For Quick Alerts
  ALLOW NOTIFICATIONS  
  For Daily Alerts

  ಒಂದೇ ಚಿತ್ರಮಂದಿರದಲ್ಲಿ 1 ಲಕ್ಷ ಟಿಕೆಟ್ ಮಾರಾಟ; ಮತ್ತೊಂದು ಅಮೋಘ ದಾಖಲೆ ಬರೆದ ಕಾಂತಾರ!

  |

  ಕಾಂತಾರ, ಸದ್ಯ ಭಾರತದಾದ್ಯಂತ ಹೆಚ್ಚಾಗಿ ಕೇಳಿ ಬರುತ್ತಿರುವ ಚಿತ್ರದ ಹೆಸರು. ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾಗಿ ಅಬ್ಬರಿಸಿದ ಕಾಂತಾರ ಸಿನಿಮಾ ಈಗ ತೆಲುಗು ಹಾಗೂ ಹಿಂದಿಯಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಾಮಾನ್ಯ ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ಪರಭಾಷೆಯ ಸೆಲೆಬ್ರಿಟಿಗಳು ಸಹ ಕಾಂತಾರ ಚಿತ್ರವನ್ನು ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸಿ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಫಿದಾ ಆಗಿಬಿಟ್ಟಿದ್ದಾರೆ.

  ಇನ್ನು ಈಗಾಗಲೇ ಇನ್ನೂರು ಕೋಟಿ ಕ್ಲಬ್ ಸೇರಿರುವ ಕಾಂತಾರ ಚಿತ್ರ ಹಲವಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಚಿತ್ರ ಕರ್ನಾಟಕದಲ್ಲಿ 25 ದಿನಗಳನ್ನು ಪೂರೈಸಿದ್ದು, ಇಂದಿಗೂ ಸಹ ಪ್ರಮುಖ ನಗರಗಳ ಹಲವಾರು ಚಿತ್ರಮಂದಿರಗಳಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ತಾಲ್ಲೂಕುಗಳ ಬಿ ಕೇಂದ್ರಗಳಲ್ಲಿಯೂ ಕಾಂತಾರ ಚಿತ್ರ ತುಂಬಿದ ಪ್ರದರ್ಶನವನ್ನು ಕಾಣುತ್ತಿದೆ.

  ಒಂದೊಳ್ಳೆ ಚಿತ್ರ ಮಾಡಿದರೆ ಜನ ಚಿತ್ರಮಂದಿರಕ್ಕೆ ಖಂಡಿತ ಬಂದೇ ಬರುತ್ತಾರೆ ಎಂಬುದನ್ನು ಕಾಂತಾರ ಸಾಬೀತುಪಡಿಸಿದೆ. ಹೀಗೆ ಜನ ಕಾಂತಾರ ನರ್ತನಕ್ಕೆ ಮನಸೋತಿದ್ದು ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಹಾಜರ್ ಆಗುತ್ತಿದ್ದಾರೆ. ಹೀಗಾಗಿಯೇ ಕಾಂತಾರ ಕೆಲ ನಿರ್ದಿಷ್ಟ ಚಿತ್ರಮಂದಿರಗಳಲ್ಲಿನ ಹಳೆಯ ದಾಖಲೆಗಳನ್ನು ಹೊಡೆದುರುಳಿಸಿ ತನ್ನದೇ ಆದ ಹೊಸ ದಾಖಲೆಯನ್ನು ನಿರ್ಮಿಸಿ ಮುನ್ನುಗ್ಗುತ್ತಿದೆ.

   ಒಂದೇ ಚಿತ್ರಮಂದಿರದಲ್ಲಿ ಲಕ್ಷ ಟಿಕೆಟ್ ಸೇಲ್!

  ಒಂದೇ ಚಿತ್ರಮಂದಿರದಲ್ಲಿ ಲಕ್ಷ ಟಿಕೆಟ್ ಸೇಲ್!

  ಕಾಂತಾರ ಕನ್ನಡ ಅವತರಣಿಕೆ ಅಕ್ಟೋಬರ್ 23ರ ಭಾನುವಾರಕ್ಕೆ 24 ದಿನಗಳನ್ನು ಪೂರೈಸಿದೆ ಹಾಗೂ ಈ ದಿನದಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಸಿನಿಮಾಸ್ ಚಿತ್ರಮಂದಿರದಲ್ಲಿ ಕಾಂತಾರ ನೂತನ ದಾಖಲೆಯೊಂದನ್ನು ಬರೆದಿದೆ. ವೀರೇಶ್ ಚಿತ್ರಮಂದಿರದಲ್ಲಿ 24 ದಿನಗಳಲ್ಲಿ ಕಾಂತಾರ ಚಿತ್ರದ 100,900 ಟಿಕೆಟ್‌ಗಳು ಮಾರಾಟಗೊಂಡಿವೆ. ಇದು ವೀರೇಶ್ ಚಿತ್ರಮಂದಿರದ ಇತಿಹಾಸದಲ್ಲಿಯೇ ನಿರ್ಮಾಣಗೊಂಡ ನೂತನ ದಾಖಲೆಯಾಗಿದೆ.

   ವೀರೇಶ್ ಹಾಗೂ ಊರ್ವಶಿ ಚಿತ್ರಮಂದಿರದಲ್ಲಿ ಕೋಟಿ ಗಳಿಕೆ

  ವೀರೇಶ್ ಹಾಗೂ ಊರ್ವಶಿ ಚಿತ್ರಮಂದಿರದಲ್ಲಿ ಕೋಟಿ ಗಳಿಕೆ

  ಅಷ್ಟೇ ಅಲ್ಲದೆ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ವೀರೇಶ್ ಹಾಗೂ ಊರ್ವಶಿಯಲ್ಲಿ ಕಾಂತಾರ ಚಿತ್ರ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ವಿಚಾರವನ್ನು ಬಾಕ್ಸ್ ಆಫೀಸ್ ಪರಿಣಿತರು ತಿಳಿಸಿದ್ದಾರೆ. ಈ ಮೂಲಕ ಕೆಜಿಎಫ್ ಚಾಪ್ಟರ್ 2 ನಂತರ ಊರ್ವಶಿ ಚಿತ್ರಮಂದಿರದಲ್ಲಿ ಕೋಟಿ ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ. ಅಷ್ಟೇ ಅಲ್ಲದೇ ನಗರದ ವೀರೇಶ್, ಊರ್ವಶಿ ಹಾಗೂ ವಿಕ್ಟರಿ ಚಿತ್ರಮಂದಿರಗಳಲ್ಲಿ ಕಾಂತಾರ ನಾಲ್ಕನೇ ವಾರವೂ ಯಶಸ್ವೀ ಪ್ರದರ್ಶನ ಕಂಡಿರುವುದು ಇತ್ತೀಚಿನ ದಿನಗಳಲ್ಲಿ ಅಪರೂಪದ ಸಂಗತಿಯಾಗಿದೆ.

   ಕಾಂತಾರಕ್ಕೆ ಜೈ ಎಂದ ರಜನಿಕಾಂತ್

  ಕಾಂತಾರಕ್ಕೆ ಜೈ ಎಂದ ರಜನಿಕಾಂತ್

  ಕಾಂತಾರ ಚಿತ್ರವನ್ನು ದಕ್ಷಿಣ ಭಾರತ ಚಿತ್ರರಂಗದ ಹಾಗೂ ಬಾಲಿವುಡ್ ಚಿತ್ರರಂಗದ ಹಲವಾರು ತಾರೆಯರು ವೀಕ್ಷಿಸಿ ಕೊಂಡಾಡಿದ್ದರು. ಅದರಂತೆ ಇದೀಗ ರಜನೀಕಾಂತ್ ಕೂಡ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದು ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು ಎಂಬುದನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಿತ್ರಕ್ಕಿಂತ ಬೇರೆ ಯಾರೂ ಸಹ ಸಿನಿಮಾ ಮೂಲಕ ಅಚ್ಚುಕಟ್ಟಾಗಿ ತೋರಿಸಲು ಸಾಧ್ಯವಿಲ್ಲ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್ ಕಾಂತಾರ ಚಿತ್ರ ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ ಎಂದಿದ್ದಾರೆ.

  English summary
  Rishab Shetty starrer Kantara crossed 100k ticket sale and 1 cr collection in Veeresh Cinemas. Read on
  Wednesday, October 26, 2022, 19:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X