twitter
    For Quick Alerts
    ALLOW NOTIFICATIONS  
    For Daily Alerts

    ಕಾಂತಾರಗೆ ಮೊದಲ ಆಯ್ಕೆ ಅಪ್ಪು ಅಲ್ಲ! ನಡೆದಿದ್ದೇನು ಎಂಬ ಸತ್ಯಾಂಶ ಬಿಚ್ಚಿಟ್ಟ ರಿಷಬ್ ಶೆಟ್ಟಿ

    |

    ಕಾಂತಾರ ರಿಷಬ್ ಶೆಟ್ಟಿ ನಿರ್ದೇಶನದ ನಾಲ್ಕನೇ ಸಿನಿಮಾ. ಮೊದಲಿಗೆ ರಿಕ್ಕಿ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ರಿಷಬ್ ಶೆಟ್ಟಿ ಕಿರಿಕ್‌ ಪಾರ್ಟಿ ಮೂಲಕ ದೊಡ್ಡ ಹಿಟ್ ನೀಡಿದರು ಹಾಗೂ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು: ಕೊಡುಗೆ ರಾಮಣ್ಣ ರೈ' ನಿರ್ದೇಶಿಸಿ ಮತ್ತೊಮ್ಮೆ ಸದ್ದು ಮಾಡಿದ್ದರು. ರಿಷಬ್ ಅವರ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡಿಗೆ ಅತ್ಯುತ್ತಮ ಮಕ್ಕಳ ಚಿತ್ರ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತು.

    ಹೀಗೆ ಮೂರೇ ಚಿತ್ರಗಳಲ್ಲಿ ತಾನು ಪ್ರತಿಭಾವಂತ ನಿರ್ದೇಶಕ ಎಂಬುದನ್ನು ನಿರೂಪಿಸಿಕೊಂಡ ರಿಷಬ್ ಶೆಟ್ಟಿ ಸ್ಯಾಂಡಲ್‌ವುಡ್‌ನ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮಾಡುವಂತ ಬೃಹತ್ ಅವಕಾಶ ಪಡೆದರು. ಯಶ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರಗಳಿಗೆ ಬಂಡವಾಳ ಹೂಡುತ್ತಿದ್ದ ಹೊಂಬಾಳೆ ಫಿಲ್ಮ್ಸ್ ಅದೇ ಮೊದಲ ಬಾರಿಗೆ ಬೇರೆ ನಟನೋರ್ವನ ಚಿತ್ರವನ್ನು ಘೋಷಿಸಿತ್ತು.

    Rishab Shetty revealed why Puneeth Rajkumar rejected to act in Kantara movie

    ಹೀಗೆ ರಿಷಬ್ ಹಾಗೂ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಚಿತ್ರಕ್ಕೆ ಕಾಂತಾರ ಎಂದು ಹೆಸರಿಡಲಾಗಿದ್ದು, ಈ ಚಿತ್ರ ಇದೇ ತಿಂಗಳ 30ರಂದು ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದ್ದು, ಹೊಂಬಾಳೆ ಕಡೆಯಿಂದ ಮಗದೊಂದು ಬ್ಲಾಕ್‌ಬಸ್ಟರ್ ಬರುವುದು ಖಚಿತ ಎನ್ನುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೆ ಸಂದರ್ಶನವೊಂದಲ್ಲಿ ಮಾತನಾಡಿದ್ದ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಅಭಿನಯಿಸಬೇಕಿತ್ತು ಆದರೆ ಡೇಟ್ಸ್ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ನಟಿಸಲಾಗಲಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಈ ವಿಷಯ ಕೇಳಿದ ಅಭಿಮಾನಿಗಳು ಅಪ್ಪು ಎಂಥ ಪ್ರಯೋಗಾತ್ಮಕ ಚಿತ್ರ ಮಿಸ್ ಮಾಡಿಕೊಂಡ್ರು ಎಂದರೆ, ಇನ್ನೂ ಕೆಲವರು ಇದೆಲ್ಲಾ ಪಬ್ಲಿಸಿಟಿಗಾಗಿ ಎಂದರು. ಆದರೆ ಇದೀಗ ಈ ಕುರಿತಾಗಿ ಸ್ವತಃ ರಿಷಬ್ ಶೆಟ್ಟಿಯವರೇ ಮಾತನಾಡಿದ್ದು ನಡೆದದ್ದೇನು ಎಂಬ ಸತ್ಯಾಂಶವೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

    ಕಾಂತಾರಗೆ ಮೊದಲ ಆಯ್ಕೆ ಯಾರು?

    ಕಾಂತಾರಗೆ ಮೊದಲ ಆಯ್ಕೆ ಯಾರು?

    ಚಿತ್ರದ ಬಿಡುಗಡೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ರಿಷಬ್ ಶೆಟ್ಟಿ ಮಸ್ತ್ ಸಿನಿಮಾ ಎಂಬ ಯುಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅಪ್ಪು ಅವರು ಈ ಸಿನಿಮಾ ಮಾಡಬೇಕಿತ್ತು ಎಂಬ ವಿಚಾರ ಬಂದಾಗ ನಡೆದಿದ್ದೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಈ ಚಿತ್ರದಲ್ಲಿ ಕತೆ ಬರೆಯುವಾಗಲೇ ನಾಯಕ ಶಿವ ಪಾತ್ರ ಮಾಡುವುದು ನಾನೇ ಎಂದು ಬರೆದಿದ್ದೆ ಎಂದಿದ್ದಾರೆ. ಈ ಮೂಲಕ ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ತಾವೇ ಎಂಬುದನ್ನು ರಿಷನ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.

    ಅಪ್ಪು ಸರ್‌ ಈ ಚಿತ್ರಕ್ಕೆ ಸರಿಯಾದ ಆಯ್ಕೆ

    ಅಪ್ಪು ಸರ್‌ ಈ ಚಿತ್ರಕ್ಕೆ ಸರಿಯಾದ ಆಯ್ಕೆ

    ಇನ್ನೂ ಮುಂದುವರೆದು ಮಾತನಾಡಿದ ರಿಷಬ್ ಶೆಟ್ಟಿ ಚಿತ್ರದ ಕುರಿತು ಮಾತನಾಡುವಾಗ ನಿರ್ಮಾಪಕ ವಿಜಯ್ ಸರ್ ಈ ಕತೆಯನ್ನು ಸ್ಟಾರ್ ನಟರಾದರೆ ಯಾರು ಮಾಡಬಹುದು ಎಂಬ ಪ್ರಶ್ನೆ ಕೇಳಿದ್ದರು ಎಂದಿದ್ದಾರೆ. ಚಿತ್ರದಲ್ಲಿ ಕಷ್ಟದ ಆಕ್ಷನ್ ಸೀನ್ ಹಾಗೂ ಕಂಬಳದ ಓಟದ ಸೀನ್‌ಗಳು ಹೆಚ್ಚಿರುವುದರಿಂದ ಚಿತ್ರಕ್ಕೆ ಅಪ್ಪು ಸರ್ ಸರಿಯಾದ ಆಯ್ಕೆ ಎಂದಿದ್ದೆ ಎಂದು ರಿಷಬ್ ತಿಳಿಸಿದ್ದಾರೆ.

    ಅಪ್ಪು ಕತೆ ಕೂಡ ಕೇಳಿದ್ರು

    ಅಪ್ಪು ಕತೆ ಕೂಡ ಕೇಳಿದ್ರು

    ಹೀಗೆ ಅಪ್ಪು ಸರ್ ಈ ಪಾತ್ರಕ್ಕೆ ಸ್ಯೂಟ್ ಆಗ್ತಾರೆ ಎಂದಿದ್ದೇ ತಡ ವಿಜಯ್ ಸರ್ ಅಪ್ಪು ಅವರಿಗೆ ಕರೆ ಮಾಡಿ ಕರೆಸಿದ್ರು ಹಾಗೂ ಕತೆಯನ್ನು ಕೇಳಿ ಅಪ್ಪು ಸರ್ ತುಂಬಾ ಇಷ್ಟ ಪಟ್ಟಿದ್ರು, ಇಂಥ ವಿಭಿನ್ನವಾದ ಕತೆಯಲ್ಲಿ ನಟಿಸಬೇಕೆಂಬ ಯೋಜನೆಯಲ್ಲಿದ್ದೇನೆ ಎಂದು ಕತೆಯನ್ನು ಒಪ್ಪಿಕೊಂಡಿದ್ರು ಎಂದು ರಿಷಬ್ ಶೆಟ್ಟಿ ತಿಳಿಸಿದ್ರು.

    ಡೇಟ್ ಸಮಸ್ಯೆಯಿಂದ ಮತ್ತೆ ಯೋಜನೆಯಲ್ಲಿ ಬದಲಾವಣೆ

    ಡೇಟ್ ಸಮಸ್ಯೆಯಿಂದ ಮತ್ತೆ ಯೋಜನೆಯಲ್ಲಿ ಬದಲಾವಣೆ

    ಇನ್ನು ಈ ಕಾಂತಾರ ಚಿತ್ರವನ್ನು ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲಗಳಲ್ಲಿ ನಿರಂತರವಾಗಿ ಚಿತ್ರೀಕರಿಸಿಬೇಕಾದ ಅನಿವಾರ್ಯತೆ ಇತ್ತು ಹಾಗೂ ಅಪ್ಪು ಸರ್ ಅದೇ ಸಮಯದಲ್ಲಿ ಜೇಮ್ಸ್ ಹಾಗೂ ದ್ವಿತ್ವ ಕಡೆ ಬ್ಯುಸಿ ಇದ್ರು, ಹೀಗೆ ಮೂರ್ನಾಲ್ಕು ಚಿತ್ರಗಳು ಇದ್ದ ಕಾರಣ ಸ್ವತಃ ಅಪ್ಪು ಸರ್ ಅವರೇ ಬಂದು ನೀವೇ ನಟಿಸಿಬಿಡಿ ನಾನು ನಟಿಸಬೇಕಂದ್ರೆ ಇನ್ನೂ ಒಂದು ವರ್ಷ ಕಾಯಬೇಕಾಗುತ್ತೆ ಎಂದು ಹೇಳಿದ್ದರು ಎಂದು ರಿಷಬ್ ಶೆಟ್ಟಿ ನಡೆದಿದ್ದೇನು ಎಂಬುದನ್ನು ತಿಳಿಸಿದ್ದಾರೆ. ಈ ಮೂಲಕ ಕಾಂತಾರ ಪುನೀತ್ ಅವರ ಡೇಟ್ ಸಮಸ್ಯೆಯಿಂದಾಗಿ ಮತ್ತೆ ರಿಷಬ್ ಬಳಿ ಹೋಯಿತು.

    English summary
    kantara, kantara movie, kantara puneeth rajkumar, kantara appu, why puneeth rejected kantara, rishab shetty, puneeth rajkumar, hombale films,
    Thursday, September 22, 2022, 17:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X