ನಿಶ್ಚಿತಾರ್ಥ ಬಳಿಕ ಒಂದೇ ಮಾತಿನಲ್ಲೇ ಖುಷಿ ಹಂಚಿಕೊಂಡ ರೇವತಿ
Recommended Video
ನಟ ನಿಖಿಲ್ ಕುಮಾರ್ ನಿಶ್ಚಿತಾರ್ಥ ಕಾರ್ಯಕ್ರಮ ಇಂದು (ಫೆಬ್ರವರಿ 10) ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದ ಬಳಿಕ ಮೊದಲ ಬಾರಿಗೆ ನಿಖಿಲ್ ಭಾವಿ ಪತ್ನಿ ರೇವತಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
ಮಾಧ್ಯಮಗಳನ್ನು ಕಂಡು ನಾಚಿದ ರೇವತಿ, ನಿಖಿಲ್ ಬಗ್ಗೆಯ ಪ್ರಶ್ನೆಗಳಿಗೆ ''ಐ ಯಾಮ್ ಹ್ಯಾಪಿ'' ಎಂದಷ್ಟೇ ಹೇಳಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಕ್ಯಾಮರಾ ಮುಂದೆ ಮಾತನಾಡಲು ನಾಚಿಕೊಂಡ ರೇವತಿ ಒಂದೇ ಮಾತಿನಲ್ಲಿ ತಮ್ಮ ಮನಸ್ಸಿನ ಖುಷಿಯನ್ನು ಹೇಳಿಕೊಂಡರು.
ರೇವತಿ ನಾಚಿಕೆ ನೋಡಿದ ನಿಖಿಲ್ ತಾವೇ ಅವರ ಭಾವನೆಯನ್ನು ಹೇಳಲು ಶುರು ಮಾಡಿದರು. ಆಕೆಗೆ ತುಂಬ ಖುಷಿ ಆಗುತ್ತಿದೆ ಎಂದು ತಾವೇ ಮಾತು ಮುಂದುವರೆಸಿದರು.

''ನಾನು ಸಿನಿಮಾ ನಟ, ರಾಜಕೀಯ ವ್ಯಕ್ತಿ ಎಂದು ಅಲ್ಲದೆ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ನನ್ನನ್ನು ರೇವತಿ ಇಷ್ಟ ಪಡುತ್ತಾರೆ'' ಎಂದು ನಿಖಿಲ್ ಈ ಕ್ಷಣದಲ್ಲಿ ಮಾತನಾಡಿದರು.
ಅಂದಹಾಗೆ, ಇಂದಿನ ಕಾರ್ಯಕ್ರಮಕ್ಕೆ ರಾಜಕೀಯದ ಅನೇಕ ಹಾಗೂ ಸಿನಿಮಾ ರಂಗದ ಹಲವು ಗಣ್ಯರು ಸಾಕ್ಷಿಯಾಗಿದ್ದರು. ನಟ ಪುನೀತ್ ರಾಜ್ ಕುಮಾರ್ ನವ ಜೋಡಿಗೆ ಶುಭಾಶಯ ತಿಳಿಸಿದರು. ಏಪ್ರಿಲ್ ನಲ್ಲಿ ನಿಖಿಲ್ ಮತ್ತು ರೇವತಿ ಕಲ್ಯಾಣ ನಡೆಯಲಿದೆ.


Click it and Unblock the Notifications











