»   » ಹೊಸ ವರ್ಷದ ಸಂಭ್ರಮ: ಯಾವ್ಯಾವ ತಾರೆಯರು ಎಲ್ಲೆಲ್ಲಿ?

ಹೊಸ ವರ್ಷದ ಸಂಭ್ರಮ: ಯಾವ್ಯಾವ ತಾರೆಯರು ಎಲ್ಲೆಲ್ಲಿ?

Posted By:
Subscribe to Filmibeat Kannada

2014 ಕ್ಕೆ ಗುಡ್ ಬೈ...ಹೊಸ ವರ್ಷ 2015 ಕ್ಕೆ ಹಾಯ್ ಹೇಳುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ. ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಬೇಕು ಅಂತ ನೀವೆಲ್ಲಾ ಪ್ಲಾನ್ ಮಾಡಿರ್ತೀರಾ. ಆದ್ರೆ ಸದಾ ಶೂಟಿಂಗು, ಮೇಕಪ್ಪು, ಪ್ಯಾಕಪ್ಪಿನಲ್ಲೇ ಬಿಜಿಯಾಗಿರುವ ನಮ್ ಸ್ಯಾಂಡಲ್ ವುಡ್ ತಾರೆಯರ ಪ್ಲಾನ್ ಏನು? [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಡಿಸೆಂಬರ್ 31 ರ ಮಧ್ಯರಾತ್ರಿ, ಜನವರಿ 1 ರಂದು ಯಾವ್ಯಾವ ತಾರೆಯರು ಎಲ್ಲೆಲ್ಲಿ ಇರುತ್ತಾರೆ. ಹೊಸ ವರ್ಷವನ್ನು ಹೇಗೆಲ್ಲಾ ಆಚರಿಸುತ್ತಾರೆ? ಈ ಪ್ರಶ್ನೆಗಳನ್ನಿಟ್ಟುಕೊಂಡು 'ಫಿಲ್ಮಿಬೀಟ್ ಕನ್ನಡ' ಕೆಲ ತಾರೆಯರನ್ನ ಕೇಳಿದಾಗ, ಅವ್ರಿಂದ ಸಿಕ್ಕ ಉತ್ತರ ಹೀಗಿತ್ತು. ಅದನ್ನ ತಿಳ್ಕೋಬೇಕು ಅಂದ್ರೆ ಈ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.

ರಮೇಶ್ ಅರವಿಂದ್

''ಪಾರ್ಟಿ ಮಾಡುವ ಕಾಲ ಹೋಯ್ತು ನಂಗೆ. ಮನೆಯಲ್ಲಿ ಹೆಂಡತಿ, ಮಕ್ಕಳೊಂದಿಗೆ ಸೆಲೆಬ್ರೇಟ್ ಮಾಡೋಕೆ ನಂಗಿಷ್ಟ. ಆದ್ರೆ ಈ ವರ್ಷ ಬೆಂಗಳೂರಲ್ಲೋ, ಅಥವಾ ಚೆನ್ನೈನಲ್ಲೋ ಅಂತ ಇನ್ನೂ ಡಿಸೈಡ್ ಮಾಡಿಲ್ಲ. ಎಲ್ಲೇ ಇದ್ದರೂ ಮನೆಯಲ್ಲೇ, ಕುಟುಂಬದವರೊಂದಿಗೆ ಆಚರಣೆ'' - ರಮೇಶ್ ಅರವಿಂದ್

ಉಪೇಂದ್ರ

''ಶಿವಂ ಸಿನಿಮಾ ರಿಲೀಸ್ ಆಗುತ್ತಿರುವುದೇ ನನಗೆ ಹೊಸ ವರ್ಷ. ಸಿನಿಮಾದ ಪ್ರೊಮೋಷನ್ ನಲ್ಲಿ ನಾನು ತುಂಬಾ ಬಿಜಿಯಿದ್ದೀನಿ. ಹೀಗಾಗಿ ಸೆಲೆಬ್ರೇಷನ್ ಗೆ ಟೈಮ್ ಸಿಗಲ್ಲ. ಸಿಕ್ಕಿದರೂ ಅದು ಫ್ಯಾಮಿಲಿ ಜೊತೆಗೆ ಮನೆಯಲ್ಲಿ ಮಾತ್ರ'' - ಉಪೇಂದ್ರ

ಚಾಂದಿನಿ

''ನನಗೆ ಪಾರ್ಟಿ ಇಷ್ಟವಾಗಲ್ಲ. ಹೊಸ ವರ್ಷವನ್ನು ಶಾಂತಿಯಿಂದ ಬರಮಾಡಿಕೊಳ್ಳುವುದು ನನ್ನ ಅಭ್ಯಾಸ. ಬೀಚ್ ಸೈಡ್ ನಲ್ಲಿ ನಿಂತು ಹೊಸ ವರ್ಷದ ಸೂರ್ಯೋದಯವನ್ನ ನೋಡೋ ಆಸೆ ನನಗೆ. ಅದನ್ನ ಪ್ರತಿ ವರ್ಷ ಮಾಡ್ತೀನಿ. ಈ ವರ್ಷ ಕೂಡ. ಚರ್ಚ್ ಗೆ ಹೋಗಿ ದೇವರ ಆಶೀರ್ವಾದ ಪಡೆದು, ಹೊಸ ವರ್ಷದ ದಿನ ಕೆಲಸ ಮಾಡುತ್ತೀನಿ. ಇದೇ ನನ್ನ ಪಾಲಿಗೆ ಸೆಲೆಬ್ರೇಷನ್'' - ಚಾಂದಿನಿ.

ಗಣೇಶ್

''ಈ ವರ್ಷ ನನಗೆ ತುಂಬಾನೇ ಸ್ಪೆಷಲ್. 'ಖುಷಿ ಖುಷಿಯಾಗಿ' ಸಿನಿಮಾ ಹೊಸ ವರ್ಷದಂದೇ ರಿಲೀಸ್ ಆಗುತ್ತಿದೆ. ಪ್ರೇಕ್ಷಕರು ಖುಷಿ ಖುಷಿಯಾಗಿ ಸಿನಿಮಾ ನೋಡಿದರೆ, ಅದೇ ನನಗೆ ಬಿಗ್ ಸೆಲೆಬ್ರೇಷನ್. ರಿಲೀಸ್ ಟೆನ್ಷನ್ ಇರೋದ್ರಿಂದ ಎಲ್ಲೂ ಹೋಗುತ್ತಿಲ್ಲ. ಅಭಿಮಾನಿಗಳೊಂದಿಗೆ, ಮನೆಮಟ್ಟಕ್ಕೆ ಮಾತ್ರ ಹೊಸ ವರ್ಷದ ಸಡಗರ'' - ಗಣೇಶ್

ರಾಗಿಣಿ

''ಶಿವಂ ರಿಲೀಸ್ ಆಗ್ತಿದೆ. ಅದಕ್ಕೆ ನಾನು ಈ ಬಾರಿ ಎಲ್ಲೂ ಹೊರಗೆ ಹೋಗುತ್ತಿಲ್ಲ. ಬಿಜಿ ಇದ್ದೀನಿ. ತುಂಬಾ ಎಕ್ಸೈಟ್ ಮೆಂಟ್ ಇದೆ. ಮನೆಯವರೊಂದಿಗೆ ಫ್ಯಾನ್ಸ್ ಜೊತೆಗೆ ಹೊಸ ವರ್ಷವನ್ನ ಸೆಲೆಬ್ರೇಟ್ ಮಾಡ್ತೀನಿ''- ರಾಗಿಣಿ

ಹರ್ಷಿಕಾ ಪೂಣಚ್ಚ

''2015 ನ್ಯೂ ಇಯರ್ ನ ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡೋಕೆ ಕಾಂಬೋಡಿಯಾಗೆ ಹೋಗ್ತಿದ್ದೀನಿ. ಫ್ಯಾಮಿಲಿ ಜೊತೆ. ಫುಲ್ ಮಸ್ತಿ, ಮಜಾ ಮಾಡಿ ಸೆಲೆಬ್ರೇಟ್ ಮಾಡ್ತೀನಿ. ಹೊಸ ವರ್ಷವನ್ನ ಖುಷಿಯಾಗಿ ಬರಮಾಡಿಕೊಳ್ಳೋಕೆ ಈ ಪ್ಲಾನ್''- ಹರ್ಷಿಕಾ ಪೂಣಚ್ಚ

ಶ್ವೇತಾ ಶ್ರೀವಾತ್ಸವ್

''ನಾನು ಹೆಚ್ಚಾಗಿ ಪಾರ್ಟಿಗಂತ ಹೊರಗೆಲ್ಲೂ ಹೋಗಲ್ಲ. ಫ್ಯಾಮಿಲಿ ಜೊತೆ ಮನೆಯಲ್ಲೇ ಸೆಲೆಬ್ರೇಷನ್. ಯಾವಾಗಲೂ ಶೂಟಿಂಗ್ ಅಂತ ಹೊರಗೇ ಇರ್ತೀವಿ. ಹೊಸ ವರ್ಷವನ್ನ ಕುಟುಂಬದವರೊಂದಿಗೆ ಆಚರಿಸಬೇಕು ಅನ್ನೋದು ನನ್ನ ಆಸೆ. ಹೀಗಾಗಿ ಡಿಸೆಂಬರ್ 31 ರ ರಾತ್ರಿ ಮನೆಯಲ್ಲೇ ಸಂಭ್ರಮ''- ಶ್ವೇತಾ ಶ್ರೀವಾತ್ಸವ್

ಸಿಂಧು ಲೋಕನಾಥ್

''ನಾನು ಕೊಡಗುಗೆ ಹೋಗ್ತಿದ್ದೀನಿ. ಅಲ್ಲಿ ನಮ್ಮ ಮನೆ ಇದೆ. ನಮ್ಮ ಮನೆಯವರೊಂದಿಗೆ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀನಿ'' - ಸಿಂಧು ಲೋಕನಾಥ್

ಸಂಜನಾ

''ಸದ್ಯಕ್ಕೆ ಹೈದರಾಬಾದ್ ನಲ್ಲಿದ್ದೀನಿ. ಇಲ್ಲಿ ಒಂದು ಸ್ಟೇಜ್ ಶೋ ಇದೆ. ಇಲ್ಲೇ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀನಿ'' - ಸಂಜನಾ

ಶುಭಾ ಪೂಂಜಾ

''ಕೋಟಿಗೊಂದು ಲವ್ ಸ್ಟೋರಿ ಸಿನಿಮಾ ಪ್ರೊಮೋಷನ್ ನಲ್ಲಿ ಬಿಜಿ. ಚಿಕ್ಕಮಗಳೂರು, ಭದ್ರಾವತಿ, ಹಾಸನ್ ಅಂತ ಊರೂರು ಸುತ್ತುತ್ತಿದ್ದೀನಿ. ಅಲ್ಲೇ ಸೆಲೆಬ್ರೇಷನ್ ಮಾಡ್ಬೇಕಾಗುತ್ತೆ. ಸಿನಿಮಾ ಟೀಮ್ ಜೊತೆಗೆ'' - ಶುಭಾ ಪೂಂಜಾ

ಶ್ರೀಮರುಳಿ

''ನಾನು ತುಂಬಾ ಬೋರಿಂಗ್ ಹುಡುಗ. ನನಗೆ ಪಾರ್ಟಿ, ಸೆಲೆಬ್ರೇಷನ್ ಎಲ್ಲಾ ಆಗ್ಬರಲ್ಲ. ಜಸ್ಟ್ ಫ್ಯಾಮಿಲಿ ಜೊತೆ ಇರ್ತೀನಿ ಅಷ್ಟೇ. ಎಲ್ಲೂ ಹೋಗಲ್ಲ'' - ಶ್ರೀಮುರುಳಿ

ಅಮೂಲ್ಯಾ

''ಯಾವಾಗಲೂ ಫ್ರೆಂಡ್ಸ್ ಜೊತೆ ಸೆಲೆಬ್ರೇಟ್ ಮಾಡ್ತಿದೆ. ಈ ವರ್ಷ ಖುಷಿ ಖುಷಿಯಾಗಿ ಸಿನಿಮಾ ರಿಲೀಸ್ ಆಗ್ತಿದೆ. ಇದು ದೊಡ್ಡ ಖುಷಿ ನಂಗೆ. ಸೋ ಸಿನಿಮಾದಿಂದ ನಾನು ಹೊಸ ವರ್ಷ ಸೆಲೆಬ್ರೇಟ್ ಮಾಡ್ತೀನಿ. ಪ್ರೊಮೋಷನ್ ಕೆಲಸ ತುಂಬಾ ಇದೆ. ಅದ್ರಲ್ಲೇ ಬಿಜಿ ಇರೋದ್ರಿಂದ ಹೊರಗೆಲ್ಲೂ ಫ್ಯಾಮಿಲಿ ಜೊತೆ ಹೋಗೋಕೆ ಆಗಲ್ಲ.'' - ಅಮೂಲ್ಯಾ

ಪಾರುಲ್ ಯಾದವ್

''ನಾನು ಪಾರ್ಟಿಗಳಿಗೆ ಹೋಗೋದು ಕಡಿಮೆ. ನ್ಯೂ ಇಯರ್ ನ ಯಾವಾಗಲೂ ಫ್ಯಾಮಿಲಿ ಜೊತೆಗೆ ಸೆಲೆಬ್ರೇಟ್ ಮಾಡ್ತೀನಿ. ಈ ವರ್ಷನೂ ಅಷ್ಟೇ''- ಪಾರುಲ್ ಯಾದವ್

ನಿಖಿತಾ ತುಕ್ರಾಲ್

''ನ್ಯೂ ಇಯರ್ ಸೆಲೆಬ್ರೇಷನ್ ಗೋಸ್ಕರ ನಾನು ಕಾಯ್ತಾಯಿದ್ದೀನಿ. ನನ್ನ ಕ್ಲೋಸ್ ಫ್ರೆಂಡ್ ಬರ್ತಡೇ ಕೂಡ ಅವತ್ತೇ. ಹೀಗಾಗಿ ನಾವೆಲ್ಲಾ ಫ್ರೆಂಡ್ಸ್ ಚೆನ್ನಾಗಿ ಪಾರ್ಟಿ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ದೀವಿ. ಜಾಗ ಇನ್ನೂ ನಿರ್ಧಾರ ಮಾಡಿಲ್ಲ.'' - ನಿಖಿತಾ ತುಕ್ರಾಲ್

ರಾಧಿಕಾ ಪಂಡಿತ್

''ನಾನು ಗೋವಾಗೆ ಹೋಗ್ತಿದ್ದೀನಿ. ಅಲ್ಲಿ ಫ್ಯಾಮಿಲಿ ಜೊತೆ ಪುಟ್ಟದಾಗಿ ಸೆಲೆಬ್ರೇಷನ್ ಇದೆ. ಅಪ್ಪ-ಅಮ್ಮ-ಅಜ್ಜಿ ಜೊತೆ ಹೊಸ ವರ್ಷವನ್ನ ಆಚರಿಸಿಕೊಳ್ಳುತ್ತೀನಿ'' - ರಾಧಿಕಾ ಪಂಡಿತ್.

English summary
2014 is about to end and everyone's got a plan to welcome 2015 in their unique style. Here is what Sandalwood Celebrities have planned for their New Year Celebration.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada