»   » ಪುಟ್ಟಣ್ಣ ಕಣಗಾಲ್ 'ಕಥಾ ಸಂಗಮ'ದ ಮೂಲಕ ರಿಷಬ್ ಶೆಟ್ಟಿ ಹೊಸ ಸಾಹಸ

ಪುಟ್ಟಣ್ಣ ಕಣಗಾಲ್ 'ಕಥಾ ಸಂಗಮ'ದ ಮೂಲಕ ರಿಷಬ್ ಶೆಟ್ಟಿ ಹೊಸ ಸಾಹಸ

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ನಿರ್ದೇಶಕ ರಿಷಬ್ ಶೆಟ್ಟಿ 7 ವಿಭಿನ್ನ ಕಥೆಗಳಿರುವ 'ಕಥಾ ಸಂಗಮ' ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ ಎಂದು ನಿಮ್ಮ ಫಿಲ್ಮಿಬೀಟ್ ನಲ್ಲಿ ಇತ್ತೀಚೆಗೆ ಹೇಳಿದ್ವಿ. ಈ ಸಿನಿಮಾ ಬಗ್ಗೆ ಈಗ ರಿಷಬ್ ಶೆಟ್ಟಿ ಲೇಟೆಸ್ಟ್ ಅಪ್ ಡೇಟ್ ನೀಡಿದ್ದಾರೆ.[ರಿಷಬ್ ನಿರ್ದೇಶನದಲ್ಲಿ ಬರಲಿದೆ 7 ಕಥೆ ಇರುವ ಒಂದೇ ಸಿನಿಮಾ!]

ಪುಟ್ಟಣ್ಣ ಕಣಗಾಲ್ ರವರಿಂದ ಸ್ಫೂರ್ತಿಗೊಂಡಿರುವ ರಿಷಬ್ ಶೆಟ್ಟಿ, 1975 ರಲ್ಲಿ ಬಿಡುಗಡೆ ಆದ ಪುಟ್ಟಣ್ಣ ಕಣಗಲ್ ರವರ ಜನಪ್ರಿಯ ಚಿತ್ರ 'ಕಥಾ ಸಂಗಮ' ಟೈಟಲ್ ಇಟ್ಟುಕೊಂಡೇ ನಿರ್ಮಾಣ ಮಾಡುತ್ತಿರುವ ಚಿತ್ರದ ಮೊದಲ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಕಥಾ ಸಂಗಮ' ಫೋಸ್ಟರ್ ಹೇಗಿದೆ ನೋಡಿ..

'ಕಥಾ ಸಂಗಮ' ಚಿತ್ರದ ಮೊದಲ ಪೋಸ್ಟರ್ ಅತ್ಯಾಕರ್ಷಕವಾಗಿದ್ದು, ರಿಷಬ್ ಶೆಟ್ಟಿಯ ಚಿತ್ರದ ಬಗ್ಗೆ ಸಿನಿ ಪ್ರಿಯರು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಷ್ಟು ಅಚ್ಚರಿದಾಯಕವಾಗಿದೆ.

ಆಂಥಾಲಜಿ ಕಾನ್ಸೆಪ್ಟ್ ಸಿನಿಮಾ

ಸಿನಿಮಾದ ಪೋಸ್ಟರ್ ನಲ್ಲಿ ಒಂಟಿಯಾಗಿ ಕುಳಿತ ಅನಾಥ ಹುಡುಗ, ಮಗು, ಬೈಕ್ ನಲ್ಲಿ ಟ್ರಕ್ಕಿಂಗ್ ಹೋಗುತ್ತಿರುವ ವ್ಯಕ್ತಿ, ಪಕ್ಷಿಗಳ ಹಾರಾಟವನ್ನು ನೋಡುತ್ತಾ ಕುಳಿತಿರುವ ಜೋಡಿ, ಪ್ರೇಮಿಗಳು ಇವರೆಲ್ಲರ ಚಿತ್ರಣ, ಅಭಿಮುಖವಾಗಿ ನೋಡುತ್ತಿರುವ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯ ತಲೆಯೊಳಗೆ ವಿನ್ಯಾಸಗೊಂಡಿದೆ. ಈ ರೀತಿಯ ವಿಭಿನ್ನ ಪೋಸ್ಟರ್ ಎಂತಹವರಿಗೆ ಆದರೂ ಚಿತ್ರದ ಬಗ್ಗೆ ಹೆಚ್ಚಿನ ಕ್ಯೂರಿಯಾಸಿಟಿ ಮೂಡಿಸದೇ ಇರದು.

ಏಳು ನಿರ್ದೇಶಕರಿಂದ ಮೂಡಲಿದೆ 'ಕಥಾ ಸಂಗಮ'

ಆಂಥಾಲಜಿ(ಹಲವು ಕಥೆಗಳಿರುವ ಸಿನಿಮಾ) ಚಿತ್ರಗಳು ಹೊಂದುವ ಪತ್ರಿಯೊಂದು ಕಥೆಗೂ ಜಸ್ಟಿಫಿಕೇಶನ್ ಕೊಡಬೇಕಾದ ದೊಡ್ಡ ಚಾಲೆಂಜ್ ನಿರ್ದೇಶಕರಿಗಿರುತ್ತದೆ. ರಿಷಬ್ ತಮ್ಮ ಪ್ರಧಾನ ನಿರ್ದೇಶನದಲ್ಲಿ ನಿರ್ಮಾಣ ಮಾಡುತ್ತಿರುವ 'ಕಥಾ ಸಂಗಮ'ದಲ್ಲಿ ಏಳು ಕಥೆಗಳಿಗೆ ಏಳು ನಿರ್ದೇಶಕರು ಆಕ್ಷನ್ ಕಟ್ ಹೇಳಲಿದ್ದಾರೆ. ಅಲ್ಲದೇ ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಾಹಕರು ಚಿತ್ರಕ್ಕಾಗಿ ವರ್ಕ್ ಮಾಡಲಿದ್ದಾರೆ.

ಚಿತ್ರದ ತಾರಾಬಳಗದಲ್ಲಿ ಯಾರೆಲ್ಲಾ ಇರಲಿದ್ದಾರೆ?

ಈಗಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ರಿಷಬ್ ಶೆಟ್ಟಿ ತಾರಾಬಳಗದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಲ್ಲದೇ ನಿರ್ದೇಶಕರು, ಸಂಗೀತ ನಿರ್ದೇಶಕರು ಯಾರು ಎಂಬದನ್ನು ಬಹಿರಂಗಪಡಿಸಿಲ್ಲ.

ರಿಷಬ್ ಶೆಟ್ಟಿ ಹೋಮ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ

ರಿಷಬ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ 'ರಿಷಬ್ ಶೆಟ್ಟಿ ಫಿಲ್ಮ್ಸ್' ಅಡಿಯಲ್ಲಿ ಎಚ್.ಕೆ ಪ್ರಕಾಶ್ ಮತ್ತು ಪ್ರದೀಪ್ ಎನ್.ಆರ್ ಅವರ ಸಹಯೋಗದಲ್ಲಿ 'ಕಥಾ ಸಂಗಮ' ನಿರ್ಮಾಣ ಮಾಡಲಿದ್ದಾರೆ.

English summary
'Kirik Party' Movie Director Rishab Shetty has Posted his upcoming new kannada movie 'Katha Sangama' First Poster in Facebook. Here you can see 'Katha Sangama' Poster.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada