For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್‌ಗೂ ಮೊದಲೇ ರಿಷಬ್ ಶೆಟ್ಟಿ ಸಿನಿಮಾ: ಮಾರ್ಚ್ 5ಕ್ಕೆ 'ಹೀರೋ' ಎಂಟ್ರಿ

  |

  ಕನ್ನಡದ ದೊಡ್ಡ ದೊಡ್ಡ ಚಿತ್ರಗಳು ರಿಲೀಸ್ ದಿನಾಂಕ ಘೋಷಣೆ ಮಾಡಿ ಚಿತ್ರಮಂದಿರಗಳನ್ನು ಕಾಯ್ದಿರಿಸಿವೆ. ಮಾರ್ಚ್, ಏಪ್ರಿಲ್, ಮೇ, ಜೂನ್ ಹಾಗೂ ಜುಲೈವರೆಗೂ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗಲಿದೆ.

  ಇದೀಗ, ರಿಷಬ್ ಶೆಟ್ಟಿ ನಟನೆಯ 'ಹೀರೋ' ಸಿನಿಮಾ ರಿಲೀಸ್ ದಿನಾಂಕ ಪ್ರಕಟಿಸಿದೆ. ಮಾರ್ಚ್ 5 ರಂದು ಚಿತ್ರಮಂದಿರಕ್ಕೆ ಬರುವುದಾಗಿ ತಿಳಿಸಿದೆ. ಅಂದ್ರೆ, ರಾಬರ್ಟ್ ಸಿನಿಮಾ ಬರುವುದಕ್ಕೂ ಒಂದು ವಾರ ಮುಂಚೆ 'ಹೀರೋ' ಎಂಟ್ರಿಯಾಗುತ್ತಿದೆ.

  'ನಿನ್ನ ಕೈ ಹಿಡಿದು ಹೊಸದೊಂದು ಮೈಲಿಗಲ್ಲನ್ನು ತಲುಪಿದ್ದೇನೆ': ಪತ್ನಿಗೆ ಶುಭಕೋರಿದ ರಿಷಭ್ ಶೆಟ್ಟಿ

  ಹೀರೋ ಸಿನಿಮಾ ಲಾಕ್‌ಡೌನ್ ಸಮಯದಲ್ಲಿ ತಯಾರಾಗಿರುವ ಚಿತ್ರ. ಇಡೀ ಚಿತ್ರರಂಗ ಸ್ತಬ್ದವಾಗಿ ಕುಳಿತಿದ್ದ ಸಮಯದಲ್ಲಿ ರಿಷಬ್ ಶೆಟ್ಟಿ ಮತ್ತು ತಂಡ ಹೀರೋ ಸಿನಿಮಾ ಮಾಡಿ ಮುಗಿಸಿತ್ತು.

  ಅಂದ್ಹಾಗೆ, ಈ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಭರತ್ ರಾಜ್. ರಿಷಬ್ ಶೆಟ್ಟಿ ನಾಯಕ ನಟ ಹಾಗೂ ನಿರ್ಮಾಪಕ ಮಾತ್ರ. ರಿಷಬ್ ಜೊತೆ ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಈಗಾಗಲೇ ಹೀರೋ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಕ್ರೈಂ ಥ್ರಿಲ್ಲರ್ ಹಾಗೂ ಕಾಮಿಡಿ ಜಾನರ್ ಕಥೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಹೀರೋ ಸಿನಿಮಾ ಬಿಟ್ಟು ಹರಿಕಥೆ ಅಲ್ಲ ಗಿರಿಕಥೆ, ಮಹಾನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ ಸೇರಿದಂತೆ ಹಲವು ಪ್ರಾಜೆಕ್ಟ್‌ ರಿಷಬ್ ಶೆಟ್ಟಿ ಅವರ ಕೈಯಲ್ಲಿಟ್ಟುಕೊಂಡಿದ್ದಾರೆ. ತೆಲುಗಿನ 'ಮಿಷನ್ ಇಂಪಾಸಿಬಲ್' ಚಿತ್ರದಲ್ಲೂ ನಟಿಸುತ್ತಿದ್ದಾರೆ.

  ನಡುಕ ಹುಟ್ಟಿಸುವಂತಿದೆ ಶಿವಣ್ಣನ ಮೋಷನ್ ಪೋಸ್ಟರ್
  English summary
  HERO release date announced: Rishabh Shetty Starrer directed by bharath raj featuring Ganavi Laxman to hit theatres on March 5th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X