»   » ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'!

ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರಕ್ಕೆ ಸಿಗಲಿದೆ. ಬರೋಬ್ಬರಿ 500 ಸ್ಕ್ರೀನ್ ಗಳಲ್ಲಿ 'ಹೆಬ್ಬುಲಿ' ಘರ್ಜಿಸಲಿದೆ... ಅರ್ಥಾತ್ 500 ಸ್ಕ್ರೀನ್ ಗಳಲ್ಲಿ 'ಹೆಬ್ಬುಲಿ' ರಿಲೀಸ್ ಆಗಲು ಸಜ್ಜಾಗಿದೆ. ಸ್ಯಾಂಡಲ್ ವುಡ್ ಮಟ್ಟಿಗೆ ಇದು ಹೊಸ ಮೈಲಿಗಲ್ಲು ಅಂದ್ರೆ ಖಂಡಿತ ತಪ್ಪಾಗಲ್ಲ.!

ಸುದೀಪ್ ಸಿನಿಮಾ ಬಿಡುಗಡೆ ಅಂದ್ರೇನೇ ಕಿಚ್ಚನ ಅಭಿಮಾನಿಗಳ ಎದೆಬಡಿತ ಜೋರಾಗುತ್ತೆ. ಅಂಥದ್ರಲ್ಲಿ, 'ಹೆಬ್ಬುಲಿ' 500 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗ್ತಿದೆ ಅಂದ್ರೆ 'ಕಿಚ್ಚ'ನ ಭಕ್ತರಿಗೆ ಇದಕ್ಕಿಂತ ಬೆಲ್ಲದ ಸವಿ ಬೇಕಾ.?


ಕರ್ನಾಟಕ ಒಂದರಲ್ಲೇ 400 ಸ್ಕ್ರೀನ್ ಗಳು.!

ಕರ್ನಾಟಕ ರಾಜ್ಯಾದ್ಯಂತ ಸುಮಾರು 400 ಸ್ಕ್ರೀನ್ ಗಳಲ್ಲಿ 'ಹೆಬ್ಬುಲಿ' ಚಿತ್ರವನ್ನು ರಿಲೀಸ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.[ಎಕ್ಸ್ ಕ್ಲೂಸಿವ್: ಕಿಚ್ಚ ಸುದೀಪ್ ರವರ 'ಹೆಬ್ಬುಲಿ' ಚಿತ್ರದ ಕಥೆ ಏನು.?]


ಕರ್ನಾಟಕದಾಚೆಗೂ 100 ಸ್ಕ್ರೀನ್ ಗಳು

ಭಾರತಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವ 'ಹೆಬ್ಬುಲಿ' ಚಿತ್ರ ಕರ್ನಾಟಕದಾಚೆ 100 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡ ಚಿತ್ರವೊಂದಕ್ಕೆ ಇಷ್ಟೊಂದು ಸ್ಕ್ರೀನ್ ಗಳು ಲಭ್ಯವಾಗುತ್ತಿರುವುದು ಇದೇ ಮೊಟ್ಟ ಮೊದಲ ಬಾರಿಗೆ.!


ವಿದೇಶಗಳಲ್ಲಿಯೂ ಬಿಡುಗಡೆ ಆಗಲಿದೆ 'ಹೆಬ್ಬುಲಿ'

''ಕರ್ನಾಟಕ ರಾಜ್ಯ ಹೊರತು ಪಡಿಸಿ 100 ಸ್ಕ್ರೀನ್ ಗಳಲ್ಲಿ 'ಹೆಬ್ಬುಲಿ' ಬಿಡುಗಡೆ ಆಗಲಿದೆ. ಚೆನ್ನೈ, ಮುಂಬೈ ಹಾಗೂ ಹೈದರಾಬಾದ್ ಗಳಲ್ಲಿ ಹೆಚ್ಚು ಸ್ಕ್ರೀನ್ ಗಳನ್ನು ಪಡೆಯಲು ಗಮನ ಹರಿಸುತ್ತಿದ್ದೇವೆ. ವಿದೇಶಗಳಲ್ಲೂ ರಿಲೀಸ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ'' ಎನ್ನುತ್ತಾರೆ 'ಹೆಬ್ಬುಲಿ' ನಿರ್ಮಾಪಕ ಎಸ್.ವಿ.ರಘುನಾಥ್.['ಹೆಬ್ಬುಲಿ' ಚಿತ್ರ ನೋಡೋಕು ಮುನ್ನ ಈ ವಿಷ್ಯಾ ತಿಳಿದುಕೊಳ್ಳಿ..!]


'ಹೆಬ್ಬುಲಿ' ಬಿಡುಗಡೆ ಯಾವಾಗ.?

ಫೆಬ್ರವರಿ 23 ರಂದು ಕಿಚ್ಚ ಸುದೀಪ್ ಹಾಗೂ ಅಮಲಾ ಪೌಲ್ ನಟಿಸಿರುವ, ಕೃಷ್ಣ ಆಕ್ಷನ್ ಕಟ್ ಹೇಳಿರುವ 'ಹೆಬ್ಬುಲಿ' ಸಿನಿಮಾ ಬಿಡುಗಡೆ ಆಗಲಿದೆ.


ಹೆಚ್ಚು ಹೈಪ್ ಕ್ರಿಯೇಟ್ ಆಗಲು ಕಾರಣ.?

ಇದೇ ಮೊದಲ ಬಾರಿಗೆ ಆರ್ಮಿ ಕಮಾಂಡರ್ ಪಾತ್ರದಲ್ಲಿ ಸುದೀಪ್ ನಟಿಸಿರುವ ಸಿನಿಮಾ 'ಹೆಬ್ಬುಲಿ'. ಇದೇ ಚಿತ್ರಕ್ಕಾಗಿ ಸುದೀಪ್ ಮಾಡಿಸಿಕೊಂಡಿರುವ ಹೊಸ ಹೇರ್ ಸ್ಟೈಲ್ ಕೂಡ ಟ್ರೆಂಡ್ ಸೆಟ್ ಮಾಡಿದೆ. ಇನ್ನೂ ಕಾಲಿವುಡ್, ಟಾಲಿವುಡ್ ನ ಖ್ಯಾತ ನಟಿ ಅಮಲಾ ಪೌಲ್ ನಟಿಸಿರುವ ಮೊದಲ ಕನ್ನಡ ಚಿತ್ರ ಕೂಡ ಇದೇ. ಇಂತಹ ಅನೇಕ ವಿಶೇಷತೆಗಳಿಂದ ಸದ್ದು ಮಾಡಿರುವ 'ಹೆಬ್ಬುಲಿ' ಸಹಜವಾಗಿ ಹೈಪ್ ಕ್ರಿಯೇಟ್ ಮಾಡಿದೆ.


English summary
Kiccha Sudeep starrer 'Hebbuli' is expected to release in 500 Screens across India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada