For Quick Alerts
  ALLOW NOTIFICATIONS  
  For Daily Alerts

  ಪ್ರೇಕ್ಷಕರಿಗೂ ಮುನ್ನ 'ದಿ ವಿಲನ್' ಚಿತ್ರ ಮೊದಲು ನೋಡುವವರು ಇವರೇ!

  By Pavithra
  |

  'ದಿ ವಿಲನ್' ಸದ್ಯ ಎಲ್ಲಾ ರೀತಿಯಲ್ಲಿಯೂ ಸುದ್ದಿ ಮಾಡುತ್ತಿರುವ ಸಿನಿಮಾ. ಒಂದೆಡೆ ವಿವಾದ, ಒಂದೆಡೆ ಕ್ವಾಲಿಟಿ ಟೀಸರ್ ಚಿತ್ರರಂಗದ ಕಡೆಯಿಂದ ಪ್ರಶಂಸೆ ಇಷ್ಟೆಲ್ಲಾ ಸೌಂಡ್ ಮಾಡುತ್ತಿರುವ 'ದಿ ವಿಲನ್' ಚಿತ್ರ ಆಗಸ್ಟ್ ನಲ್ಲಿ ತೆರೆ ಮೇಲೆ ಅಪ್ಪಳಿಸಲಿದೆ.

  ವರಮಹಾಲಕ್ಷ್ಮಿ ಹಬ್ಬದಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ. ಅದೇ ರೀತಿಯಲ್ಲಿ 'ದಿ ವಿಲನ್' ಚಿತ್ರ ರಿಲೀಸ್ ಆಗುವ ಮುಂಚೆಯೇ ಮೊದಲು ಚಿತ್ರವನ್ನು ನೋಡುವವರು ಯಾರು ಎನ್ನುವುದರ ಬಗ್ಗೆ ಸುದೀಪ್ ಸುಳಿವು ನೀಡಿದ್ದಾರೆ.

  ಹೌದು 'ದಿ ವಿಲನ್' ಚಿತ್ರವನ್ನು ಮೊದಲಿಗೆ ಆರ್ ಜಿ ವಿ ಅವರಿಗೆ ತೋರಿಸುವುದಾಗಿ ಸುದೀಪ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಟೀಸರ್ ನೋಡಿದ ನಂತರ ಟ್ವೀಟ್ ಮಾಡಿದ ರಾಮ್ ಗೋಪಾಲ್ ವರ್ಮ "ತುಂಬಾ ಇನೋವೇಟಿವ್ ಆಗಿರುವ ಟೀಸರ್..ಈ ಹಿಂದೆ ನಾನು ಎಲ್ಲಿಯೂ ನೋಡಿರಲಿಲ್ಲ. ಶಿವರಾಜ್ ಕುಮಾರ್ ಹಾಗೂ ಸುದೀಪ್ ಡೆಡ್ಲಿ ಕಾಂಬಿನೇಶನ್ ನೋಡಲು ಕಾತುರರಾಗಿದ್ದೇನೆ" ಎಂದು ಟ್ವೀಟ್ ಮಾಡಿದ್ದರು.

  ಇದಕ್ಕೆ ಉತ್ತರವಾಗಿ ನಟ ಸುದೀಪ್ 'ಚಿತ್ರ ಬಿಡುಗಡೆಗೆ ಸಿದ್ದವಾದ ತಕ್ಷಣ ನಿಮಗೆ ಸಿನಿಮಾ ತೋರಿಸುತ್ತೇವೆ" ಎನ್ನುವುದನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಒಟ್ಟಾರೆ 'ದಿ ವಿಲನ್' ಚಿತ್ರವನ್ನು ಪ್ರೇಕ್ಷಕರಿಗೂ ಮುನ್ನ ರಾಮ್ ಗೋಪಾಲ್ ವರ್ಮ ವೀಕ್ಷಣೆ ಮಾಡಲಿದ್ದಾರೆ.

  English summary
  Director Ram Gopal Varma tweeted the teaser of Kannada film The Villain. RGV said"I'm keen to see Shivarajkumar and Sudeep together,".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X