»   » ಪವರ್ ಸ್ಟಾರ್ ಮಾಜಿ ಪತ್ನಿ ಪವರ್ ಫುಲ್ ಪ್ರತಿಕ್ರಿಯೆ

ಪವರ್ ಸ್ಟಾರ್ ಮಾಜಿ ಪತ್ನಿ ಪವರ್ ಫುಲ್ ಪ್ರತಿಕ್ರಿಯೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಪವನ್ ಅವರ ಅಭಿಮಾನಿಗಳ ಕಾಟವನ್ನು ಸಹಿಸಿಕೊಂಡು ತಕ್ಕ ಉತ್ತರ ನೀಡಿದ್ದರು. ಈಗ ರೇಣು ಅವರು ಮತ್ತೆ ಲವ್ವಲ್ಲಿ ಬಿದ್ದಿದ್ದಾರೆ, ಮದುವೆಯಾಗುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿಸಿದವರ ಮುಂದೆ ನಿಂತು ಸರಿ ಪ್ರತಿಕ್ರಿಯೆ ನೀಡಿದ್ದಾರೆ.

ರೇಣು ಅವರೇ ನೀವು ಮತ್ತೊಮ್ಮೆ ಪವನ್ ಕಲ್ಯಾಣ್ ಬಳಿ ಹೋಗಿ ನಿಮ್ಮಿಬ್ಬರ ಮಕ್ಕಳನ್ನು ನೋಡಿಕೊಳ್ಳಿ ಎಂದು ಪವನ್ ಕಲ್ಯಾಣ್ ಅಭಿಮಾನಿಗಳು ರೇಣು ಅವರನ್ನು ಪೀಡಿಸತೊಡಗಿದ್ದರು. ಇದಕ್ಕೆ ಉತ್ತರಿಸಿದ್ದ ರೇಣು, ಅಖಿರಾ, ಆದ್ಯಾ ಇಬ್ಬರು ಕಲ್ಯಾಣ್ ಮಕ್ಕಳಲ್ಲ, ನನ್ನ ಮಕ್ಕಳು ಎಂದಿದ್ದರು.

'Love someone so much that you dissolve into them and then there is no you and me left ' ಎಂದು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದ ರೇಣು ಅವರು ಈಗ 'ಕಲ್ಯಾಣ' ಕಿರಿಕ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಾನು ಬೇರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಹಾಗೂ ಮದುವೆಯಾಗುತ್ತಿದ್ದೇನೆ ಎಂದು ಹಬ್ಬಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ನಾನು ಯಾರನ್ನು ಪ್ರೀತಿಸುತ್ತಿಲ್ಲ. ಗಾಸಿಪ್ ಸೆಕ್ಷನ್ ಬದಲಾಯಿಸಿಕೊಳ್ಳಿ ಎಂದಿದ್ದಾರೆ.

ಪುಣೆ ಮೂಲದ ರೇಣು ದೇಸಾಯಿ

ಪುಣೆ ಮೂಲದ ರೇಣು ದೇಸಾಯಿ ಅವರು ಮಾಡೆಲ್, ನಟಿ, ವಸ್ತ್ರವಿನ್ಯಾಸಕಿ, ನಿರ್ದೇಶಕಿ, ನಿರ್ಮಾಪಕಿಯಾಗಿದ್ದಾರೆ. ಆಖಿರಾ ನಂದನ್ ಕೊನಿಡೆಲಾ, ಆದ್ಯಾ ಕೊನಿಡೆಲಾ ಇಬ್ಬರು ಮಕ್ಕಳು

ರೇಣು ದೇಸಾಯಿ ಟ್ವೀಟ್ ಮಾಡಿದ್ದು ಹೀಗೆ

ರೇಣು ದೇಸಾಯಿ ಟ್ವೀಟ್ ಮಾಡಿ ಗಾಸಿಪ್ ಹರಡಿಸಬೇಡಿ ಎಂದಿದ್ದಾರೆ.

ಗಾಸಿಪ್ ಹಬ್ಬಲು ಕಾರಣವಾದ ಟ್ವೀಟ್

ಗಾಸಿಪ್ ಹಬ್ಬಲು ಕಾರಣವಾದ ಟ್ವೀಟ್ ಅರ್ಥವಾಗದೆ ಏನೋ ಸುದ್ದಿ ಹುಟ್ಟಿಸಿದ ಕೆಲ ಪತ್ರಿಕೆಗಳು

ಕೆಲವರು ರೇಣು ಪರ ಟ್ವೀಟ್ ಮಾಡಿದ್ದಾರೆ

ಕೆಲವರು ರೇಣು ಪರ ಟ್ವೀಟ್ ಮಾಡಿ, ಪವನ್ ಕಲ್ಯಾಣ್ ಮೂರನೇ ಮದುವೆಯಾಗಬಹುದಾದರೆ, ರೇಣು ಅವರು ಎರಡನೇ ಮದುವೆಯಾದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಮಕ್ಕಳ ಬಗ್ಗೆ ಫ್ಯಾನ್ಸ್ ಟೀಕೆಗೆ ಉತ್ತರ

ಇಬ್ಬರು ಅಖಿರ ಹಾಗೂ ಆದ್ಯಾ ನನ್ನ ಮಕ್ಕಳೆ ಎಂದಿದ್ದ ರೇಣು

ಕಾವ್ಯ ಕವನ ಸಾಹಿತ್ಯ ಪ್ರೇಮಿ ರೇಣು

ಹಿಂದಿ, ಇಂಗ್ಲೀಷ್ ಉತ್ತಮ ಸಾಹಿತ್ಯದ ಸಾಲುಗಳನ್ನು ಟ್ವೀಟ್ ಮಾಡುವ ರೇಣು ಇತ್ತೀಚೆಗೆ ಹಂಚಿಕೊಂಡ ಸಾಲುಗಳಿವು. ಇದಕ್ಕೂ ಮುನ್ನ ಡಾಂಟೆ ಕೃತಿಯ ಸಾಲುಗಳನ್ನು ಉಲ್ಲೇಖಿಸಿದ್ದರು.

English summary
Only a few days back, Renu Desai was in news for reacting straight to the some silly Pawan Kalyan fans, who tried to bully her. She gave it back for some fans, who repeatedly taunted her to go back to Pawan Kalyan atleast for their kids.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada