»   » 'ಬಂಜಾರ' ಹುಡುಗಿಯಾದ 'ರಾವಣಿ' ಪೂಜಾ ಗಾಂಧಿ

'ಬಂಜಾರ' ಹುಡುಗಿಯಾದ 'ರಾವಣಿ' ಪೂಜಾ ಗಾಂಧಿ

Posted By:
Subscribe to Filmibeat Kannada

ನಟಿ ಪೂಜಾ ಗಾಂಧಿ 'ಅಭಿನೇತ್ರಿ' ಚಿತ್ರದ ಮೂಲಕ ನಿರ್ಮಾಪಕಿಯಾಗಿ ಬಡ್ತಿ ಪಡೆದರು. ಈಗ ತಮ್ಮ ನಿರ್ಮಾಣದಲ್ಲೇ ಪೂಜಾ ಗಾಂಧಿ 'ರಾವಣಿ' ಆಗಿದ್ದಾರೆ.

'ರಾವಣಿ' ಅನ್ನುವ ಟೈಟಲ್ ಮಾತ್ರದಿಂದಲೇ ಕುತೂಹಲ ಕೆರಳಿಸಿರುವ ನಟಿ ಪೂಜಾ ಗಾಂಧಿ ಚಿತ್ರದಲ್ಲಿ ಹೇಗೆ ಕಾಣ್ಬಹುದು, ಯಾವ ಗೆಟಪ್ ನಲ್ಲಿ ಮಿಂಚಬಹುದು ಅಂತ ತಿಳಿದುಕೊಳ್ಳುವುದಕ್ಕೆ ನೀವೆಲ್ಲಾ ಕಾತರದಿಂದ ಕಾಯುತ್ತಿರುತ್ತೀರಾ.

ಆ ಕಾತರಕ್ಕೆ ನಾವೀಗ ಬ್ರೇಕ್ ಹಾಕುತ್ತಿದ್ದೇವೆ. 'ರಾವಣಿ' ಚಿತ್ರದಲ್ಲಿ ಪೂಜಾ ಗಾಂಧಿ ಅವರ ಸ್ಪೆಷಲ್ ಲುಕ್ ಔಟ್ ಆಗಿದೆ. ಅದನ್ನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವೇ ನೋಡಿ...

pooja gandhi

ಯೆಸ್, ಇದು ಸಾಕ್ಷಾತ್ ನಟಿ ಪೂಜಾ ಗಾಂಧಿ. ಬಂಜಾರ ಹುಡುಗಿಯಾಗಿ ನಟಿ ಪೂಜಾ ಗಾಂಧಿ 'ರಾವಣಿ' ಸಿನಿಮಾದಲ್ಲಿ ಮಿಂಚಿದ್ದಾರೆ. ಹಾಗಂತ ಇಡೀ ಸಿನಿಮಾದಲ್ಲಿ ಪೂಜಾ ಗಾಂಧಿ ಇದೇ ಲುಕ್ ನಲ್ಲಿರುತ್ತಾರೆ ಅಂತಲ್ಲ. 'ರಾವಣಿ' ಚಿತ್ರದ ಒಂದು ಸನ್ನಿವೇಶದಲ್ಲಿ ಹೀಗೆ ಕಾಣಿಸಿಕೊಳ್ಳುತ್ತಾರೆ ಅಷ್ಟೆ.

ನಿರ್ದೇಶಕ ಚಂದ್ರಚೂಡ್ ರಾಜಸ್ಥಾನಕ್ಕೆ ಹೋಗಿದ್ದಾಗ, ಅಲ್ಲಿನ ಬಂಜಾರ ಹುಡುಗಿಯರ ಕಷ್ಟ ಕಂಡು ಕರ್ನಾಟಕದಲ್ಲೂ ಇಂತಹ ಪರಿಸ್ಥಿತಿ ಇದ್ಯಾ ಅಂತ ರಿಸರ್ಚ್ ಮಾಡಿದರಂತೆ. ಆಗ ಗದಗ, ಗುಲ್ಬರ್ಗಾ ಕಡೆ ಬೀಡುಬಿಟ್ಟಿದ್ದ ಬಂಜಾರ ಜನಾಂಗದವರನ್ನ ಖುದ್ದಾಗಿ ಭೇಟಿ ಮಾಡಿದರಂತೆ. [ಮೂರು ಚಿತ್ರ ನಿರ್ಮಿಸಲಿದ್ದಾರೆ ಪೂಜಾ ಗಾಂಧಿ!]

''ಸಿನಿಮಾದಲ್ಲಿ ಬಂಜಾರ ಹುಡುಗಿಯರ ಕಥೆ ಸಣ್ಣ ಪೋರ್ಷನ್ ಅಷ್ಟೆ. ಅವರ ರಿಯಾಲಿಟಿ ಗೊತ್ತಾಗಲಿ ಅಂತ ಪೂಜಾ ಗಾಂಧಿ ಕೂಡ ಅವರನ್ನ ಭೇಟಿ ಮಾಡಿ, ಮಾತನ್ನಾಡಿಸಿದ್ದಾರೆ'' ಅಂತ ನಿರ್ದೇಶಕ ಚಂದ್ರಚೂಡ್ ಹೇಳುತ್ತಾರೆ.

ಪಕ್ಕಾ ಫೀಮೇಲ್ ಓರಿಯೆಂಟೆಡ್ ಸಿನಿಮಾ 'ರಾವಣಿ' ಸದ್ಯ ಶೂಟಿಂಗ್ ಹಂತದಲ್ಲಿದೆ. ಪೂಜಾ ಗಾಂಧಿ ಜೊತೆ ವಿಶೇಷ ಪಾತ್ರದಲ್ಲಿ ಜೆ.ಡಿ.ಚಕ್ರವರ್ತಿ ಕೂಡ ಇದ್ದಾರೆ. 'ರಾವಣಿ' ಚಿತ್ರದ ಇನ್ನಷ್ಟು ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kannada Actress Pooja Gandhi is spotted in Banjara look for her upcoming film 'Ravani'. Check out the new look here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada