For Quick Alerts
  ALLOW NOTIFICATIONS  
  For Daily Alerts

  'ಸೈರಾ ನರಸಿಂಹ ರೆಡ್ಡಿ' ಗೆ ಕಂದಾಯ ಅಧಿಕಾರಿಗಳಿಂದ ಶಾಕ್

  By Pavithra
  |

  ಬಹುನಿರೀಕ್ಷಿತ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭಾರಿ ಬಜೆಟ್ ನ 'ಸೈರಾ ನರಸಿಂಹ ರೆಡ್ಡಿ' ಚಿತ್ರತಂಡಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಚಿತ್ರದ ಚಿತ್ರಿಕರಣಕ್ಕೆ ಹಾಕಲಾಗಿದ್ದ ದೊಡ್ಡ ಸೆಟ್ ಅನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

  'ಸೈರಾ' ಚಿತ್ರಕ್ಕಾಗಿ ನಾಯಕನ ಮನೆಯನ್ನು ನಿರ್ಮಿಸಲಾಗಿತ್ತು. ಈಗ ಅದೇ ಮನೆಯನ್ನು ಅಧಿಕಾರಿಗಳು ಕೆಡವಿದ್ದಾರೆ. ರಾಮ್ ಚರಣ್ ಅಭಿನಯದ ಸೂಪರ್ ಹಿಟ್ 'ರಂಗಸ್ಥಳಂ' ಚಿತ್ರಕ್ಕೂ ಇದೇ ಸ್ಥಳದಲ್ಲಿ ಸೆಟ್ ಹಾಕಲಾಗಿತ್ತು. 'ಸೈರಾ ನರಸಿಂಹ ರೆಡ್ಡಿ' ಚಿತ್ರವನ್ನು ಮೆಗಾ ಸ್ಟಾರ್ ಚಿರಂಜೀವಿಯವರ ಹೋಂ ಬ್ಯಾನರ್ ನಲ್ಲಿ ನಿರ್ಮಾಣವಾಗುತಿದ್ದು, ಅವರ ಪುತ್ರ ರಾಮ್ ಚರಣ್ ಈ ಚಿತ್ರಕ್ಕೆ ಬಂಡವಾಳವನ್ನ ಹಾಕಿದ್ದಾರೆ.

  ಸೈರಾ' ಸೆಟ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ಸೈರಾ' ಸೆಟ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

  ಸೇರಿಲಿಂಗಂಪಲ್ಲಿಯಲ್ಲಿ ಚಿತ್ರಕ್ಕಾಗಿ ಸೆಟ್ ಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿತ್ತು. ಸರ್ಕಾರಿ ಭೂಮಿಯಲ್ಲಿ ಅನುಮತಿ ಇಲ್ಲದೆ ಸೆಟ್ ನಿರ್ಮಾಣ ಮಾಡಿರುವುದಕ್ಕೆ ಕಂದಾಯ ಅಧಿಕಾರಿಗಳು ಸೆಟ್ ಅನ್ನು ಕೆಡವಿದ್ದಾರೆ. ಈ ಸ್ಥಳದಿಂದ ಸೆಟ್ ಅನ್ನು ಸ್ಥಳಾಂತರಿಸಲು ಹಲವು ಬಾರಿ ಚಿತ್ರತಂಡಕ್ಕೆ ಸೂಚನೆಗಳನ್ನು ನೀಡಲಾಗಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ.

  revenue department shocks sye raa tollywood movie

  ಇದು ಭೂ ಸ್ವಾಧೀನಕ್ಕೆ ಚಿತ್ರತಂಡ ಹಾಕಿದ್ದ ಪೂರ್ವ ಯೋಜಿತ ಪ್ಲಾನ್ ಎಂದು ಆದಾಯ ಅಧಿಕಾರಿಗಳು ಸಂಶಯವನ್ನ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  English summary
  The Revenue Department has dismantled Sye Raa movie hero house set by stating that the land located at Serilingampally revenue village, which these sets are setup is a Government land.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X