For Quick Alerts
  ALLOW NOTIFICATIONS  
  For Daily Alerts

  'ಬೆಲ್ ಬಾಟಮ್ 2', 'ಕಿರಿಕ್ ಪಾರ್ಟಿ 2' ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಮಾತು

  |

  ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಇಂಥಹಾ ಒಂದು ದೊಡ್ಡ ಯಶಸ್ಸನ್ನು ರಿಷಬ್ ಶೆಟ್ಟಿ ತಮ್ಮ ಸಿನಿಮಾ ಜರ್ನಿಯಲ್ಲಿ ಈವರೆಗೆ ಕಂಡಿರಲಿಲ್ಲ.

  ಕನ್ನಡ ಚಿತ್ರರಂಗದಲ್ಲಿ ನಟ ಹಾಗೂ ನಿರ್ದೇಶಕ ಎರಡೂ ಆಗಿ ಯಶಸ್ಸು ಕಂಡು ಕೆಲವೇ ನಟರಲ್ಲಿ ರಿಷಬ್ ಶೆಟ್ಟಿ ಸಹ ಒಬ್ಬರಾಗಿದ್ದಾರೆ. ನಟ, ನಿರ್ದೇಶಕ ಎರಡೂ ಆಗಿ ಯಶಸ್ಸು ಗಳಿಸಿರುವ ರಿಷಬ್ ಶೆಟ್ಟಿ. ಇದೀಗ 'ಕಾಂತಾರ'ದ ಬಳಿಕ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ್ದಾರೆ.

  ಪ್ರಸ್ತುತ ಇನ್ನೂ 'ಕಾಂತಾರ' ಸಿನಿಮಾದ ಪ್ರಚಾರ ಕಾರ್ಯದಲ್ಲಿಯೇ ನಿರತರಾಗಿರುವ ರಿಷಬ್ ಶೆಟ್ಟಿ, ಅದೇ ಸಿನಿಮಾ ಕುರಿತ ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಸಿನಿಮಾಗಳಾದ 'ಬೆಲ್ ಬಾಟಮ್ 2' ಹಾಗೂ 'ಕಿರಿಕ್ ಪಾರ್ಟಿ 2' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

  ''ಬೆಲ್ ಬಾಟಮ್ 2' ಸಿನಿಮಾ ಅದ್ಭುತವಾದ ಕತೆ ಹೊಂದಿದೆ. ದಯಾನಂದ ಟಿಕೆ ಅದ್ಭುತವಾದ ಕತೆಯನ್ನು ಹುಡುಕಿ ತಂದು ಬರೆದಿದ್ದಾರೆ. 'ಬೆಲ್ ಬಾಟಮ್ 2' ಸಿನಿಮಾ ಒಂದು ಪರ್ಫೆಕ್ಟ್ ಪಾರ್ಟ್ 2 ಸಿನಿಮಾ ಆಗಿರಲಿದೆ. ಮೊದಲ ಭಾಗಕ್ಕಿಂತಲೂ 10 ಪಟ್ಟು ಹೆಚ್ಚು ರೋಚಕವಾಗಿರಲಿದೆ. ಬಜೆಟ್ ವಿಷಯದಲ್ಲಿ ಸಹ ಮೊದಲ ಭಾಗಕ್ಕಿಂತಲೂ ಹೆಚ್ಚು ಗ್ರ್ಯಾಂಡ್ ಆಗಿರಲಿದೆ'' ಎಂದಿದ್ದಾರೆ.

  'ಕಿರಿಕ್ ಪಾರ್ಟಿ 2' ಬಗ್ಗೆಯೂ ಮಾತನಾಡಿರುವ ರಿಷಬ್ ಶೆಟ್ಟಿ, 'ಕಿರಿಕ್ ಪಾರ್ಟಿ 2' ಸಿನಿಮಾ ಮಾಡುವುದು ಪಕ್ಕಾ. 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಹೇಗೆ ಕೊನೆಯಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಾರೋ ಹಾಗೆಯೇ 'ಕಿರಿಕ್ ಪಾರ್ಟಿ 2' ಸಿನಿಮಾದಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಆಗ ಅವರ ನಡುವೆ ಏನು ನಡೆಯುತ್ತದೆ ಎಂಬುದೇ ಸಿನಿಮಾದ ಕತೆ. ಆದರೆ 'ಕಿರಿಕ್ ಪಾರ್ಟಿ' ಕತೆಗಿಂತಲೂ ಬಹಳ ಭಿನ್ನವಾಗಿ ಈ ಸಿನಿಮಾ ಇರಲಿದೆ ಎಂದಿದ್ದಾರೆ.

  'ಕಿರಿಕ್ ಪಾರ್ಟಿ' ಸಿನಿಮಾವನ್ನು ರಿಷಬ್ ಶೆಟ್ಟಿ, 2016 ರಲ್ಲಿ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. ಅದೇ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ನಟನೆಗೆ ಕಾಲಿಟ್ಟಿದ್ದರು.

  ಇನ್ನು 'ಬೆಲ್ ಬಾಟಮ್' ಸಿನಿಮಾದಲ್ಲಿ ರಿಷಬ್ ನಾಯಕ ನಟನಾಗಿ ನಟಿಸಿದ್ದಾರೆ. ಆ ಸಿನಿಮಾವನ್ನು ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಕತೆಯನ್ನು ಟಿಕೆ ದಯಾನಂದ ಬರೆದಿದ್ದಾರೆ. ಈಗ 'ಬೆಲ್ ಬಾಟಮ್ 2' ಬರಲಿದ್ದು, ಕೋವಿಡ್ ಕಾರಣದಿಂದ ಸಿನಿಮಾ ವಿಳಂಬವಾಗುತ್ತಿದೆ.

  English summary
  Rishab Shetty talks about his upcoming movies Kirik Party 2 and Bell Bottom 2 movie. He said Bell Bottom 2 is a kick-ass subject.
  Friday, October 14, 2022, 23:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X