»   » ರಿಕ್ಕಿ ಮೇನಿಯಾ ಶುರು, ಟ್ವಿಟ್ಟರ್ ನಲ್ಲಿ ಹವಾ ಹೇಗಿದೆ?

ರಿಕ್ಕಿ ಮೇನಿಯಾ ಶುರು, ಟ್ವಿಟ್ಟರ್ ನಲ್ಲಿ ಹವಾ ಹೇಗಿದೆ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು 'ಉಗ್ರಂ' ಬೆಡಗಿ ನಟಿ ಹರಿಪ್ರಿಯಾ ಅವರು ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ರಿಕ್ಕಿ' ಈ ವಾರ (ಜನವರಿ 22) ಬಿಡುಗಡೆ ಆಗಿದೆ. ರಿಷಬ್ ಶೆಟ್ಟಿ ಚೊಚ್ಚಲ ನಿರ್ದೇಶನ ಹೊಂದಿರುವ 'ರಿಕ್ಕಿ' ಸಿನಿಮಾವನ್ನು ಮೊದಲ ದಿನದ ಮೊದಲ ಶೋ ನಲ್ಲೇ ಪ್ರೇಕ್ಷಕರನ್ನು ಹಿಡಿದಿಟ್ಟಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ರಿಕ್ಕಿ ಮೇನಿಯಾ ಶುರುವಾಗಿದೆ, ಟ್ವಿಟ್ಟರ್ ನಲ್ಲಿ ಹವಾ ಹೇಗಿದೆ? ಮುಂದೆ ಓದಿ...

'ಬರಡಾದ ಆಗಸಕೆ ಕಾಡಿರುವುದು ಒಂದು ನೆನಪು, ಹುಡುಕಾಟದ ನೆಪದಲ್ಲಿ ಭುವಿಗೆ ಬಂದಿಳಿದು' ಸುಂದರದ ಕವನದ ಸಾಲು. ಕಿಚ್ಚ ಸುದೀಪ್ ದನಿಯಲ್ಲಿನ "ನೆತ್ತರ ಹನಿ ಮಣ್ಣಿಗೆ ಬಿದ್ದು ಆಕಾಶ ಕೆಂಪಾಗಿ ನೋವಿಗೆ ಹೊಸ ಅರ್ಥ ಬಂದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ, ಸೂರಿನ ಸುಖವಿಲ್ಲ, ನಿದ್ದೆಯ ಕನಸಿಲ್ಲ,' ಸಿಂಪಲ್ ಸ್ಟಾರ್ ರಕ್ಷಿತ್ ಆರ್ಭಟಿಸುವ ಈ ಕಾಡೇನು ನಿಮ್ಮ ಅಪ್ಪನ ಮನೆಯ ಆಸ್ತಿನಾ? ಎಂಬ ಪಂಚಿಂಗ್ ಡೈಲಾಗ್ ಎಲ್ಲವೂ ಜನರನ್ನು ಚಿಂತನೆ ಹಚ್ಚುತ್ತಿದೆ. [ರಕ್ಷಿತ್ ಶೆಟ್ಟಿ 'ರಿಕ್ಕಿ' ಅವತಾರ್ ಸಿನ್ಮಾ ಮ್ಯಾಷ್ ಅಪ್ ಸ್ಟೈಲ್]

ಉಳಿದವರು ಕಂಡಂತೆ ಚಿತ್ರದ ಪೋಸ್ಟರ್ ಗಳನ್ನು ಬಳಸಿಕೊಂಡು ಮೀಮ್ಸ್, ಟ್ರಾಲ್ ಪೋಸ್ಟರ್ ಮಾಡಿ ಫ್ಯಾನ್ಸ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದರು. ಅದೇ ರೀತಿ ಈ ಚಿತ್ರಕ್ಕೆ ಅಭಿಮಾನಿಗಳಿಂದ ಶುಭ ಹಾರೈಕೆ ಸಿಕ್ಕಿದೆ. ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೆಲವರು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಕೆಲವು ಟ್ವೀಟ್ಸ್ ಇಲ್ಲಿವೆ ನೋಡಿ...[ಪ್ರೀತಿ ಸಂಘರ್ಷಗಳ ನಡುವೆ ಸಿಕ್ಕಿಕೊಂಡ 'ರಿಕ್ಕಿ'ಗೆ ಲಾಲ್ ಸಲಾಂ]

ಚಿತ್ರದ ಮೊದಲ ಪ್ರದರ್ಶನ ನೋಡಿ ಟ್ವೀಟ್

ಚಿತ್ರದ ಮೊದಲ ಪ್ರದರ್ಶನ ನೋಡಿ ಟ್ವೀಟ್ ಮಾಡುವ ಟ್ರೆಂಡ್ ಈಗೀಗ ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಿದೆ. ಇದು ಸುಮ್ಮನೆ ಫ್ಯಾನ್ಸ್ ಹುಟ್ಟಿಹಾಕುವ ಟ್ರೆಂಡ್ ಸೆಟ್ ಅಲ್ಲದೆ, ಖಡಕ್ ಆಗಿ ಮುಖಕ್ಕೆ ಹೊಡೆದಂತೆ ಸಿನಿಮಾ ಬಗ್ಗೆ ಒಂದೆರಡು ಸಾಲುಗಳಲ್ಲೇ ಎಲ್ಲವನ್ನು ಸಿನಿರಸಿಕರು ಹೇಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಸಿನಿಮಾ ಬಗ್ಗೆ ಟಾಕ್ ಬರುವುದಕ್ಕಿಂತ ಮುಂಚಿತವಾಗಿ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಕಾಣಿಸಿಕೊಂಡಿರುತ್ತದೆ.

ಮೊದಲಾರ್ಧ ನೋಡಿದ ಪ್ರೇಕ್ಷಕರ ರಿಪೋರ್ಟ್

ಮೊದಲಾರ್ಧ ನೋಡಿದ ಪ್ರೇಕ್ಷಕರ ರಿಪೋರ್ಟ್, ಉತ್ತಮ ಡೈಲಾಗ್ಸ್, ಮುಖ್ಯ ಭೂಮಿಕೆಯ ನಟ ನಟಿಯರ ಉತ್ತಮ ಅಭಿನಯ, ಸಾಧು ಕಾಮಿಡಿ ಸೂಪರ್.

ನಿರ್ಮಾಪಕ ಎಸ್ ವಿ ಬಾಬುಗೆ ಶುಭ ಹಾರೈಸಿದ ಹರಿಪ್ರಿಯಾ

ನಿರ್ಮಾಪಕ ಎಸ್ ವಿ ಬಾಬುಗೆ ಶುಭ ಹಾರೈಸಿದ ನಾಯಕ ನಟಿ ಹರಿಪ್ರಿಯಾ

ಮುಖ್ಯ ಚಿತ್ರಮಂದಿರ ಅಭಿನಯದಲ್ಲಿ ರಿಕ್ಕಿ ಮೇನಿಯಾ

ಮುಖ್ಯ ಚಿತ್ರಮಂದಿರ ಅಭಿನಯದಲ್ಲಿ ರಿಕ್ಕಿ ಮೇನಿಯಾ ಹೇಗಿತ್ತು ನೋಡಿ

ಕಿಚ್ಚ ಸುದೀಪ್ ಅವರಿಂದ ಚಿತ್ರಕ್ಕೆ ಶುಭಹಾರೈಕೆ

ರಿಕ್ಕಿ ಚಿತ್ರಕ್ಕೆ ಹಿನ್ನಲೆ ದನಿ ನೀಡಿರುವ ನಟ ಕಿಚ್ಚ ಸುದೀಪ್ ಅವರು ಚಿತ್ರ ತಂಡಕ್ಕೆ ಶುಭ ಹಾರೈಸಿದ್ದು ಹೀಗೆ.

ವೆಬ್ ಸೈಟ್ ಗಳಿಂದ ವಿಮರ್ಶೆ ಬರಲು ಶುರುವಾಗಿದೆ

ವೆಬ್ ಸೈಟ್ ಗಳಿಂದ ವಿಮರ್ಶೆ ಬರಲು ಶುರುವಾಗಿದೆ, ಕಥೆಯಲ್ಲಿ ತಾಜಾತನವಿದೆ, 4/5 ಎನ್ನುವ ಟ್ವೀಟ್

ಶಶಿಪ್ರಸಾದ್ ಅವರ ಮೊದಲ ಅನಿಸಿಕೆ

ವಿಮರ್ಶಕ ಶಶಿಪ್ರಸಾದ್ ಅವರ ಮೊದಲ ಅನಿಸಿಕೆ, ಯಾಕೋ ಎಲ್ಲೋ ಕದ್ದ ಟ್ಯೂನ್ ಕೇಳಿದಂತೆ ಭಾಸವಾಗುತ್ತದೆ ಎಂದು ಕಾಲೆಳೆದಿದ್ದಾರೆ.

ನಿರ್ದೇಶಕ ಸುನಿ ಅವರಿಂದ ಶುಭ ಹಾರೈಕೆ

ರಿಕ್ಕಿ ಚಿತ್ರಕ್ಕೆ ಸಿಂಪಲ್ಲಾಗೊಂದು ಲವ್ ಸ್ಟೋರಿ ನಿರ್ದೇಶಕ ಸುನಿ ಅವರಿಂದ ಶುಭ ಹಾರೈಕೆ

English summary
Kannada movie 'Ricky' directed by Rishab Shettty released today and got overwhelming response all over Karnataka. Rakshit Shetty, Haripriya are in the lead role. Here is the first day first show craze, tweets, audience response.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada