»   » ಪೊಲೀಸ್ ಇಲಾಖೆಗೆ 'ಕಿಲ್ಲಿಂಗ್ ವೀರಪ್ಪನ್' ಸ್ಪೆಶಲ್ ಶೋ

ಪೊಲೀಸ್ ಇಲಾಖೆಗೆ 'ಕಿಲ್ಲಿಂಗ್ ವೀರಪ್ಪನ್' ಸ್ಪೆಶಲ್ ಶೋ

Posted By:
Subscribe to Filmibeat Kannada

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಹುನಿರೀಕ್ಷಿತ ಸಿನಿಮಾ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ನಿಂದ ಸಿನಿಮಾ ಭಾರಿ ಕುತೂಹಲ ಸೃಷ್ಟಿಸಿದೆ.

ಕುಖ್ಯಾತ ಕಾಡುಗಳ್ಳ ವೀರಪ್ಪನ್ ಅವರ ಜೀವನ ಚರಿತ್ರೆಯಾಧರಿತ ಕಥೆಯಾಗಿರುವುದರಿಂದ ವೀರಪ್ಪನ್ ಎನ್ ಕೌಂಟರ್ ಅನ್ನು ಚಿತ್ರದಲ್ಲಿ ಬಹಳ ವಿಭಿನ್ನ ದೃಷ್ಟಿಯಿಂದ ನೋಡಲಾಗಿದೆ.[ಹೊಸ ವರ್ಷಕ್ಕೆ 'ಕಿಲ್ಲಿಂಗ್ ವೀರಪ್ಪನ್' ಗ್ರ್ಯಾಂಡ್ ರಿಲೀಸ್]

RGV's 'Killing Veerappan' special show for police department

ಹಾಗಾಗಿ ಸಿನಿಮಾವನ್ನು ಎಲ್ಲರಿಗಿಂತ ಮುಂಚೆ ಪೊಲೀಸರಿಗೆ ತೋರಿಸಬೇಕು ಅನ್ನೋದು ನಿರ್ದೇಶಕ ವರ್ಮಾ ಅವರ ಅನಿಸಿಕೆ. ಆದ್ದರಿಂದ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮೊದಲ ಶೋ ಪೊಲೀಸ್ ಇಲಾಖೆಗೆ ತೋರಿಸೋ ನಿರ್ಧಾರವನ್ನು ವರ್ಮಾ ಅವರು ಮಾಡಿದ್ದಾರೆ.

ತಮ್ಮದೇ ಆದ ಇಲಾಖೆಯ ಸಾಹಸವನ್ನು ಸಾಮಾನ್ಯ ಪ್ರೇಕ್ಷಕರಿಗಿಂತ ಮುಂಚೆ ತೆರೆ ಮೇಲೆ ನೋಡುವ ಅವಕಾಶ ಪೊಲೀಸ್ ಅಧಿಕಾರಿಗಳದ್ದಾಗಲಿದೆ. ಎಲ್ಲ್ಲಾ ವಿಷಯದಲ್ಲೂ ವಿಶೇಷತೆ ಪ್ರದರ್ಶಿಸುತ್ತಿರುವ ಈ ಬಹುನಿರೀಕ್ಷಿತ ಸಿನಿಮಾದ ಮೊದಲ ಪ್ರದರ್ಶನ ಪೊಲೀಸರಿಗೆ ಇಟ್ಟಿರೋದು ವಿಶೇಷ.

ಸುಮಾರು 15 ವರ್ಷಗಳಿಂದ 1200 ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ವೀರಪ್ಪನ್ ಬೇಟೆಗೆ ಹೋರಾಡಿರುವುದರಿಂದ ವಿಶೇಷವಾಗಿ ಅವರಿಗೆ ಮೊದಲು ಚಿತ್ರದ ವಿಶೇಷ ಪ್ರದರ್ಶನ ನಡೆಸಿದ್ದೇನೆ ಎಂದು ನಿರ್ದೇಶಕ ವರ್ಮಾ ನುಡಿದಿದ್ದಾರೆ.[ಮುತ್ತುಲಕ್ಷ್ಮಿಯೊಂದಿಗೆ ಸಂಧಾನ: ಡಿ.11 ಕ್ಕೆ 'ಕಿಲ್ಲಿಂಗ್ ವೀರಪ್ಪನ್' ತೆರೆಗೆ? ]

RGV's 'Killing Veerappan' special show for police department

ಇದೇ ಮೊದಲ ಬಾರಿಗೆ ಖ್ಯಾತ ನಿರ್ದೇಶಕ ಆರ್ ಜಿ ವಿ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಜುಗಲ್ ಬಂದಿಯಲ್ಲಿ ನಿಜ ಜೀವನ ಕಥೆಯಾಧರಿತ ಸಿನಿಮಾ ತೆರೆ ಮೇಲೆ ರಾರಾಜಿಸಲಿದೆ.

ಇನ್ನುಳಿದಂತೆ ಬರುತ್ತಿರುವ ಹೊಸ ವರ್ಷಕ್ಕೆ ಜನವರಿ 1 ರಂದು ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಭರ್ಜರಿಯಾಗಿ ತೆರೆ ಕಾಣಲಿದ್ದು, ಚಿತ್ರದಲ್ಲಿ ಶಿವಣ್ಣ, ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ಸಂದೀಪ್ ಭಾರದ್ವಾಜ್, ಸಂಚಾರಿ ವಿಜಯ್ ಮುಂತಾದವರು ಪ್ರಮುಖವಾಗಿ ಮಿಂಚಿದ್ದಾರೆ.

English summary
There seems to be no end to the thoughts of director Ram Gopal Varma. The director, who awaits the release of controversial film on slain Sandalwood smuggler Veerappan, is going to arrange a special show to police department ahead of the film’s release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada