»   » ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಮದುವೆ ರಹಸ್ಯ ಬಯಲು

ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಮದುವೆ ರಹಸ್ಯ ಬಯಲು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ 'ರಮ್ಯಾ ನನ್ ಹೆಂಡತಿ' ಅಂತ್ಹೇಳಿ ಪೊಲೀಸರ ಅತಿಥಿಯಾಗಿದ್ದ ಹುಚ್ಚ ವೆಂಕಟ್ ಮದುವೆ ರಹಸ್ಯ ಬಯಲಾಗಿದೆ.

''ಹೆಣ್ಮಕ್ಕಳು ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು. ಐಟಂ ಸಾಂಗ್ ಬ್ಯಾನ್ ಆಗ್ಬೇಕ್. ಅತ್ಯಾಚಾರ ಮಾಡುವವರನ್ನ ಕೊಲ್ಲುತ್ತೇನೆ'' ಅಂತ ಹೆಣ್ಮಕ್ಕಳ ಪರ ದನಿಯೆತ್ತುವ ಹುಚ್ಚ ವೆಂಕಟ್ ಗೆ ಈಗಾಗಲೇ ಮದುವೆ ಆಗಿದೆ.!

''ಎಲ್ಲರೂ ನನ್ನ ಅಣ್ಣ ಅಂತ ಕರೀತಾರೆ. ಹೀಗಾಗಿ ನನಗೆ ಹುಡುಗಿ ಎಲ್ಲಿಂದ ಸಿಗ್ತಾಳೆ'' ಅಂತಿದ್ದ ಹುಚ್ಚ ವೆಂಕಟ್ ಮದುವೆ ಹಿಸ್ಟ್ರಿಯನ್ನ ಈಟಿವಿ ನ್ಯೂಸ್ ಕನ್ನಡ ವಾಹಿನಿ ಬಯಲು ಮಾಡಿದೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಹಾಗಾದ್ರೆ, ಹುಚ್ಚ ವೆಂಕಟ್ ಹೆಂಡತಿ ಯಾರು? ಅವರೀಗ ಎಲ್ಲಿದ್ದಾರೆ? ಆ ಎಲ್ಲಾ ಕಂಪ್ಲೀಟ್ ಡೀಟೈಲ್ಸ್ ಕೊಡ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಹುಚ್ಚ ವೆಂಕಟ್ ಗೆ ಮದುವೆ ಆಗಿದೆ.!

ಮಾತ್ ಮಾತಿಗೂ 'ನನ್ ಎಕ್ಕಡ' ಅಂತ ಹೇಳುವ ಹುಚ್ಚ ವೆಂಕಟ್ ಗೆ ಈಗಾಗಲೇ ಮದುವೆ ಆಗಿದೆ. ಯಾವಾಗ? ಎಲ್ಲಿ? ಅಂತ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

2007 ರಲ್ಲಿ ಮದುವೆ.!

ಜನವರಿ 3ನೇ ತಾರೀಖು, 2007 ರಂದು ಹುಚ್ಚ ವೆಂಕಟ್ ಸಪ್ತಪದಿ ತುಳಿದಿದ್ದರು. ಅದು ರೇಷ್ಮಾ ಅನ್ನುವ ಹುಡುಗಿ ಜೊತೆ. ಸಂಪಂಗಿರಾಮನಗರದ ಗಣಪತಿ ದೇವಸ್ಥಾನದಲ್ಲಿ ಇಬ್ಬರ ಮದುವೆ ನಡೆದಿತ್ತು. [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

ಲವ್ ಮ್ಯಾರೇಜ್ ಆಗಿದ್ದ ಹುಚ್ಚ ವೆಂಕಟ್.!

'ಸ್ವತಂತ್ರಪಾಳ್ಯ' ಚಿತ್ರದ ಶೂಟಿಂಗ್ ನಡೆಯುತ್ತಿರುವಾಗಲೇ ಹುಚ್ಚ ವೆಂಕಟ್ ಅಲಿಯಾಸ್ ವೆಂಕಟರಾಮನ್ ರೇಷ್ಮಾ ಎಂಬುವ ಹುಡುಗಿಯನ್ನ ಪ್ರೀತಿಸುತ್ತಿದ್ದರು. ಅವರನ್ನೇ 2007ರಲ್ಲಿ ಹುಚ್ಚ ವೆಂಕಟ್ ಕೈಹಿಡಿದರು. [ಹುಚ್ಚ ವೆಂಕಟ್ ಗೆ 2ನೇ ಹೆಂಡತಿ ಆಗ್ತಾರಾ ಜಯಶ್ರೀ?]

ಮದುವೆ ಆಗಿದ್ದನ್ನ ಒಪ್ಪಿಕೊಂಡ ಹುಚ್ಚ ವೆಂಕಟ್

ಹುಚ್ಚ ವೆಂಕಟ್ ಮದುವೆ ಆಗಿರುವ ಸಂಗತಿಯನ್ನ ಈಟಿವಿ ನ್ಯೂಸ್ ಕನ್ನಡ ವಾಹಿನಿ ಫೋಟೋ ಸಮೇತ ಬಯಲು ಮಾಡಿತು. ಅದನ್ನ ಲೈವ್ ಪ್ರೋಗ್ರಾಂನಲ್ಲೇ ಕಣ್ಣಾರೆ ಕಂಡ ಹುಚ್ಚ ವೆಂಕಟ್, ''ಸಿನಿಮಾ ಬಗ್ಗೆ ಮಾತನಾಡಿ, ಸಿನಿಮಾ ನನ್ನ ಉಸಿರು. ಅದು ಬಿಟ್ಟು ವೈಯುಕ್ತಿಕ ವಿಚಾರದ ಬಗ್ಗೆ ಮಾತನಾಡುವುದು ನನಗೆ ಇಷ್ಟ ಇಲ್ಲ. ಮದುವೆ ಆಗಿದ್ದೀನಿ ನಿಜ. ಆದ್ರೆ ಆಕೆ ನನ್ನ ಬಿಟ್ಟು ಹೋದಳು'' ಅಂದರು.

[ಹುಚ್ಚ ವೆಂಕಟ್ 'ಕಿಕ್' ಔಟ್ ಆಗಲು ರಮ್ಯಾ ಮೇಡಂ ಕಾರಣ?]

ಹುಚ್ಚ ವೆಂಕಟ್ ದಾಂಪತ್ಯದಲ್ಲಿ ಬಿರುಕು

''ಆಕೆಯ ಹೆಸರು ರೇಷ್ಮಾ. ನಾನು ಆಕೆಯನ್ನ ಪುಟ್ಟಾ ಅಂತ ಕರೀತಾಯಿದ್ದೆ. ನಾನು ಆಕೆಯನ್ನ ಬಿಟ್ಟಿಲ್ಲ. ಆಕೆಯೇ ನನ್ನ ಬಿಟ್ಟು ಹೋದಳು.'' ಅಂತ ಹುಚ್ಚ ವೆಂಕಟ್ ಕಣ್ಣೀರಿಟ್ಟರು.

['ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಹುಚ್ಚ ವೆಂಕಟ್ ಹೇಳಿದ್ದೇನು?]

ಮತ್ತೆ ಒಂದಾಗುವ ಇಚ್ಛೆ ಇಲ್ಲ.!

''ಮತ್ತೆ ನನ್ನ ಬದುಕ್ಕಲ್ಲಿ ಬರಬೇಡ ಪುಟ್ಟಾ (ರೇಷ್ಮಾ). ನೀನು ಬಂದರೆ ನಾನು ಸಿನಿಮಾ ಜಗತ್ತನ್ನು ಮರೆಯುತ್ತೇನೆ. ನೀನು ಮತ್ತೆ ನನ್ನ ಬಾಳಲ್ಲಿ ಬರಬೇಡ, ಎಲ್ಲೆ ಇರು, ಹೇಗೆ ಇರು ಚೆನ್ನಾಗಿರು'' - ಹುಚ್ಚ ವೆಂಕಟ್

ರಮ್ಯಾ ಕೂಡ ನನ್ನ ಹೆಂಡತಿಯೇ.!

''ಬರೀ ಈಕೆ ಮಾತ್ರ ಅಲ್ಲ. ನಾನು ಅವರನ್ನೂ (ರಮ್ಯಾ) ಮದುವೆಯಾಗಿದ್ದೀನಿ. ಆದ್ರೆ ಫೋಟೋ ತೆಗೆಸಿಕೊಳ್ಳದೆ ದಡ್ಡ ಕೆಲಸ ಮಾಡಿಬಿಟ್ಟೆ'' ಅಂತ ಈಟಿವಿ ಕನ್ನಡ ಸುದ್ದಿ ವಾಹಿನಿಗೆ ಹುಚ್ಚ ವೆಂಕಟ್ ಹೇಳಿಕೆ ನೀಡಿದ್ದಾರೆ.

ನನಗೆ ಒಂದುವರೆ ಲಕ್ಷ ಹೆಂಡತಿಯರಿದ್ದಾರೆ.!

''ನನಗೆ ಒಂದುವರೆ ಲಕ್ಷ ಹೆಂಡತಿಯರಿದ್ದಾರೆ. ನಾಳೆಯಿಂದ ಎಲ್ಲರ ಫೋಟೋ ನಿಮಗೆ ಸಿಗುತ್ತೆ.'' - ಹುಚ್ಚ ವೆಂಕಟ್

2ನೇ ಹೆಂಡತಿ ಆಗ್ತೀರಾ ಅಂತ ಜಯಶ್ರೀಗೆ ಕೇಳಿದ್ರು.!

ಮದುವೆ ಬಗ್ಗೆ ಹುಚ್ಚ ವೆಂಕಟ್ ಮತ್ತು ಜಯಶ್ರೀ ನಡೆದ ನಡೆಯುತ್ತಿದ್ದ ಸಂಭಾಷಣೆ ಹೀಗಿತ್ತು -

ಹುಚ್ಚ ವೆಂಕಟ್ - ''ಇ ಆಮ್ ಆಲ್ರೆಡಿ ಎಂಗೇಜ್ಡ್. ನಂಗೆ ಎರಡನೇ ಹೆಂಡತಿ ಆಗ್ತೀರಾ?''

ಜಯಶ್ರೀ - ''ಹಾಗಾದ್ರೆ, ಪ್ರಾಪರ್ಟಿ ಎಲ್ಲಾ ನನ್ನ ಹೆಸರಿಗೆ ಬರೀತೀರಾ. ಇಂದಿರಾನಗರದಲ್ಲಿರುವ ಮನೆಯನ್ನ ನಂಗೆ ಕೊಟ್ರೆ, ನಾನು ಸೆಟ್ಲ್ ಆಗ್ಬಿಡ್ತೀನಿ''

ಭಾವನಾ ಪ್ರಶ್ನೆ ಮಾಡಿದಾಗ ಉತ್ತರ ಕೊಡ್ಲಿಲ್ಲ.!

'ಐ ಆಮ್ ಆಲ್ರೆಡಿ ಎಂಗೇಜ್ಡ್' ಅಂತ ಹುಚ್ಚ ವೆಂಕಟ್ ಹೇಳಿದಾಗ ಭಾವನಾ ಬೆಳಗೆರೆ ಪ್ರಶ್ನೆ ಮಾಡಿದರು. 'ಯಾರು ಆ ಹುಡುಗಿ, ಯಾವಾಗ ಮದುವೆ ಆಗಿದ್ರಿ' ಅಂತ. ಅದಕ್ಕೆ ಹುಚ್ಚ ವೆಂಕಟ್ ಉತ್ತರ ಕೊಡಲಿಲ್ಲ.!

ಕುಟುಂಬದವರೂ ಮದುವೆ ಬಗ್ಗೆ ಮಾತನಾಡಿರ್ಲಿಲ್ಲ.!

ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಯಲ್ಲಿರುವಾಗ ಹುಚ್ಚ ವೆಂಕಟ್ ಸಹೋದರ ಕುಶಾಲ್ ಬಾಬು, ಸಹೋದರಿ ಸುನೀತಾ ಎಲ್ಲಾ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಆದ್ರೆ, ಎಲ್ಲೂ ಹುಚ್ಚ ವೆಂಕಟ್ ಮದುವೆ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ.

ಹುಚ್ಚ ವೆಂಕಟ್ ಮುಖಕ್ಕೆ ಮಸಿ.!

ಖಾಸಗಿ ವಾಹಿನಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ದಲಿತ ಸಂಘಟನೆ ಹುಚ್ಚ ವೆಂಕಟ್ ಮುಖಕ್ಕೆ ಮಸಿ ಬಳಿದರು.

ಮಸಿ ಬಳಿದ ವಿಡಿಯೋ....

''ನಿಮ್ಮ ಜೊತೆ ಫೋಟೋ ಹಿಡಿಸಿಕೊಳ್ಳಬೇಕು'' ಅಂತ ಹುಚ್ಚ ವೆಂಕಟ್ ಇದ್ದ ಕಾರ್ ಅಡ್ಡ ಹಾಕಿದ ದಲಿತ ಸಂಘಟನೆಯವರು ಹುಚ್ಚ ವೆಂಕಟ್ ಮೇಲೆ ಕಪ್ಪು ಇಂಕ್ ಹಾಕಿದ ವಿಡಿಯೋ ಇಲ್ಲಿದೆ ನೋಡಿ.....

ಮದುವೆ ವಿಡಿಯೋ ಕ್ಲಿಪ್.!

ಮುಖಕ್ಕೆ ಮಸಿ ಬಳಿಸಿಕೊಂಡು ಈಟಿವಿ ಕನ್ನಡ ಸುದ್ದಿ ವಾಹಿನಿ ಸ್ಟುಡಿಯೋಗೆ ಹುಚ್ಚ ವೆಂಕಟ್ ಬಂದರು. ಈಟಿವಿ ಕನ್ನಡ ಸುದ್ದಿ ವಾಹಿನಿ ಬಿತ್ತರ ಮಾಡಿದ 'ಹುಚ್ಚ ವೆಂಕಟ್ ಸೀಕ್ರೆಟ್' ಕಾರ್ಯಕ್ರಮದ ತುಣುಕು ಇಲ್ಲಿದೆ ನೋಡಿ.....

English summary
ETV Kannada News Channel has revealed that YouTube Star Huccha Venkat is married to Reshma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada