»   » 'ಮ'ಕಾರದ ಬಗ್ಗೆ ಟಿ.ಎನ್.ಸೀತಾರಾಂಗೆ ಅಷ್ಟೊಂದು ಮಮಕಾರ ಯಾಕೆ.?

'ಮ'ಕಾರದ ಬಗ್ಗೆ ಟಿ.ಎನ್.ಸೀತಾರಾಂಗೆ ಅಷ್ಟೊಂದು ಮಮಕಾರ ಯಾಕೆ.?

Posted By:
Subscribe to Filmibeat Kannada

'ಮಾಯಾಮೃಗ', 'ಮನ್ವಂತರ', 'ಮುಕ್ತ', 'ಮುಕ್ತ ಮುಕ್ತ', 'ಮತದಾನ', 'ಮೀರಾ ಮಾಧವ ರಾಘವ'.... ಹೀಗೆ ನಿರ್ದೇಶಕ ಟಿ.ಎನ್.ಸೀತಾರಾಂ ರವರ ಬತ್ತಳಿಕೆ ಇಂದ ಹೊರಬಂದ ಅಷ್ಟೂ ಧಾರಾವಾಹಿ ಹಾಗೂ ಸಿನಿಮಾಗಳ ಶೀರ್ಷಿಕೆ 'ಮ'ಕಾರದಿಂದಲೇ ಆರಂಭ. ಇದರ ಹಿಂದೆ ಏನಾದರೂ ಕಾರಣ ಇದ್ಯಾ.?

ಇಷ್ಟು ದಿನ 'ಮ'ಕಾರದಿಂದಲೇ ಶೀರ್ಷಿಕೆ ಇಡುತ್ತಾ ಬಂದಿದ್ದ ಟಿ.ಎನ್.ಸೀತಾರಾಂ ರವರು ಇದೀಗ 'ಕಾಫಿ ತೋಟ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಮಾತ್ರ ಅವರು 'ಮ' ಕಾರದ ಮಮಕಾರ ತೋರಿಲ್ಲ ಯಾಕೆ.?

- ಹಾಗಂತ ಫೇಸ್ ಬುಕ್ ಲೈವ್ ನಲ್ಲಿ ಫಿಲ್ಮಿಬೀಟ್ ಕನ್ನಡ ಓದುಗರೊಬ್ಬರು ಕೇಳಿದ ಪ್ರಶ್ನೆಗೆ ಟಿ.ಎನ್.ಸೀತಾರಾಂ ಮುಕ್ತವಾಗಿಯೇ ಉತ್ತರ ನೀಡಿದರು.

ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ ಕಛೇರಿಗೆ 'ಕಾಫಿ ತೋಟ' ಸಿನಿಮಾದ ಪ್ರಮೋಷನ್ ನಿಮಿತ್ತ ನಿರ್ದೇಶಕ ಟಿ.ಎನ್.ಸೀತಾರಾಂ, ನಟಿ ರಾಧಿಕಾ ಚೇತನ್, ನಟ ರಾಹುಲ್ ಹಾಗೂ ಸುಂದರ್ ರಾಜ್ ಭೇಟಿ ನೀಡಿದ್ದರು.

ಅಂದು 'ಕಾಫಿ ತೋಟ' ತಂಡದೊಂದಿಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪುಟದಲ್ಲಿ ಲೈವ್ ಮಾಡಿದ್ವಿ. ಓದುಗರು ಕೇಳಿದ ಅನೇಕ ಪ್ರಶ್ನೆಗಳಿಗೆ ಟಿ.ಎನ್.ಸೀತಾರಾಂ, ರಾಧಿಕಾ ಚೇತನ್ ಹಾಗೂ ರಾಹುಲ್ ಮನಸ್ಸು ಬಿಚ್ಚಿ ಉತ್ತರ ನೀಡಿದರು.

ಫೇಸ್ ಬುಕ್ ಲೈವ್ ವೇಳೆಯಲ್ಲಿನ ಕೆಲ ಆಯ್ದ ಪ್ರಶ್ನೋತ್ತರಗಳು ಇಲ್ಲಿವೆ, ಓದಿರಿ...

* ನಮಸ್ತೆ ಸರ್, Usually ನಿಮ್ಮ ಧಾರಾವಾಹಿಗಳು, ಚಿತ್ರಗಳೆಲ್ಲ "ಮ" ಕಾರದಿಂದಲೇ ಶುರುವಾಗತ್ತೆ. ಮನ್ವಂತರ, ಮಾಯಾಮೃಗ, ಮುಕ್ತ, ಮತದಾನ, ಮೀರಾ ಮಾಧವ ರಾಘವ... ಹೀಗೆ. ಆದರೆ ಕಾಫಿ ತೋಟಕ್ಕೆ "ಮ" ಕಾರದ ಮಮಕಾರ ಇಲ್ಲದೆ ಇರೋದಕ್ಕೆ ಏನಾದ್ರೂ ಕಾರಣ ಇದ್ಯಾ?

-'ಮಾಯಾಮೃಗ' ಧಾರಾವಾಹಿ ನಂತರ 'ಮತದಾನ' ಸಿನಿಮಾ ಮಾಡಿದೆ. ಅದಾದ್ಮೇಲೆ ಚಾನೆಲ್ ನವರು 'ಮ' ದಿಂದಲೇ ಹೆಸರಿಡಿ ಎಂದರು. ನಾನು ಯಾಕೆ 'ಮ' ಕಾರದಿಂದಲೇ ಹೆಸರು ಇಡುತ್ತಿದ್ದೆ ಅಂದರೆ ಮಗಳು, ಮಡದಿ, ಮನಿ ಎಲ್ಲವೂ ಶುರು ಆಗುವುದು 'ಮ'ದಿಂದಲೇ. ಹೀಗಾಗಿ 'ಮ'ದಿಂದಲೇ ಹೆಸರು ಇಡುತ್ತಿದ್ದೆ. ಈಗ 'ಕಾಫಿ ತೋಟ'ದಲ್ಲಿಯೇ ಸಿನಿಮಾ ಕಥೆ ನಡೆಯುವುದರಿಂದ, ಅದೇ ಹೆಸರನ್ನ ಇಟ್ಟಿದ್ದೇನೆ.

ಸಾಮಾನ್ಯವಾಗಿ ಸೀತಾರಾಮ್ ಚಿತ್ರವೆಂದರೆ ಅದು ವೈಚಾರಿಕತೆಯ ಆಧಾರಿತ ಚಿತ್ರವೆಂದೇ ತಿಳಿಯುತ್ತಾರೆ. ಈಗಲೂ ನಿಮ್ಮ ಕಾಫಿ ತೋಟದ ಬಗ್ಗೆ ಜನರ ಅನಿಸಿಕೆ ಹಾಗೆಯೇ ಇದೆ. ಇದು ಹಾಗಲ್ಲ, ಸಸ್ಪೆನ್ಸ್ ಥ್ರಿಲ್ಲರ್ ಎಂದ ಅರಿವನ್ನು ಪ್ರೇಕ್ಷಕರಲ್ಲಿ ಮೂಡಿಸಲು ನೀವು ಪ್ರಯತ್ನ ಪಡಬೇಕಿದೆ. ಇದಕ್ಕಾಗಿ ಏನಾದರೂ ಯೋಜನೆ ಹಾಕಿಕೊಳ್ಳುವಿರಾ.?

- ಖಂಡಿತ... ಟೀಸರ್ ನಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂತ ಸ್ಪಷ್ಟವಾಗಿದೆ.

'ಕಾಫಿ ತೋಟ' ರಿಲೀಸ್ ಯಾವಾಗ.?

- ಸೆನ್ಸಾರ್ ಇನ್ನೂ ಆಗಿಲ್ಲ. ಸೆನ್ಸಾರ್ ಸರ್ಟಿಫಿಕೇಟ್ ಬಂದ ಕೂಡಲೆ ರಿಲೀಸ್ ಡೇಟ್ ಅನೌನ್ಸ್ ಮಾಡ್ತೀವಿ.

'ಕಾಫಿ ತೋಟ' ಹೆಸರನ್ನ ಆಯ್ಕೆ ಮಾಡಿಕೊಳ್ಳಲು ಕಾರಣ.?

- 'ಕಾಫಿ ತೋಟ' ಹೆಸರು ಕೇಳಿದ ಕೂಡಲೆ ಒಂದು ನಿಗೂಢತೆ ಮನಸ್ಸಿಗೆ ಬರುತ್ತೆ. ಕಾಫಿ ತೋಟ ಸಾಮಾನ್ಯವಾಗಿ ಊರಿಂದ ಆಚೆ ಇರುತ್ತೆ. ಜನ ಸ್ವಲ್ಪ ಕಡಿಮೆ ಇರುತ್ತಾರೆ. ಜನ ಕಮ್ಮಿ ಇದ್ದಾಗ, ಅಲ್ಲಿ ಏನೋ ನಡೆಯಬಹುದು ಎಂಬ ನಿಗೂಢತೆ ಇರುತ್ತೆ. ಆ ತರಹ ಅನೇಕ ನಿಗೂಢತೆಯ ಅಂಶಗಳು ಸಿನಿಮಾದಲ್ಲಿ ಇರುವ ಕಾರಣ 'ಕಾಫಿ ತೋಟ' ಅಂತ ಹೆಸರು ಇಟ್ಟಿದ್ದೇನೆ.

'ಕಾಫಿ ತೋಟ'ದಲ್ಲಿ ಏನೇನೆಲ್ಲ ಆಗುತ್ತೆ.?

- ಮುಖ್ಯ ಕಥೆ ನಡೆಯುತ್ತೆ. ಸಿನಿಮಾದಲ್ಲಿ ತ್ರಿಕೋನ ಪ್ರೇಮ ಕಥೆಯ ಜೊತೆ ನಿಗೂಢತೆ, ತನಿಖೆ, ಕೋರ್ಟ್ ಸೀನ್ ಇದೆ. ಒಂದು ರೀ ಟ್ರೈಯಲ್ ಬಗ್ಗೆ ಈ ಸಿನಿಮಾದ ಕಥೆ ಹೆಣೆಯಲಾಗಿದೆ.

ಟಿ.ಎನ್.ಸೀತಾರಾಂ ರವರಿಗೂ ಕೋರ್ಟ್ ಗೂ ಸಂಬಂಧ ಶುರು ಆಗಿದ್ದು ಹೇಗೆ.?

- ನಾನು ಮುಂಚೆ ಲಾಯರ್ ಆಗಿದ್ದೆ. ಆದರೆ ನನ್ನ ಬಳಿ ಕ್ಲೈಂಟ್ಸ್ ಬರುತ್ತಿರಲಿಲ್ಲ. ತದನಂತರ ಸೀರಿಯಲ್ ಗಳಲ್ಲಿ ಕೋಟು ಧರಿಸಿಕೊಂಡು ಲಾಯರ್ ಪಾರ್ಟ್ ಮಾಡಿದೆ. ಆಗ ನನಗೆ ದುಡ್ಡು ಬರಲು ಸಾಧ್ಯ ಆಯ್ತು.

'ಮೀರಾ ಮಾಧವ ರಾಘವ' ಚಿತ್ರದ ಬಳಿಕ ತುಂಬಾ ಲಾಂಗ್ ಗ್ಯಾಪ್ ಆಯ್ತು ಯಾಕೆ.?

- ಸೀರಿಯಲ್ ಗಳಲ್ಲಿ ನಾನು ತುಂಬಾ ಬಿಜಿ ಆಗಿದ್ದೆ. ಧಾರಾವಾಹಿಗಳು ಮುಗಿದ ಮೇಲೆ ಈ ಸಿನಿಮಾ ಕೈಗೆ ಎತ್ತಿಕೊಂಡೆ.

ರಾಧಿಕಾ ಚೇತನ್ ಅವರ ಪಾತ್ರವೇನು.?

- ಕಾಫಿ ತೋಟದ ಒಡತಿಯ ಪಾತ್ರವನ್ನ ಮಾಡುತ್ತಿದ್ದೇನೆ. ನನ್ನ ಕ್ಯಾರೆಕ್ಟರ್ ತುಂಬಾ ಲೈವ್ಲಿ ಆಗಿದೆ.

ಫಸ್ಟ್ ಡೇ ಫಸ್ಟ್ ಶೋನಲ್ಲಿ ಆಡಿಯನ್ಸ್ ಗೆ ಕಾಫಿ ಸಿಗುತ್ತಾ.?

- ಖಂಡಿತ ಸಿಗುತ್ತದೆ.

ಹೊಸ ಪ್ರತಿಭೆಗಳಿಗೆ ಸಿಗಲಿದೆ ಅವಕಾಶ

ಹೊಸ ಪ್ರತಿಭೆಗಳಿಗೆ ಟಿ.ಎನ್.ಸೀತಾರಾಂ ಅವಕಾಶ ನೀಡುತ್ತಾರಾ ಎಂದು ಓದುಗರು ಕೇಳಿದಕ್ಕೆ, ''ಖಂಡಿತ ಅವಕಾಶ ನೀಡುತ್ತೇನೆ'' ಎಂದರು ಟಿ.ಎನ್.ಸೀತಾರಾಂ.

English summary
Kannada Director TN Seetharam revealed the reason behind his sentiment with Letter 'M' during the Facebook live with Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada