»   » ಕಿಚ್ಚ ಬಿಚ್ಚಿಟ್ಟ 'ಹೆಬ್ಬುಲಿ' ಹೇರ್ ಸ್ಟೈಲ್ ಕಹಾನಿ..!

ಕಿಚ್ಚ ಬಿಚ್ಚಿಟ್ಟ 'ಹೆಬ್ಬುಲಿ' ಹೇರ್ ಸ್ಟೈಲ್ ಕಹಾನಿ..!

Posted By:
Subscribe to Filmibeat Kannada

ಕಿಚ್ಚ ಸುದೀಪ್ 'ಹೆಬ್ಬುಲಿ' ಹೇರ್ ಸ್ಟೈಲ್ ಸಖತ್ ಟ್ರೆಂಡಿಂಗ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಸುದೀಪ್ ಅವರ ಹೇರ್ ಸ್ಟೈಲ್ ಹಿಂದಿರುವ ಕಹಾನಿ ಮಾತ್ರ ಯಾರಿಗೂ ತಿಳಿದಿಲ್ಲ.[ಕಿಚ್ಚನ 'ಹೆಬ್ಬುಲಿ' ಹೇರ್ ಸ್ಟೈಲ್ ಇನ್ಮುಂದೆ ನೋಡೋಕೆ ಆಗಲ್ಲ]

ಪ್ಯಾರಾ ಕಮಾಂಡರ್ ಆಗಿ ನಟಿಸಿರುವ ಸುದೀಪ್ ಉದ್ದನೆಯ ಕೂದಲನ್ನು ಬಿಟ್ಟಿರುವ ಕಾರಣ, ಎಲ್ಲರಿಗೂ ಒಂದು ಡೌಟ್ ಕಾಡುತ್ತಿತ್ತು. ಅದೇನಂದ್ರೆ ಪ್ಯಾರಾ ಕಮಾಂಡರ್ ಉದ್ದನೆಯ ಕೂದಲು ಬಿಡುವುದಿಲ್ಲ. ಆದರೆ ಇವರು ಯಾಕೆ ಈ ರೀತಿ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ? ಎಂಬುದು. ಈ ಪ್ರಶ್ನೆಗೆ ಸುದೀಪ್ ಅವರೇ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ್ದು, 'ಹೆಬ್ಬುಲಿ' ಚಿತ್ರದಲ್ಲಿನ ಹೇರ್ ಸ್ಟೈಲ್ ಬಗ್ಗೆ ವಿವರಿಸಿದ್ದಾರೆ.


'ಹೆಬ್ಬುಲಿ'ಗೆ ಹೇರ್ ಕಟ್ ಮಾಡಿಸಲು ಹೇಳಿದ್ದರು ಎಸ್ ಕೃಷ್ಣ

"ಹೆಬ್ಬುಲಿ' ಚಿತ್ರಕ್ಕೆ ಒಪ್ಪಿಗೆ ನೀಡಿದ ಬಳಿಕ, ನಿರ್ದೇಶಕ ಎಸ್.ಕೃಷ್ಣ ಅವರು ಮೊದಲು ಹೇರ್ ಕಟ್ ಮಾಡಿಸಲು ಹೇಳಿದ್ದರು. ಆದರೆ ಹಿಂದಿನ ಚಿತ್ರಗಳಿಂದ ಉದ್ದವಾಗಿ ಬೆಳೆದಿದ್ದ ಕೂದಲನ್ನು ಕಟ್ ಮಾಡಲು ಮನಸ್ಸು ಬರಲಿಲ್ಲ. ಅದಕ್ಕೆ ಹೀಗೆ ಬಿಟ್ರೆ ಹೇಗೆ? ಎಂದಿದ್ದೆ" - ಕಿಚ್ಚ ಸುದೀಪ್ [ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'!]


ಸಿನಿಮಾಗೆ ಓಕೆ

"ಹಿಂದಿನ ಚಿತ್ರಗಳಲ್ಲಿ ಉದ್ದನೆಯ ಹೇರ್ ಸ್ಟೈಲ್ ಮೇನ್ಟೇನ್ ಮಾಡಿದ್ದೆ. ಅದನ್ನ ತೆಗೆಯಲು ಮನಸ್ಸು ಒಪ್ಪದ ಕಾರಣ 'ಪ್ಯಾರಾ ಕಮಾಂಡೋ ಪಾತ್ರಕ್ಕೆ ಉದ್ದುದ್ದ ಜುಟ್ಟು ಓಕೆನಾ?' ಅಂದೆ. ಅದಿಕ್ಕೆ ಕಿಟ್ಟಪ್ಪ ಸಿನಿಮಾಗೆ ಓಕೆ ಎಂದಿದ್ದರು. ಆದ್ರೆ ಒಂದ್ ಡೌಟ್ ಕ್ಲಿಯರ್ ಆಗಬೇಕಿತ್ತು" - ಸುದೀಪ್.[ಚಿತ್ರಗಳು: 'ಹೆಬ್ಬುಲಿ' ಪ್ರೆಸ್ ಮೀಟ್]


ಯಾರು ಪ್ರಶ್ನೆ ಮಾಡಲ್ವಾ?

"ಮಾಡ್ತಿರೋದು ಪ್ಯಾರಾ ಕಮಾಂಡೋ ಪಾತ್ರ, ಈ ರೀತಿ ಉದ್ದುದ್ದ ಜುಟ್ಟು ಬಿಟ್ರೆ ಯಾರು ಪ್ರಶ್ನೆ ಮಾಡಲ್ವಾ?' ಅಂತ ಕೇಳಿದ್ದೆ" - ಕಿಚ್ಚ ಸುದೀಪ್


ನಿರ್ದೇಶಕ ಎಸ್.ಕೃಷ್ಣ ಅವರ ಹಾಸ್ಯ ಚಟಾಕಿ...!

"ಅಲ್ಲಾ ಸಾರ್ ಪ್ರತೀ ಸಿನಿಮಾದಲ್ಲೂ ಒಂದೊಂದು ಹುಡುಗೀನ ಮದುವೆ ಆದಾಗ್ಲೇ ಯಾರು ಕೇಳಿಲ್ಲ.. ಇನ್ನೂ ಜುಟ್ಟು ಬಗ್ಗೆ ಯಾರು ಕೇಳ್ತಾರೆ ಬಿಡಿ ಸಾರ್..' ಅಂತ ಕೃಷ್ಣ ಹೇಳಿದ್ದರು'' - ಕಿಚ್ಚ ಸುದೀಪ್


ಕರೆಕ್ಟ್ ಅಲ್ವಾ.!?

'ಆಮೇಲೆ ಕಿಟ್ಟಪ್ಪ ಹೇಳಿದ್ದು ಸರಿ ಎನಿಸಿದ ನಂತರ, ಈ ಹೇರ್ ಸ್ಟೈಲ್ ಬಿಟ್ಟು, ಚಿತ್ರದಲ್ಲಿ ಸಂಪೂರ್ಣವಾಗಿ ಅದೇ ಸ್ಟೈಲ್ ಮುಂದುವರೆಸಿದೆ" ಎಂದು ಸುದೀಪ್ ಹೇಳಿದರು.


ಥ್ಯಾಂಕ್ಸ್ ಟು ಆಲ್

''ಹೆಬ್ಬುಲಿ' ಚಿತ್ರದ ಹೇರ್ ಸ್ಟೈಲ್ ನ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲಾ ಫಾಲೋ ಮಾಡಿದ್ದು, ಅದೇ ನನಗೆ ನೋಡೋಕೆ ತುಂಬಾ ಖುಷಿ ಆಗಿದೆ. ಸೋ, ಎಲ್ಲರಿಗೂ ಥ್ಯಾಂಕ್ಸ್'' ಎಂದು ಸಂತೋಷ ಹಂಚಿಕೊಂಡರು ಸುದೀಪ್.


English summary
Kiccha Sudeep revealed the story behind his 'Hebbuli' hair style.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada