»   » 'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ದರ್ಶನ್ ಪತ್ನಿಯಾದ ನಟಿ ರಮ್ಯಾ!

'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ದರ್ಶನ್ ಪತ್ನಿಯಾದ ನಟಿ ರಮ್ಯಾ!

Posted By:
Subscribe to Filmibeat Kannada
Kurukshetra movie Duryodhana Darshan's wife role will be played by Ramya Nambeesan|Filmibeat Kannada

ಒಂದು ಕಡೆ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಅದ್ಧೂರಿಯಾಗಿ ಸಾಗುತ್ತಿದೆ. ಇನ್ನೊಂದು ಕಡೆ ಚಿತ್ರದ ಪಾತ್ರಗಳಿಗೆ ಕಲಾವಿದರ ಆಯ್ಕೆ ಕೂಡ ನಡೆಯುತ್ತಿದೆ. ಸದ್ಯ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಒಂದಾದ ಭಾನುಮತಿ ಪಾತ್ರಕ್ಕೆ ಚಿತ್ರತಂಡ ಒಬ್ಬ ನಟಿಯನ್ನು ಆಯ್ಕೆ ಮಾಡಿದೆ.

ಈಗಾಗಲೇ 'ಕುರುಕ್ಷೇತ್ರ' ಸಿನಿಮಾದ ಬಹುತೇಕ ಎಲ್ಲ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಅದೇ ರೀತಿ ಈ ಹಿಂದೆ ಬಹುಭಾಷಾ ನಟಿ ರೆಜಿನಾ ಭಾನುಮತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇತ್ತು. ಆದರೆ ಈಗ ಭಾನುಮತಿ ಪಾತ್ರಕ್ಕೆ ಇನ್ನೊಬ್ಬ ಪ್ರತಿಭಾವಂತ ನಟಿಯನ್ನು ಚಿತ್ರತಂಡ ಫಿಕ್ಸ್ ಮಾಡಿದೆ. ಮುಂದೆ ಓದಿ...

ನಟಿ ರಮ್ಯಾ ಆಯ್ಕೆ

'ಕುರುಕ್ಷೇತ್ರ' ಚಿತ್ರದ ಭಾನುಮತಿ ಪಾತ್ರದಲ್ಲಿ ಮಲೆಯಾಳಂ ಚಿತ್ರರಂಗದ ಪ್ರತಿಭಾವಂತ ನಟಿ ರಮ್ಯಾ ನಂಬೀಸನ್ ನಟಿಸಲಿದ್ದಾರೆ.

ಕನ್ನಡದಲ್ಲಿ ಎರಡನೇ ಚಿತ್ರ

ರಮ್ಯಾ ಈ ಹಿಂದೆ ಕನ್ನಡದಲ್ಲಿ ಗಣೇಶ್ ಜೊತೆ 'ಸ್ಟೈಲ್ ಕಿಂಗ್' ಚಿತ್ರದಲ್ಲಿ ನಟಿಸಿದ್ದು, 'ಕುರುಕ್ಷೇತ್ರ' ಅವರ ಎರಡನೇ ಕನ್ನಡ ಸಿನಿಮಾವಾಗಿದೆ.

ರೆಜಿನಾ ಬದಲು ರಮ್ಯಾ ನಟನೆ

ಈ ಹಿಂದೆ 'ಕುರುಕ್ಷೇತ್ರ' ಚಿತ್ರದ ಭಾನುಮತಿ ಪಾತ್ರದಲ್ಲಿ ರೆಜಿನಾ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡಿತ್ತು. ಆದರೆ ಈಗ ರೆಜಿನಾ ಬದಲು ರಮ್ಯಾ ಈ ಪಾತ್ರಕ್ಕೆ ಫೈನಲ್ ಆಗಿದ್ದಾರೆ.

ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ 'ಗದೆ' ಎಷ್ಟು ಕೆಜಿ ಇದೆ?

ದರ್ಶನ್ ಜೊತೆ ರಮ್ಯಾ

ಭಾನುಮತಿ ಪಾತ್ರ ಇಡೀ 'ಕುರುಕ್ಷೇತ್ರ'ದಲ್ಲಿ ಬಹು ಮುಖ್ಯವಾದ ಪಾತ್ರವಾಗಿದೆ. ದುರ್ಯೋಧನನಾಗಿರುವ ದರ್ಶನ್ ಹೆಂಡತಿಯ ಪಾತ್ರದಲ್ಲಿ ರೆಮ್ಯಾ ನಟಿಸುವ ಅವಕಾಶ ಪಡೆದಿದ್ದಾರೆ.

'ಕುರುಕ್ಷೇತ್ರ'ದಲ್ಲಿ ದರ್ಶನ್ ಗೆ ನಾಯಕಿಯಾಗುವ ಚಾನ್ಸ್ ಯಾರಿಗೆ ಸಿಗುತ್ತೆ?

ಅಕ್ಟೋಬರ್ ನಲ್ಲಿ ಶೂಟಿಂಗ್

ಅಕ್ಟೋಬರ್ ಮೊದಲ ವಾರದಲ್ಲಿ ಭಾನುಮತಿ ಪಾತ್ರದ ಚಿತ್ರೀಕರಣ ಶುರುವಾಗಲಿದೆಯಂತೆ.

English summary
Malayalam Actress Remya Nambeesan will play Bhanumati character in Darshan's 'Kurukshetra' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada