For Quick Alerts
  ALLOW NOTIFICATIONS  
  For Daily Alerts

  ದಾಖಲೆ ಬೆಲೆಗೆ 'ರೇಮೊ' ಚಿತ್ರದ ಆಡಿಯೋ ಹಕ್ಕು ಮಾರಾಟ

  |

  'ನಟಸಾರ್ವಭೌಮ' ಸಿನಿಮಾ ಬಳಿಕ ನಿರ್ದೇಶಕ ಪವನ್ ಒಡೆಯರ್ ರೇಮೊ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಭರದಿಂದ ಶೂಟಿಂಗ್ ಮಾಡುತ್ತಿರುವ ರೆಮೋ ಚಿತ್ರತಂಡ ಅದ್ಧೂರಿಯಾಗಿ ತಯಾರಾಗುತ್ತಿದೆ ಎಂಬುದು ವಿಶೇಷ.

  ಶೂಟಿಂಗ್ ಹಂತದಲ್ಲಿರುವಾಗಲೇ ರೇಮೊ ಚಿತ್ರದ ಆಡಿಯೋ ಹಕ್ಕು ಸೇಲ್ ಆಗಿದೆ. ಆನಂದ್ ಆಡಿಯೋ ಕಂಪನಿ ದುಬಾರಿ ಬೆಲೆ ನೀಡಿ "ರೇಮೊ" ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ. ದುಡ್ಡು ಎಷ್ಟು ಎಂಬುದರ ಮಾಹಿತಿ ಬಿಟ್ಟುಕೊಡದ ಚಿತ್ರತಂಡ ಒಳ್ಳೆಯ ಬೆಲೆ ಎಂದಷ್ಟೆ ಹೇಳಿದ್ದಾರೆ.

  'ರೆಮೋ' ಚಿತ್ರಕ್ಕಾಗಿ ನಿರ್ಮಿತವಾಗಿದೆ 1 ಕೋಟಿ ವೆಚ್ಚದ ದುಬಾರಿ ಸೆಟ್'ರೆಮೋ' ಚಿತ್ರಕ್ಕಾಗಿ ನಿರ್ಮಿತವಾಗಿದೆ 1 ಕೋಟಿ ವೆಚ್ಚದ ದುಬಾರಿ ಸೆಟ್

  ಮ್ಯಾಜಿಕಲ್ ಕಂಪೋಸರ್ ಎನಿಸಿಕೊಂಡಿರುವ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಪವನ್ ವಡೆಯರ್ ನಿರ್ದೇಶನದ ಚಿತ್ರಕ್ಕೆ ಮೊದಲ ಸಲ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಈ ಕಾಂಬಿನೇಷನ್ ಮೇಲೆ ಹೆಚ್ಚು ನಿರೀಕ್ಷೆ ಮೂಡಿಸಿದೆ.

  ಅಂದ್ಹಾಗೆ, ರೇಮೊ ಹಾಡುಗಳನ್ನ ಆನಂದ್ ಆಡಿಯೋ ಕಂಪನಿ ಮಾಲೀಕರಾದ ಶ್ಯಾಮ್ ಅವರು ಕೇಳಿ ಬಹಳ ಇಷ್ಟ ಪಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಸಂಗೀತ ಪ್ರಾಧಾನ್ಯ ಇರುವ ಚಿತ್ರಕ್ಕೆ ಇಶಾನ್ ಹಾಗೂ ಆಶಿಕಾ ರಂಗನಾಥ್ ಮುಖ್ಯ ಭೂಮಿಕೆ ಯಲ್ಲಿ ಅಭಿನಯಿಸಿದ್ದಾರೆ. 'ದಿ ವಿಲನ್' ಚಿತ್ರಕ್ಕೆ ಬಂಡವಾಳ ಹಾಕಿದ್ದ ಸಿಆರ್ ಮನೋಹರ್ ಈ ಚಿತ್ರವನ್ನ ಜಯಾಧಿತ್ಯ ನಿರ್ಮಾಣ ಸಂಸ್ಥೆಯ ಅಡಿ ನಿರ್ಮಿಸುತ್ತಿದ್ದಾರೆ.

  English summary
  Ishaan and ashika ranganath starrer Remo movie audio rights sold out for huge price. the movie directed by pavan wadeyar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X