»   » 'ರಿಯಲ್ ಡಾನ್' ನೋಡಿ ಬೆಚ್ಚಿಬಿದ್ದ ಸುಮಂತ್ ಶೈಲೇಂದ್ರ

'ರಿಯಲ್ ಡಾನ್' ನೋಡಿ ಬೆಚ್ಚಿಬಿದ್ದ ಸುಮಂತ್ ಶೈಲೇಂದ್ರ

Posted By:
Subscribe to Filmibeat Kannada

ನೋಡೋಕೆ ಚಾಕಲೇಟ್ ಬಾಯ್ ನಂತಿರುವ ಸುಮಂತ್ ಶೈಲೇಂದ್ರ ಇದುವರೆಗೂ ನಟಿಸಿರುವ ಸಿನಿಮಾಗಳೆಲ್ಲಾ ಫ್ಯಾಮಿಲಿ ಎಂಟರ್ ಟೈನರ್ಸ್. 'ಆಟ', 'ದಿಲ್ ವಾಲಾ', 'ತಿರುಪತಿ ಎಕ್ಸ್ ಪ್ರೆಸ್' ಸಿನಿಮಾಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಸುಮಂತ್ ಶೈಲೇಂದ್ರ ಈಗ 'ಬೆತ್ತನಗೆರೆ' ಚಿತ್ರದ ಮೂಲಕ ಫಸ್ಟ್ ಟೈಮ್ ಲಾಂಗ್ ಹಿಡಿದಿದ್ದಾರೆ.

ಮೊಟ್ಟ ಮೊದಲ ಬಾರಿ ರೌಡಿಸಂ ಸಿನಿಮಾದಲ್ಲಿ ರಿಯಲ್ ರೌಡಿ ಬೆತ್ತನಗೆರೆ ಸೀನನ ಪಾತ್ರ ನಿರ್ವಹಿಸಿದ್ದಾರೆ ಸುಮಂತ್ ಶೈಲೇಂದ್ರ. ಚಿತ್ರ ಒಪ್ಪಿಕೊಳ್ಳುವುದಕ್ಕೂ ಮುನ್ನ ರೌಡಿಸಂ ಬಗ್ಗೆ ಸುಮಂತ್ ಗೆ ತಿಳಿದಿರಲಿಲ್ಲ. ಆದ್ರೆ, ಸೀನನಾಗಿ ಬಣ್ಣ ಹಚ್ಚಿ ಲಾಂಗ್ ಹಿಡಿದ್ಮೇಲೆ ಸುಮಂತ್ ಗೆ ನಡುಕ ಶುರುವಾಗಿತ್ತಂತೆ. ['ಬೆತ್ತನಗೆರೆ' ಚಿತ್ರ ಬಿಡುಗಡೆ ಇನ್ನು ನಿರಾಳ]

sumanth shailendra

ರೌಡಿಶೀಟರ್ ಬೆತ್ತನಗೆರೆ ಸೀನನ ಬಗ್ಗೆ ಸುಮಂತ್ ಗೆ ಅಷ್ಟಾಗಿ ಅರಿವಿರಲಿಲ್ಲ. ಶೂಟಿಂಗ್ ನಡೆಯುತ್ತಿರುವಾಗ, ಸೆಟ್ ಗೆ ಬೆತ್ತನಗೆರೆ ಹುಡುಗ್ರು ಮತ್ತು ಹಲವಾರು ರಿಯಲ್ ರೌಡಿಗಳು ವಿಸಿಟ್ ಹಾಕುತ್ತಿದ್ದನ್ನ ಕಂಡು ಸುಮಂತ್ ಹೆದರಿದರಂತೆ.

ಇದೇ ಗ್ಯಾಪ್ ನಲ್ಲಿ ಒಮ್ಮೆ ದುಬೈಗೆ ಹೋಗಿದ್ದಾಗ, ಅಲ್ಲಿ ರೇಸ್ ನೋಡುತ್ತಿರುವಾಗ ಅವರ ಪಕ್ಕ 'ರಿಯಲ್ ಡಾನ್' ಕುಳಿತಿದ್ದನ್ನ ನೋಡಿ ಶಾಕ್ ಆಗಿದ್ದಾರೆ ಸುಮಂತ್. ['ಬೆತ್ತನಗೆರೆ' ಚಿತ್ರಕ್ಕೆ ಎದುರಾಗಿದೆ ಹೊಸ ಸಂಕಷ್ಟ]

ಮೊದಲಿನಿಂದಲೂ ನೈಜ ಕಥೆ ಆಧರಿಸಿದ ಸಿನಿಮಾದಲ್ಲಿ ನಟಿಸುವ ಬಯಕೆ ಸುಮಂತ್ ಗೆ ಇತ್ತು. ಆದ ಕಾರಣ ರಿಸ್ಕ್ ಆದರೂ ಅಡ್ಡಿಯಿಲ್ಲ ಅಂತ 'ಬೆತ್ತನಗೆರೆ' ಚಿತ್ರ ಒಪ್ಪಿಕೊಂಡರಂತೆ ಸುಮಂತ್. ಆದ್ರೆ, 'ಬೆತ್ತನಗೆರೆ' ಸಿನಿಮಾ ಮುಗಿಸುವಷ್ಟರಲ್ಲಿ ಅವರಿಗೆ ಪುನರ್ಜನ್ಮ ಸಿಕ್ಕಂತಾಗಿದೆ. ['ಬೆತ್ತನಗೆರೆ' ಸೀನನ್ನ ಕೊಚ್ಚಿ ಹಾಕಿದ ಸೆನ್ಸಾರ್ ಮಂಡಳಿ]

ರಿಯಲ್ ರೌಡಿಗಳ ತಕರಾರು ಇದ್ದರೂ, 'ಬೆತ್ತನಗೆರೆ' ಸಿನಿಮಾ ರೆಡಿಯಾಗಿ ರಿಲೀಸ್ ಗೆ ಸಿದ್ಧವಾಗಿದೆ. ಮೋಹನ್ ಗೌಡ ನಿರ್ದೇಶಿಸಿರುವ ಈ ಚಿತ್ರದಲ್ಲಿ 'ಸಿಲ್ಕ್' ಖ್ಯಾತಿಯ ಅಕ್ಷಯ್ ಮತ್ತು ವಿನೋದ್ ಕಾಂಬ್ಳಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

English summary
Kannada Actor Sumanth Shailendra has revealed his scary experience by meeting real Rowdysheeters during the shoot of Kannada movie 'Bettanagere'. Akshay, Sumanth Shailendra starrer 'Bettanagere' will hit the screens shortly.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada