For Quick Alerts
  ALLOW NOTIFICATIONS  
  For Daily Alerts

  ರಿಷಬ್ ಶೆಟ್ಟಿ ನಿಜವಾದ ಹೆಸರೇ ಬೇರೆ, ಹುಟ್ಟು ಹೆಸರನ್ನು ಬದಲಾಯಿಸಿದ್ದೇಕೆಂದು ತಿಳಿಸಿದ ರಿಷಬ್ ತಂದೆ

  |

  ಕಾಂತಾರ ಇಡೀ ಭಾರತ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಚಿತ್ರ. ಬಜೆಟ್ ಚಿಕ್ಕದಾದರೂ ಕೆಜಿಎಫ್ ನಂತರ ದೇಶವ್ಯಾಪಿ ಅಬ್ಬರಿಸುತ್ತಿರುವ ಚಿತ್ರ ಇದಾಗಿದ್ದು ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡು ನಂತರ ವೀಕ್ಷಕರಿಂದ ದೊಡ್ಡ ಮಟ್ಟದ ಪ್ರಶಂಸೆ ಪಡೆದುಕೊಂಡ ಕಾರಣ ಈಗ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟಿದೆ.

  ಈ ಮೂಲಕ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ ಸರಣಿ ನಂತರ ಮತ್ತೊಮ್ಮೆ ಚಿನ್ನದ ಬೆಳೆ ಬೆಳೆದಿದ್ದರೆ, ನಿರ್ದೇಶಕ ರಿಷಬ್ ಶೆಟ್ಟಿ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂತರ ಮತ್ತೊಮ್ಮೆ ಆಕ್ಷನ್ ಕಟ್ ಹೇಳಿ ಗೆದ್ದಿದ್ದಾರೆ. ಇನ್ನು ಈ ಬಾರಿ ನಿರ್ದೇಶನದ ಜೊತೆಗೆ ರಿಷಬ್ ಶೆಟ್ಟಿ ನಟನೆಯನ್ನೂ ಸಹ ಮಾಡಿದ್ದು ಪ್ರೇಕ್ಷಕರು ನಿರ್ದೇಶನ ಹಾಗೂ ನಟನೆ ಎರಡಕ್ಕೂ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

  ಇನ್ನು ಕಾಂತಾರ ಯಶಸ್ಸಿನ ಬೆನ್ನಲ್ಲೇ ರಿಷಬ್ ಶೆಟ್ಟಿ ತಂದೆ ಭಾಸ್ಕರ್ ಶೆಟ್ಟಿ ಕನ್ನಡದ ಖಾಸಗಿ ಸುದ್ದಿ ವಾಹಿನಿ ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಮಾತನಾಡಿದ್ದು ಕಾಂತಾರ ಹಾಗೂ ರಿಷಬ್ ಶೆಟ್ಟಿ ಬಾಲ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ರಿಷಬ್ ಶೆಟ್ಟಿಯ ನಿಜವಾದ ವಯಸ್ಸನ್ನೂ ಸಹ ಭಾಸ್ಕರ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.

  ರಿಷಬ್ ಶೆಟ್ಟಿ ಹುಟ್ಟು ಹೆಸರು ಪ್ರಶಾಂತ್

  ರಿಷಬ್ ಶೆಟ್ಟಿ ಹುಟ್ಟು ಹೆಸರು ಪ್ರಶಾಂತ್

  ಸಂದರ್ಶನದಲ್ಲಿ ಮಾತನಾಡುತ್ತಿದ್ದ ಭಾಸ್ಕರ್ ಶೆಟ್ಟಿ ರಿಷಬ್ ಶೆಟ್ಟಿ ಹುಟ್ಟಿದಾಗ ಆತನಿಗೆ ಪ್ರಶಾಂತ್ ಎಂದು ನಾಮಕರಣ ಮಾಡಲಾಗಿತ್ತು ಎಂಬ ವಿಚಾರವನ್ನು ತಿಳಿಸಿದ್ದಾರೆ. ತಮ್ಮ ಅಣ್ಣನ ಮಗನಿಗೆ ಪ್ರವೀಣ್ ಶೆಟ್ಟಿ ಹಾಗೂ ಮಗಳಿಗೆ ಪ್ರತಿಭಾ ಶೆಟ್ಟಿ ಎಂದು ಹೆಸರಿಡಲಾಗಿತ್ತು ಅದರಂತೆ ಇವನಿಗೂ ಪ ಅಕ್ಷರದಿಂದ ಪ್ರಾರಂಭವಾಗುವ ಹಾಗೆ ಪ್ರಶಾಂತ್ ಎಂದು ನಾಮಕರಣ ಮಾಡಲಾಯಿತು ಎಂದು ಭಾಸ್ಕರ್ ಶೆಟ್ಟಿ ತಿಳಿಸಿದರು.

  ಹೆಸರು ಬದಲಾವಣೆಗೆ ಕಾರಣ?

  ಹೆಸರು ಬದಲಾವಣೆಗೆ ಕಾರಣ?

  ಇನ್ನು ಪ್ರಶಾಂತ್ ಎಂದು ಹೆಸರನ್ನು ರಿಷಬ್‌ಗೆ ಎಂದು ಬದಲಾಯಿಸಿದ್ದಕ್ಕೆ ಬಲವಾದ ಕಾರಣವೂ ಸಹ ಇದೆ. ರಿಷಬ್ ಶೆಟ್ಟಿ ಚಿತ್ರರಂಗ ಸೇರಬೇಕೆಂದು ಪರದಾಡುತ್ತಿದ್ದಾಗ ಹೆಸರನ್ನು ಬದಲಾಯಿಸಿಕೊಳ್ಳುವಂತೆ ಸಂಖ್ಯಾಶಾಸ್ತ್ರಜ್ಞನಾದ ನಾನೇ ಸೂಚಿಸಿದೆ, ಆಂಗ್ಲಭಾಷೆಯಲ್ಲಿ ಆರ್ ಅಕ್ಷರದಿಂದ ಪ್ರಾರಂಭವಾಗುವ ಆರು ಸ್ಪೆಲಿಂಗ್ ಇರುವ ಹೆಸರನ್ನು ಇಟ್ಟಿಕೊಳ್ಳುವಂತೆ ಹೇಳಿದ್ದೆ, ಹೀಗಾಗಿಯೇ ರಿಷಬ್ ( Rishab ) ಎಂದು ಹೆಸರನ್ನು ಬದಲಾಯಿಸಿತು ಎಂದು ಭಾಸ್ಕರ್ ಶೆಟ್ಟಿ ತಿಳಿಸಿದರು.

  ವಿಷಯ ತಿಳಿಯುತ್ತಿದ್ದಂತೆ ಶುರು ಟ್ರೋಲ್ಸ್

  ವಿಷಯ ತಿಳಿಯುತ್ತಿದ್ದಂತೆ ಶುರು ಟ್ರೋಲ್ಸ್

  ಇನ್ನು ರಿಷಬ್ ಶೆಟ್ಟಿ ಮೂಲ ಹೆಸರು ಪ್ರಶಾಂತ್ ಎಂದು ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಕನ್ನಡ ಚಿತ್ರರಂಗವನ್ನು ಈಗ ಮತ್ತೊಂದು ಹಂತಕ್ಕೆ ಇಬ್ಬರು ಪ್ರಶಾಂತ್ ಕೊಂಡೊಯ್ದಿದ್ದಾರೆ. ಒಬ್ಬರು ಪ್ರಶಾಂತ್ ನೀಲ್, ಇನ್ನೊಬ್ಬರು ಪ್ರಶಾಂತ್ ಶೆಟ್ಟಿ ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

  English summary
  Rishab Shetty's born name is Prashant Shetty says his father Bhaskar Shetty. Read on
  Wednesday, October 19, 2022, 17:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X