»   » ಬಿಗ್ ಬಿ ಜೊತೆ ಕೈ ಜೋಡಿಸಿದ 'ಗ್ರ್ಯಾಮಿ' ವಿಜೇತ ರಿಕ್ಕಿ!

ಬಿಗ್ ಬಿ ಜೊತೆ ಕೈ ಜೋಡಿಸಿದ 'ಗ್ರ್ಯಾಮಿ' ವಿಜೇತ ರಿಕ್ಕಿ!

Posted By:
Subscribe to Filmibeat Kannada

ಗಾಯಕ ಹಾಗೂ ಸಂಯೋಜಕ, 'ಗ್ರ್ಯಾಮಿ ಪ್ರಶಸ್ತಿ' ವಿಜೇತ ಕನ್ನಡಿಗ ರಿಕ್ಕಿ ಕೇಜ್ ಇದೀಗ ಬಾಲಿವುಡ್ ಗೆ ಹಾರಿದ್ದಾರೆ . ಹೌದು ನಮ್ಮ ಬೆಂಗಳೂರಿನ ಹುಡುಗ ರಿಕ್ಕಿ ಕೇಜ್ ಅವರು ತಮ್ಮ ಕನಸಿನ ಯೋಜನೆಯನ್ನು ಬಿಗ್ ಬಿ ಜೊತೆ ಯಶಸ್ವಿಯಾಗಿ ಮುಗಿಸಿದ್ದಾರೆ.

ಈಗಾಗಲೇ ಹಾಡಿನ ರೇಕಾರ್ಡಿಂಗ್ ಮುಗಿಸಿರುವ ಹಾಡುಗಾರ ರಿಕ್ಕಿ ಕೇಜ್ ಅವರು ತಮ್ಮ ಕನಸಿನ ಪ್ರಾಜೆಕ್ಟ್ ಅಮಿತಾಭ್ ಬಚ್ಚನ್ ಜೊತೆ ಯಶಸ್ವಿಯಾಗಿ ಆಗಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ.[ಬೆಂಗಳೂರಿನ ಸಂಗೀತಗಾರ ರಿಕ್ಕಿ ಕೇಜ್ ಗೆ ಗ್ರ್ಯಾಮಿ ಪ್ರಶಸ್ತಿ]

Ricky Kej teams up with Amitabh Bachchan

ಲೆಜೆಂಡರಿ ಬಾಲಿವುಡ್ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕ ಖುಷಿಯಲ್ಲಿ ರಿಕ್ಕಿ ಕೇಜ್ ಅವರು 'ನನಗೆ ಇನ್ನು ಕಾಯಲು ಸಾಧ್ಯವಿಲ್ಲ, ಆದಷ್ಟು ಬೇಗ ಈ ಹಾಡನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.[ಪ್ರಧಾನಿ ಮೋದಿ ಜೊತೆಗೆ ರಿಕ್ಕಿ ಕೇಜ್ ದಂಪತಿ ಸೆಲ್ಫಿ ಚಿತ್ರ]

ಇನ್ನು ರಿಕ್ಕಿ ಅವರ ಹೃದಯಕ್ಕೆ ತುಂಬಾ ಹತ್ತಿರವಾದ ಹಾಡಿನ ಪ್ರಾಜೆಕ್ಟ್ ಇದಾಗಿದ್ದು, ಇದನ್ನು ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಮುಗಿಸಿದ ಸಂಭ್ರಮದಲ್ಲಿ ಕೇಜ್ ಅವರು ತೇಲಾಡುತ್ತಿದ್ದಾರೆ.

ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಬಹಳ ಸೀಕ್ರೆಟ್ ಕಾಪಾಡಿಕೊಂಡಿದ್ದ ಹಾಡುಗಾರ ಇದೀಗ ಈ ಯೋಜನೆಯು ಕೊನೆಯ ಹಂತದಲ್ಲಿರುವ ಸಂದರ್ಭದಲ್ಲಿ ಬಿಗ್ ಬಿ ಅವರೊಂದಿಗೆ ಫೊಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

English summary
Grammy Award-winning musician and Bengaluru boy Ricky Kej, currently working on a project that has him contractually bound to maintain silence regarding anything related to it. And just wrapped up a recording with the Amitabh Bachchan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada