For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ತಾರೆಯರ ದೀಪಾವಳಿ ಹಬ್ಬದ ಸ್ಪೆಷಲ್ ಏನು?

  By Harshitha
  |

  ಮನೆ, ಮನಗಳಲ್ಲಿ ಕತ್ತಲು ಕಳೆಯುವ ಬೆಳಕಿನ ಹಬ್ಬ 'ದೀಪಾವಳಿ' ಮತ್ತೊಮ್ಮೆ ಬಂದೇಬಿಟ್ಟಿದೆ. ಇನ್ನೊಂದು ವಾರ ಎಲ್ಲೆಲ್ಲೂ ದೀಪಗಳ ಸಾಲು, ಪಟಾಕಿ ಸದ್ದು. ಎಲ್ಲರ ಮನೆಯಲ್ಲೂ ಸಡಗರ-ಸಂಭ್ರಮ.

  ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಪ್ರಿಯವಾಗಿರುವ ಈ ದೀಪಾವಳಿಯನ್ನ ನಮ್ ಸ್ಯಾಂಡಲ್ ವುಡ್ ಸ್ಟಾರ್ಸ್ ಹೇಗೆಲ್ಲಾ ಸೆಲೆಬ್ರೇಟ್ ಮಾಡ್ತಾರೆ ಅನ್ನೋದು ನಿಮ್ಗೆ ಗೊತ್ತಾ? [ಬೆಳಕಿನ ಹಬ್ಬ ದೀಪಾವಳಿಯನ್ನ 'ರನ್ನ'ನ ಜೊತೆ ಆಚರಿಸಿ]

  ಹಬ್ಬದ ದಿನ ಸ್ಟಾರ್ ಗಳು ಶೂಟಿಂಗ್ ನಲ್ಲಿ ಬಿಜಿಯಿರ್ತಾರಾ ಇಲ್ಲ, ಮನೆಯಲ್ಲಿ ದೀಪ ಹಚ್ಚಿ ಸಂಭ್ರಮಿಸುತ್ತಾರಾ.? ನಮ್ಮ ಕನ್ನಡ ತಾರೆಯರಿಗೆ ಯಾವ ಸ್ವೀಟ್ ಅಂದ್ರೆ ಇಷ್ಟ.?

  ನಮ್ಮ ಚಂದನವನದ ತಾರೆಯರು ಪಟಾಕಿ ಪ್ರಿಯರಾ ಅಥವಾ ಪರಿಸರ ಪ್ರಿಯರ? ಅನ್ನುವ ಪ್ರಶ್ನೆಯನ್ನಿಟ್ಟುಕೊಂಡು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೆಲ ಸ್ಟಾರ್ ಗಳನ್ನ ಸಂಪರ್ಕಿಸಿದಾಗ, ಅವರಿಂದ ಸಿಕ್ಕ ಉತ್ತರ ಹೀಗಿತು. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ......

  ರಾಧಿಕಾ ಪಂಡಿತ್

  ರಾಧಿಕಾ ಪಂಡಿತ್

  ದೀಪಾವಳಿ ನನ್ನ ಇಷ್ಟದ ಹಬ್ಬ. ನಾನೇ ಸ್ವತಃ ದೀಪಗಳಿಗೆ ಪೇಂಟ್ ಮಾಡಿ ನಮ್ಮ ಮನೆ ತುಂಬಾ ದೀಪ ಹಚ್ಚುತ್ತೇನೆ. ನನಗೆ ಪಟಾಕಿ ಸದ್ದು ಕಂಡ್ರೆ ಆಗಲ್ಲ. ಹೀಗಾಗಿ ನಾವು ಪಟಾಕಿ ಕೊಂಡುಕೊಳ್ಳುವುದೇ ಇಲ್ಲ. ನನಗೆ ರಸಮಲೈ ಅಂದ್ರೆ ಇಷ್ಟ. ಹ್ಯಾಪಿ ದೀಪಾವಳಿ ಟು ಯು ಟೂ.

  ಮೇಘನಾ ರಾಜ್

  ಮೇಘನಾ ರಾಜ್

  ಮನೆ ತುಂಬಾ ದೀಪ ಹಚ್ಚಿ ಹಬ್ಬವನ್ನ ಸೆಲೆಬ್ರೇಟ್ ಮಾಡ್ತೀವಿ. ತುಂಬಾ ವರ್ಷಗಳಾಯ್ತು ನಾನು ಪಟಾಕಿ ಸಿಡಿಸೋದು ಬಿಟ್ಟು. ಸೋ, ನೋ ಪಟಾಕಿ. ನಮ್ಮನ್ನೇಲಿ ಮೈಸೂರ್ ಪಾಕ್ ಮತ್ತು ಕಾರೆಟ್ ಹಲ್ವಾ ದೀಪಾವಳಿ ಹಬ್ಬದ ಸ್ಪೆಷಲ್.

  ಶ್ರೀಮುರಳಿ

  ಶ್ರೀಮುರಳಿ

  ದೀಪಾವಳಿ ಹಬ್ಬ ಅಂದ್ರೆ ನನಗೆ ತುಂಬಾ ಇಷ್ಟ. ನನ್ನ ಫ್ಯಾಮಿಲಿ ಜೊತೆ ನಾನು ಸಂಭ್ರಮದಿಂದ ಆಚರಿಸುತ್ತೇನೆ. ಹೌದು, ನಾವು ಪಟಾಕಿ ಸಿಡಿಸುತ್ತೇವೆ. ಯಾಕಂದ್ರೆ ನನ್ನ ಮಕ್ಕಳಿಗೆ ಪಟಾಕಿ ಅಂದ್ರೆ ಇಷ್ಟ. ನನಗೆ ಪ್ರಿಯವಾದ ಸ್ವೀಟ್ ಅಂದ್ರೆ ಬಾದಾಮ್ ಬರ್ಫಿ. ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು.

  ಮಾಧುರಿ ಇಟಗಿ

  ಮಾಧುರಿ ಇಟಗಿ

  ದೀಪಾವಳಿ ಹಬ್ಬದ ನಾನು ಮನೆಯಲ್ಲೇ ಇರುತ್ತೇನೆ. ಎಲ್ಲೂ ಹೋಗಲ್ಲ. ಪಟಾಕಿ ಅಂದ್ರೆ ನನಗೆ ಆಗಲ್ಲ. ಅದಕ್ಕೆ ನಾನು ಪಟಾಕಿ ಸಿಡಿಸೋಲ್ಲ. ನನಗೆ ಗುಲಾಬ್ ಜಾಮೂನ್ ಮತ್ತು ಜಿಲೇಬಿ ಅಂದ್ರೆ ಇಷ್ಟ. ಈ ಬಾರಿ ನಮ್ಮೆನೇಲಿ ಅದೇ ಸ್ಪೆಷಲ್.

  ಶ್ರುತಿ ಹರಿಹರನ್

  ಶ್ರುತಿ ಹರಿಹರನ್

  ಸಾಲು ಸಾಲು ದೀಪಗಳನ್ನ ಹಚ್ಚುವ ಮೂಲಕ ನಾವು ಮನೆಯಲ್ಲಿ ದೀಪಾವಳಿ ಸೆಲೆಬ್ರೇಟ್ ಮಾಡ್ತೀವಿ. ಅವತ್ತು ನಮ್ಮ ಮನೆಯಲ್ಲಿ ಫ್ಯಾಮಿಲಿ ಫ್ರೆಂಡ್ಸ್ ಎಲ್ಲಾ ಬಂದಿರುತ್ತಾರೆ. ಪಟಾಕಿ ಮಾತ್ರ ಹಚ್ಚಲ್ಲ.

  ಶುಭ ಪುಂಜ

  ಶುಭ ಪುಂಜ

  ನನಗೆ ರವೆ ಉಂಡೆ ಅಂದ್ರೆ ತುಂಬಾ ಇಷ್ಟ. ಮನೆಯಲ್ಲಿ ರವಿ ಉಂಡೆ ಮಾಡಿ, ಮನೆ ತುಂಬಾ ದೀಪ ಹಚ್ಚಿದ್ರೆ, ಅದೇ ನನಗೆ ದೀಪಾವಳಿ. ಐ ಹೇಟ್ ಪಟಾಕಿ.

  ಸಿಂಧು ಲೋಕನಾಥ್

  ಸಿಂಧು ಲೋಕನಾಥ್

  ದೀಪ ಹಚ್ತೀನಿ ಅಷ್ಟೆ. ಪಟಾಕಿ ಎಲ್ಲಾ ಇಲ್ಲ. ನಮ್ಮೆನ್ನೇಲಿ ದೀಪಾವಳಿ ಹಬ್ಬ ತುಂಬಾ ಸಿಂಪಲ್.

  English summary
  Deepavali festival is right here again. Check out what Sandalwood Celebrities have planned to celebrate this Deepavali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X