಬಾಡಿಗಾರ್ಡ್ (ಹಲವು ಭಾಷೆ)
* ಶೈಲೂ : ಮೈನಾ (ತಮಿಳು)

ಕಾದಂಬರಿ ಆಧಾರಿತ ಚಿತ್ರಗಳು ಕೇವಲ ಎರಡು: ಮಾಗಿಯ ಕಾಲ: ಈಶ್ವರ ಚಂದ್ರ ಅವರ ಮಾಗಿಯ ಕಾಲ ಇನ್ನೊಂದು ಬೆಟ್ಟದ ಜೀವ: ಕೆ ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿ.

2011ರಲ್ಲಿ ಟಾಪ್ ಗಳಿಕೆ ಪಟ್ಟಿಯಲ್ಲಿ ರಿಮೇಕ್ ಆಗಿ ಹಿಟ್ ಆದ ಚಿತ್ರಗಳ ಸಂಖ್ಯೆ 5. ಸಾರಥಿ, ಹುಡುಗರು, ಕೆಂಪೇಗೌಡ, ಓನ್ಲಿ ವಿಷ್ಣುವರ್ಧನ, ಕಿರಾತಕ, ಉಳಿದಂತೆ ಪರಮಾತ್ಮ, ಸಂಜು ವೆಡ್ಸ್ ಗೀತಾ, ಲೈಫು ಇಷ್ಟೇನೆ, ಒಲವೇ ಮಂದಾರ ಸಕ್ಸಸ್ ಪಟ್ಟಿಯಲ್ಲಿದೆ.

ಕನ್ನಡದ ಚಿತ್ರರಂಗದ ಹಿರಿಯರಿಗೆ ಮನವಿ: ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ತರಲು ಸಾಧ್ಯವಿಲ್ಲದಿದ್ದರೆ,ಸ್ವಂತವಾಗಿ ಚಿತ್ರ ತೆಗೆಯಲು ಆಗದಿದ್ದರೆ, ರಿಮೇಕ್ ಮಾಡುತ್ತಾ ಹಳಸಿದ ಚಿತ್ರಾನ್ನಕ್ಕೆ ಸ್ಪೆಷಲ್ ಒಗ್ಗರಣೆ ಹಾಕಿ ಉಣಬಡಿಸುವುದನ್ನು ನಿಲ್ಲಿಸಿ. ಜೊತೆ ಮೂಲ ಕಥೆಗಾರರಿಗೆ, ಒಂದಿಷ್ಟು ಗೌರವ ಕೊಡಿ. ಅಪ್ಪಟ ಕನ್ನಡ ಪ್ರೇಕ್ಷಕ ನಿದ್ರಿಸುತ್ತಿದ್ದಾನೆ. ಸಾಧ್ಯವಾದರೆ ಎಬ್ಬಿಸಿ, ಆದರೆ, ಅದಕ್ಕೂ ಮೊದಲು ರಿಮೇಕ್ ಆರ್ಭಟ ನಿಲ್ಲಿಸಿ...

English summary
After checking the list of Kannada films produced in the Kannada film industry 2011. One can find only remake movies become much successful. KFI is opposing dubbing but depends heavily on remake or remixed version movies which they defend by saying that we only get inspiration won't steal stories.
Please Wait while comments are loading...