For Quick Alerts
  ALLOW NOTIFICATIONS  
  For Daily Alerts

  ಕಲೆ-ಸಂಸ್ಕೃತಿಯಿಂದ ಕಂಗೊಳಿಸುತ್ತಿದೆ ರಿಷಬ್ ದತ್ತು ಪಡೆದ ಸರ್ಕಾರಿ ಶಾಲೆ

  |

  'ಸಾ.ಹಿ.ಪ್ರಾ.ಶಾಲೆ ಕಾಸರಗೋಡು' ಎನ್ನುವ ಹೊಸತನದ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ರಿಷಬ್ ಶೆಟ್ಟಿ ಈಗ ಮತ್ತೊಂದು ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. ಸರ್ಕಾರಿ ಶಾಲೆಗಳ ಈಗಿನ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದ ರಿಷಬ್ ಶೆಟ್ಟಿ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಅದೆ ಸರ್ಕಾರಿ ಶಾಲೆಗೆ ರಿಷಬ್ ಹೊಸ ರೂಪ ಕೊಟ್ಟಿದ್ದಾರೆ.

  ಅಳಿವಿನಅಂಚಿನಲ್ಲಿರುವ ಕನ್ನಡ ಶಾಲೆಗಳ ಬಗ್ಗೆ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದ ರಿಷಬ್ ಅವರ 'ಸಾ.ಹಿ.ಪ್ರಾ.ಶಾಲೆ ಕಾಸರಗೋಡು' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಶತದಿನೋತ್ಸವನ್ನು ಆಚರಿಸಿ ದಾಖಲೆ ನಿರ್ಮಿಸಿತ್ತು. ಮುಚ್ಚಿಹೋಗುತ್ತಿರುವ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ಮಕ್ಕಳು ಹೇಗೆ ಹೋರಾಟ ಮಾಡುತ್ತಾರೆ ಎನ್ನುವುದು ಚಿತ್ರದ ಮುಖ್ಯ ತಿರುಳಾಗಿತ್ತು. ಕರಾವಳಿ ಭಾಗದ ಕೈರಂಗಳ ಎನ್ನುವ ಗ್ರಾಮದ ಶಾಲೆ ಒಂದರಲ್ಲಿ ಈ ಚಿತ್ರವನ್ನು ಸೆರೆ ಹಿಡಿಯಲಾಗಿತ್ತು.

  'ಹೆಮ್ಮೆಯ ಕನ್ನಡಿಗ' ಪ್ರಶಸ್ತಿಯನ್ನು ಶಾಲಾ ಮಕ್ಕಳಿಗೆ ಅರ್ಪಿಸಿದ ರಿಷಭ್

  ಚಿತ್ರೀಕರಣ ಮಾಡಿದ ಕೈರಂಗಳ ಶಾಲೆಯನ್ನು ರಿಷಬ್ ಶೆಟ್ಟಿ ದತ್ತು ಪಡೆದಿದ್ದರು. ಈಗ ಆ ಶಾಲೆಗೆ ಮತ್ತೆ ಮರುಳಿರುವ ರಿಷಬ್ ಹೊಸ ರೂಪ ನೀಡಿದ್ದಾರೆ. ಕೈರಂಗಳ ಶಾಲೆ ಈಗ ರಂಗು ರಂಗಾಗಿ ಕಂಗೊಳಿಸುತ್ತಿದೆ. ಶಾಲೆಗೆ ಆಕರ್ಷಕವಾದ ಬಣ್ಣ ಬಳಿದು ಹೊಸ ಶಾಲೆಯಾಗಿ ಮಾರ್ಪಡಿಸಿದ್ದಾರೆ. ಮಕ್ಕಳಿಗೆ ಆಕರ್ಷಣೆಯಾಗವ ಹಾಗೆ ಗೋಡೆಗಳ ಮೇಲೆ ವಿವಿದ ಬಗೆಯ ಚಿತ್ರಗಳನ್ನು ಬಿಡಿಸಲಾಗಿದೆ.

  ತುಳುನಾಡಿ ಕಲೆ, ಸಂಸ್ಕೃತಿ ಶಾಲೆಯ ಗೋಡೆಗಳ ಮೇಲೆ ಅರಳಿದೆ. ಜನಪದ, ಪರಿಸರ ಸೇರಿದಂತೆ ತರಹೇವಾರಿ ಚಿತ್ರಕಲೆಗಳು ಗೋಡೆಗಳ ಮೇಲೆ ಕಂಕೊಳಿಸುತ್ತಿವೆ. ಬೇಸಿಗೆ ರಜೆ ಮುಗಿಸಿ ಶಾಲೆಗೆ ಬರುವ ಮಕ್ಕಳಿಗೆ ಇದು ಹೊಸ ಅನುಭವ ನೀಡಲಿದೆ.

  "ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ" ಎಂದು ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೆಟ್ಟಿ ಬೆರೆದುಕೊಂಡಿದ್ದಾರೆ.

  ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮದ ಪ್ರಭಾವದಿಂದ ಅದೆಷ್ಟೋ ಕನ್ನಡ ಶಾಲೆಗಳು ಮುಚ್ಚಿಹೋಗಿವೆ. ಇಂತಹ ಸಮಯದಲ್ಲಿ ರಿಷಬ್ ಮತ್ತು ತಂಡವರು ಮಾಡುತ್ತಿರುವ ಈ ಕೆಲಸ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

  English summary
  Kannada director Rishab Shetty returns to give his adopted school a vibrant makeover. It’s located in Kairangala, a village between Mangaluru and Kasargod.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X