twitter
    For Quick Alerts
    ALLOW NOTIFICATIONS  
    For Daily Alerts

    Kantara : ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆದ 'ಕಾಂತಾರ' ಕಣ್ಣು ಈಗ ಆಸ್ಕರ್ ಮೇಲೆ; ಖಚಿತಪಡಿಸಿದ ಹೊಂಬಾಳೆ!

    |

    ಕಾಂತಾರ.. ಹದಿನಾರು ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ವಿಶ್ವ ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 400 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿತ್ತು. ಮೊದಲಿಗೆ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರ ಪರಭಾಷಾ ಸಿನಿ ರಸಿಕರಿಂದ ವ್ಯಕ್ತವಾದ ಪ್ರತಿಕ್ರಿಯೆಯಿಂದಾಗಿ ಇತರೆ ಭಾಷೆಗಳಿಗೂ ಸಹ ಡಬ್ ಆಗಿ ಪ್ಯಾನ್ ಇಂಡಿಯಾ ಚಿತ್ರವಾಯಿತು.

    ಈ ಮೂಲಕ ಚಿತ್ರದ ಕಂಟೆಂಟ್ ಒಂದು ಚೆನ್ನಾಗಿದ್ದರೆ ಬಜೆಟ್, ಜನಪ್ರಿಯತೆ ಗಳಿಸಿರುವ ನಟ, ಅದ್ಭುತ ಪ್ರಮೋಷನ್ ಚಿತ್ರದ ಗೆಲುವಿಗೆ ಅಗತ್ಯ ಬೀಳುವುದಿಲ್ಲ ಎನ್ನುವುದನ್ನು ಕಾಂತಾರ ಸಾಬೀತುಪಡಿಸಿತು. ಹೀಗೆ ಭಾರತ ಬಾಕ್ಸ್ ಆಫೀಸ್‌ನಲ್ಲಿ ಕಳೆದ ವರ್ಷ ಅತಿಹೆಚ್ಚು ಸದ್ದು ಮಾಡಿದ್ದ ಕಾಂತಾರ ಆಸ್ಕರ್ ರೇಸ್‌ಗೆ ಇಳಿಯಲು ಅರ್ಹವಿರುವ ಚಿತ್ರ ಎಂಬ ಅಭಿಪ್ರಾಯಗಳನ್ನು ಸಿನಿ ರಸಿಕರು ವ್ಯಕ್ತಪಡಿಸಿದ್ದರು.

    ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ದ ಕಾಂತಾರ ಇದೀಗ ಸಿನಿ ರಸಿಕರ ಊಹೆಯಂತೆ ಆಸ್ಕರ್‌ ರೇಸ್‌ಗೂ ಅರ್ಹತೆ ಪಡೆದುಕೊಂಡಿದೆ. ಹೌದು, ಕಾಂತಾರ ಚಿತ್ರ ಒಟ್ಟು ಎರಡು ಕೆಟಗರಿಗಳ ಅಡಿಯಲ್ಲಿ ಆಸ್ಕರ್ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ವಿಷಯವನ್ನು ಸ್ವತಃ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳ ಮೂಲಕ ತಿಳಿಸಿದೆ.

    ಎರಡು ಕೆಟಗರಿಗಳಲ್ಲಿ ಅರ್ಹತೆ

    ಎರಡು ಕೆಟಗರಿಗಳಲ್ಲಿ ಅರ್ಹತೆ

    ಇನ್ನು 95ನೇ ಆಸ್ಕರ್ ಪ್ರಶಸ್ತಿಗೆ ಒಟ್ಟು 301 ಚಿತ್ರಗಳು ಅರ್ಹತೆ ಗಿಟ್ಟಿಸಿಕೊಂಡಿದ್ದು, ಈ ಪೈಕಿ ಕಾಂತಾರ ಸಹ ಒಂದಾಗಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ - ನಟಿಯರ ಕೆಟಗರಿ ಅಡಿಯಲ್ಲಿ ಕಾಂತಾರ ಅರ್ಹತೆ ಪಡೆದುಕೊಂಡಿದೆ. ರಿಷಬ್ ಶೆಟ್ಟಿ, ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ ಹಾಗೂ ಮಾನಸಿ ಶ್ರೀಧರ್ ಹೆಸರು ಆಸ್ಕರ್‌ಗೆ ಅರ್ಹತೆ ಪಡೆದುಕೊಂಡಿರುವ ಚಿತ್ರ ಹಾಗೂ ಕಲಾವಿದರ ಪಟ್ಟಿಯಲ್ಲಿ ಇರುವುದನ್ನು ಕಾಣಬಹುದಾಗಿದೆ.

    ನಾಮ ನಿರ್ದೇಶನ ಘೋಷಣೆ ಯಾವಾಗ?

    ನಾಮ ನಿರ್ದೇಶನ ಘೋಷಣೆ ಯಾವಾಗ?

    ಆಸ್ಕರ್ ಪ್ರಶಸ್ತಿಗಾಗಿ ಕಾಂತಾರ ಸೇರಿದಂತೆ ಒಟ್ಟು 301 ಚಿತ್ರಗಳು ಅರ್ಹತೆ ಗಿಟ್ಟಿಸಿಕೊಂಡಿದ್ದು, ಈ ಪೈಕಿ ಎಷ್ಟು ಚಿತ್ರಗಳು ಯಾವ ಕೆಟಗರಿ ಅಡಿಯಲ್ಲಿ ನಾಮ ನಿರ್ದೇಶನಗೊಂಡಿವೆ ( ನಾಮಿನೇಟ್ ಆಗಿವೆ ) ಎಂಬ ಮಾಹಿತಿಯನ್ನು ಜನವರಿ 24ರಂದು ಘೋಷಿಸಲಾಗುತ್ತದೆ. ನಾಮಿನೇಟ್ ಆದ ಎಲ್ಲಾ ಕಲಾವಿದರೂ ಸಹ ಫೆಬ್ರವರಿ 13ರಂದು ನಡೆಯಲಿರುವ ಲಂಚ್‌ಆನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಮಾರ್ಚ್ ತಿಂಗಳಿನಲ್ಲಿ ಫೈನಲ್ ವೋಟಿಂಗ್

    ಮಾರ್ಚ್ ತಿಂಗಳಿನಲ್ಲಿ ಫೈನಲ್ ವೋಟಿಂಗ್

    ಇನ್ನು ಮಾರ್ಚ್ 2ರ ಬೆಳಗ್ಗೆ ಒಂಬತ್ತು ಗಂಟೆಯಿಂದ ಮಾರ್ಚ್ 7ರ ಸಂಜೆ ಐದು ಗಂಟೆಯವರೆಗೆ ನಾಮಿನೇಟ್ ಆದ ಕಲಾವಿದರು ಹಾಗೂ ಚಿತ್ರಗಳಿಗೆ ವೋಟಿಂಗ್ ನಡೆಯಲಿದ್ದು, ಮಾರ್ಚ್ 12ರ ಭಾನುವಾರದಂದು 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ರೀತಿ ಆಸ್ಕರ್ ರೇಸ್ ನಡೆಯಲಿದ್ದು, ಆಸ್ಕರ್ ಸದಸ್ಯರು ನೀಡುವ ಮತಗಳ ಆಧಾರದ ಮೇಲೆ ಆಸ್ಕರ್ ವಿಜೇತರನ್ನು ವಿಜೇತರೆಂದು ಆಯ್ಕೆ ಮಾಡಲಾಗುತ್ತದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸ್‌ನ ಸುಮಾರು 9500 ನುರಿತ ಸದಸ್ಯರು ಇಲ್ಲಿ ವೋಟ್ ಮಾಡಲಿದ್ದಾರೆ.

    English summary
    Rishab Shetty's 'Kantara has received 2 Oscar qualifications confirmed by Hombale Films.
    Tuesday, January 10, 2023, 12:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X