»   » ಗೌರಿ-ಗಣೇಶ ಹಬ್ಬಕ್ಕೆ ಶ್ರೀಮುರಳಿ ಕಡೆಯಿಂದ ಬಂದ ಸಿಹಿ ಸುದ್ದಿ

ಗೌರಿ-ಗಣೇಶ ಹಬ್ಬಕ್ಕೆ ಶ್ರೀಮುರಳಿ ಕಡೆಯಿಂದ ಬಂದ ಸಿಹಿ ಸುದ್ದಿ

Posted By:
Subscribe to Filmibeat Kannada

ಶ್ರೀಮುರಳಿ ಅಭಿಮಾನಿಗಳಿಗೆ ಗೌರಿ ಮತ್ತು ಗಣೇಶ ಹಬ್ಬದ ಸಡಗರ ಇನ್ನೂ ಹೆಚ್ಚು ಮಾಡುವಂತಹ ಸುದ್ದಿಯೊಂದು ಹೊರಬಿದ್ದಿದೆ.

'ಉಗ್ರಂ' ಮತ್ತು 'ರಥಾವರ' ಚಿತ್ರಗಳ ಸೂಪರ್ ಸಕ್ಸಸ್ ನಂತರ ಶ್ರೀಮುರಳಿ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್ ಗೆ ಭಾರಿ ಕುತೂಹಲ ಇದೆ. [ಬರ್ತಡೆ ಬಾಯ್ ಶ್ರೀಮುರಳಿ ಮುಂದಿನ ಚಿತ್ರ ಯಾವುದು?]

ಜಯಣ್ಣ-ಭೋಗೇಂದ್ರ ಪ್ರೊಡಕ್ಷನ್ ನಲ್ಲಿ ತಯಾರಾಗುವ ಚಿತ್ರದಲ್ಲಿ ನಟಿಸುವುದಾಗಿ ತಮ್ಮ 35ನೇ ಹುಟ್ಟುಹಬ್ಬದಂದು ಶ್ರೀಮುರಳಿ ಅನೌನ್ಸ್ ಮಾಡಿದ್ರು. ಈಗ ಅದೇ ಚಿತ್ರದ ಕುರಿತಾಗಿ ಖಾಸ್ ಖಬರ್ ಹೊರಬಿದ್ದಿದೆ. ಮುಂದೆ ಓದಿ....

'ಪ್ರೊಡಕ್ಷನ್ 15' ಗೆ ಟೈಟಲ್ ಫಿಕ್ಸ್

ಜಯಣ್ಣ-ಭೋಗೇಂದ್ರ ನಿರ್ಮಾಣದ ಶ್ರೀಮುರಳಿ ನಟಿಸುವ 'ಪ್ರೊಡಕ್ಷನ್ ನಂ 15' ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್ ಆಗಿದೆ.

ಟೈಟಲ್ ಏನು?

ಶ್ರೀಮುರಳಿ ಮುಂದಿನ ಚಿತ್ರಕ್ಕೆ 'ಮಫ್ತಿ' ಎಂಬ ಶೀರ್ಷಿಕೆ ಇಡಲಾಗಿದೆ.

ಫಸ್ಟ್ ಲುಕ್ ಪೋಸ್ಟರ್ ಔಟ್

ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ 'ಮಫ್ತಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ.

'ಮಫ್ತಿ' ಚಿತ್ರದಲ್ಲಿ ಶಿವಣ್ಣ

'ಮಫ್ತಿ' ಚಿತ್ರದ ಸ್ಪೆಷಾಲಿಟಿ ಏನಂದ್ರೆ, ಶ್ರೀಮುರಳಿ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ. [ಶ್ರೀಮುರಳಿ-ಶಿವಣ್ಣ ಚಿತ್ರದ ಬಗ್ಗೆ ಸುಮ್ಮನೆ ಗಾಸಿಪ್ ಹಬ್ಬಿಸ್ಬೇಡಿ.!]

ನರ್ತನ್ ನಿರ್ದೇಶನ

'ಮಫ್ತಿ' ಚಿತ್ರಕ್ಕೆ ಯುವ ನಿರ್ದೇಶಕ ನರ್ತನ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ.

English summary
Kannada Actor Srimurali is all set to share screen space with Kannada Actor Shiva Rajkumar in his upcoming movie 'Mufti' Directed by Narthan. The First look poster of the movie is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada