»   » ಓದುಗರ ಅಭಿಮತ: ಸಂಗೊಳ್ಳಿ ರಾಯಣ್ಣ 2012ರ ನಂ.1 ಚಿತ್ರ

ಓದುಗರ ಅಭಿಮತ: ಸಂಗೊಳ್ಳಿ ರಾಯಣ್ಣ 2012ರ ನಂ.1 ಚಿತ್ರ

Posted By:
Subscribe to Filmibeat Kannada

2012ರಲ್ಲಿ ಕನ್ನಡ ಚಿತ್ರರಂಗ ಕಂಡ ಟಾಪ್ ಸೂಪರ್ ಹಿಟ್ ಚಿತ್ರಗಳ ರೇಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ನಂ.1 ಚಿತ್ರ ಎಂದು ಒನ್ ಇಂಡಿಯಾ ಕನ್ನಡದ ಓದುಗರು ತಮ್ಮ ಅಭಿಮತವನ್ನು ತಿಳಿಸಿದ್ದಾರೆ.

ಒನ್ ಇಂಡಿಯಾ ಓದುಗರಲ್ಲಿ ಸುಮಾರು 3,069 ಮಂದಿ ತಮ್ಮ ಅಮೂಲ್ಯ ಮತ ಚಲಾಯಿಸಿ ಸಂಗೊಳ್ಳಿ ರಾಯಣ್ಣನನ್ನು ಗೆಲ್ಲಿಸಿದ್ದಾರೆ. ಟಾಪ್ 10 ಚಿತ್ರಗಳ ಪೈಕಿ ಶೇ 48.9 ರಷ್ಟು ಮತಗಳು ರಾಯಣ್ಣನ ಪಾಲಾಗಿದ್ದು ವಿಶೇಷ.

ಉಳಿದಂತೆ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ದಂಡುಪಾಳ್ಯ ಕಟ್ಟ ಕಡೆಯ ಸ್ಥಾನ ಪಡೆದು ನಿರಾಶೆ ಮೂಡಿಸಿದೆ. ಹಾಸ್ಯ ಪ್ರಧಾನ ಚಿತ್ರ ಗೋವಿಂದಾಯ ನಮ: 8ನೇ ಸ್ಥಾನಕ್ಕೆ ಕುಸಿದಿದ್ದು ಅಚ್ಚರಿ ಎನ್ನಬಹುದು.

ಮಿಕ್ಕಂತೆ ಎಲ್ಲವೂ ಚಿತ್ರವೂ ನಿರೀಕ್ಷೆಯಂತೆ ಪ್ರೇಕ್ಷಕರ ವೋಟಿಂಗ್ ನಡೆದಿದೆ. ಅಪ್ಪು ಅಭಿನಯದ ಅಣ್ಣಾಬಾಂಡ್ ಹಿಂದಿಕ್ಕಿ ಕೊನೆ ಕ್ಷಣದಲ್ಲಿ ಧ್ರುವ ಸರ್ಜಾರ 'ಅದ್ದೂರಿ' ಎರಡನೇ ಸ್ಥಾನಕ್ಕೇರಿದ್ದು ಸಾಧನೆ.

ಎಂದಿನಂತೆ ಸ್ಲೈಡ್ ಗಳಲ್ಲಿ ಚಿತ್ರಗಳು ಪಡೆದ ಮತಗಳ ವಿವರಗಳು ನಿಮಗೆ ಸಿಗುತ್ತದೆ. ಸಂಗೊಳ್ಳಿರಾಯಣ್ಣ ಸೇರಿದಂತೆ ಎಲ್ಲಾ ಚಿತ್ರಗಳಿಗೆ ವೋಟ್ ಮಾಡಿದ ಓದುಗರಿಗೆ ನಮ್ಮ ತಂಡದಿಂದ ಧನ್ಯವಾದಗಳು

ಸಂಗೊಳ್ಳಿ ರಾಯಣ್ಣ

1502 ಮತಗಳು ಶೇ 48.9 ಮತ ಗಳಿಕೆ
ಕನ್ನಡ ಪ್ರೇಕ್ಷಕರಲ್ಲಿ ಅಭಿಮಾನದ ಕಿಚ್ಚು ಹಬ್ಬಿಸಿದ ಭಾರಿ ಬಜೆಟ್ ಚಿತ್ರ. ಹಾಡಿನ ವಿವಾದ ಬಿಟ್ಟರೆ, ಕನ್ನಡ ಮಟ್ಟಿಗೆ ಉತ್ತಮ ಪ್ರಯತ್ನ. ನಿರ್ಮಾಪಕ ಅನಂದ್ ಅಪ್ಪುಗೊಳ್ ಹಾಗೂ ನಾಗಣ್ಣ ಅವರ ಪರಿಶ್ರಮಕ್ಕೆ ಪ್ರೇಕ್ಷಕ ತುಂಬು ಮನಸ್ಸಿನಿಂದ ಹಾರೈಸಿದ.

ಅದ್ದೂರಿ

348 ಶೇ 11.3 ಮತ ಗಳಿಕೆ
ಅರ್ಜುನ್ ಸರ್ಜಾ ಅವರ ಅಳಿಯ ಧ್ರುವ ಸರ್ಜಾ ಭರ್ಜರಿ ಎಂಟ್ರಿ, ಫೈಟ್, ಸಾಂಗ್ಸ್ ಹಾಗೂ ರಾಧಿಕಾ ಪಂಡಿತ್ ಅಭಿನಯ. ಅರ್ಜುನ್ ಅವರ ನವಿರಾದ ನಿರೂಪಣೆ ಹದಿಹರೆಯದವರ ಮೆಚ್ಚುಗೆ ಪಡೆಯಿತು.

ಅಣ್ಣಾಬಾಂಡ್

294 ಶೇ 9.6 ಮತ ಗಳಿಕೆ
ಪ್ರಚಾರ ಸಿಕ್ಕಷ್ಟು ಖುಷಿಕೊಡದಿದ್ದರೂ ಅಪ್ಪು ಪವರ್ ಫುಲ್ ಫೈಟಿಂಗ್, ಹಾಡುಗಳು, ಡ್ಯಾನ್ಸ್ , ಸೂರಿ ನಿರ್ದೇಶನಕ್ಕೆ ಪ್ರೇಕ್ಷಕ ಫುಲ್ ಮಾರ್ಕ್ಸ್ ಕೊಟ್ಟಿಬಿಟ್ಟ. ಪ್ರಿಯಾಮಣಿ, ನಿಧಿ ಸುಬ್ಬಯ್ಯ ಪಾತ್ರ ವೇಸ್ಟ್ ಆಗಿರಲಿಲ್ಲ.

ಡ್ರಾಮಾ

213 ಶೇ 6.9 ಮತ ಗಳಿಕೆ
ನನ್ನ ಚಿತ್ರದಲ್ಲಿ ಕಥೆ ಹುಡುಕಬೇಡಿ. ಸುಮ್ನೆ ಎಂಜಾಯ್ ಮಾಡಿ ಎಂದು ಯೋಗರಾಜ್ ಭಟ್ಟರು ಹೇಳಿದ ಮೇಲೆ, ಕಥೆ ಹುಡುಕದಿದ್ದರೆ ಕಾಸಿಗೆ ತಕ್ಕ ಕಜ್ಜಾಯವಾಗಿ ಯಶ್ ರಾಧಿಕಾ ಹಾಗೂ ನೀನಾಸಂ ಸತೀಶ್ ಸಿಂಧು ಜೋಡಿಯ ಚಿತ್ರ ನೋಡಲಡ್ಡಿಯಿಲ್ಲ

ಸಿದ್ಲಿಂಗು

168 ಶೇ 5.5 ಮತ ಗಳಿಕೆ
ಧಾರಾವಾಹಿಯಲ್ಲಿ ಪಂಚಿಂಗ್ ಡೈಲಾಗ್ ಮೂಲಕ ಮನೆ ಮಾತಾಗಿದ್ದ ವಿಜಯ್ ಪ್ರಸಾದ್ ಅವರ ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಪಡೆದ ಚಿತ್ರ. ಯೋಗಿ ಹಾಗೂ ರಮ್ಯಾ ಅವರ ಬಾಯಲ್ಲಿ ಪಂಚಿಂಗ್ ಡೈಲಾಗ್ ಕೇಳಿ ಪ್ರೇಕ್ಷಕ ಮುಜುಗರದಿಂದಲೇ ಮೆಚ್ಚುಗೆ ಸೂಸಿಬಿಟ್ಟ.

ಎದೆಗಾರಿಕೆ

166 ಶೇ 5.4 ಮತ ಗಳಿಕೆ
ಸತ್ಯ ಕಥೆ ಆಧಾರಿಸಿದ ಚಿತ್ರಗಳನ್ನು ಸಮರ್ಪಕವಾಗಿ ತೆರೆಗೆ ತರುವಲ್ಲಿ ಮತ್ತೊಮ್ಮೆ ಅಗ್ನಿ ಶ್ರೀಧರ್ ತಂಡ ಯಶಸ್ವಿಯಾಗಿದೆ. ಆದಿತ್ಯಕ್ಕೆ ಉತ್ತಮ ಬ್ರೇಕ್ ನೀಡಿದ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ಲೇಪ ಸೇರಿದೆ. ಸುಮನಾ ಕಿತ್ತೂರು ನಿರ್ದೇಶನಕ್ಕೆ ಫುಲ್ ಮಾರ್ಕ್ಸ್

ಕಠಾರಿ ವೀರ ಸುರಸುಂದರಾಂಗಿ

166 ಶೇ 5.4 ಮತ ಗಳಿಕೆ
ವಿಭಿನ್ನ ಬಗೆಯ ಚಿತ್ರ, 3ಡಿ ಚಿತ್ರ ಎನ್ನುವ ಹೆಗ್ಗಳಿಕೆ ಜೊತೆಗೆ ಉಪೇಂದ್ರ ಹಾಗೂ ರಮ್ಯ ಅಭಿನಯ ಜನರನ್ನು ಥೇಟರ್ ಕಡೆಗೆ ಆಕರ್ಷಿಸಿಬಿಟ್ಟಿತು.

ಗೋವಿಂದಾಯ ನಮ:

110 ಶೇ 3.6 ಮತ ಗಳಿಕೆ
ಕಡಿಮೆ ಬಜೆಟ್ ನಲ್ಲಿ ಚಿತ್ರ ತೆಗೆದು ಸಿಂಪಲ್ ಕಥೆ ಇಟ್ಟುಕೊಂಡು ಭರ್ಜರಿ ಯಶಸ್ಸು ಗಳಿಸಿದ ಚಿತ್ರವಿದು. ಕೋಮಲ್ ಅವರ ಹಾಸ್ಯ ಕಂಡ್ರ ಎಲ್ಲರೂ ಪ್ಯಾರ್ ಗೆ ಆಗ್ಬುಟ್ಟೈತೆ ಎನ್ನದೆ ಇರಲು ಸಾಧ್ಯವಿಲ್ಲ. ನಾಯಕಿಯರ ಪೈಕಿ ಪರುಲ್ ಕನ್ನಡಕ್ಕೆ ಸಿಕ್ಕ ಹೊಸ ಆಮದು ಬೆಡಗಿ

ಚಿಂಗಾರಿ

58 ಶೇ 1.9 ಮತ ಗಳಿಕೆ
ಸಾರಥಿ ಯಶಸ್ಸಿನೊಂದಿಗೆ ಕಮ್ ಬ್ಯಾಕ್ ಮಾಡಿದ ಚಾಲೆಂಜಿಂಗ್ ಸ್ಟಾರ್ ಅವರಿಗೆ ಬೋನಸ್ ಆಗಿ ಯಶಸ್ಸು ತಂದು ಕೊಟ್ಟ ಚಿತ್ರವಿದು. ಡ್ಯಾನ್ಸ್ ಮಾಸ್ಟರ್ ಹರ್ಷ ನಿರ್ದೇಶನ, ಫ್ರಾನ್ಸ್ ನಲ್ಲಿ ಚಿತ್ರೀಕರಣ, ವಿಭಿನ್ನ ಕಥೆ ಜನಮೆಚ್ಚುಗೆ ಗಳಿಸಿತು.

ದಂಡು ಪಾಳ್ಯ

44 ಶೇ 1.4 ಮತ ಗಳಿಕೆ
ವಿವಾದದ ನಡುವೆಯೂ ಪೂಜಾಗಾಂಧಿ, ಮಕರಂದ್ ದೇಶಪಾಂಡೆ, ರವಿಶಂಕರ್, ರವಿಕಾಳೆ ಅಭಿನಯದ ಮೂಲಕ ನಿರ್ದೇಶಕ ಶ್ರೀನಿವಾಸ ರಾಜು ಅವರು ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಬಿಟ್ಟರು.

English summary
Here, result of the best Kannada movie of the year 2012 poll. Oneindia Kannada readers chosen Darshan's Sangolli Rayanna as the best movie of the year followed by Arjun's Adduri and Puneet's Anna Bond.
Please Wait while comments are loading...