For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಅಮೋಘ 50 ದಿನ: ಕನ್ನಡ ಮಣ್ಣಿನ ಕಥೆ ದಂತಕಥೆ ಆಗಿದ್ದೇಗೆ?

  |

  ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ಯಾವುದೇ ಸಿನಿಮಾ ಮಾಡದ ದಾಖಲೆಗಳನ್ನು ಮಾಡಿ 'ಕಾಂತಾರ' ಸಿನಿಮಾ 50 ದಿನ ಪೂರೈಸಿದೆ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಸಿನಿಮಾ ಸದ್ಯ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇವತ್ತಿಗೂ ಸಿನಿಮಾ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ.

  ಸಿನಿಮಾ ರಿಲೀಸ್‌ ಆಗುವವರೆಗೂ ಅಂತಹ ಬಝ್ ಇರಲಿಲ್ಲ. ಟ್ರೈಲರ್ ನೋಡಿದ್ದ ಕನ್ನಡ ಸಿನಿರಸಿಕರಿಗೆ ಭಾರೀ ನಿರೀಕ್ಷೆ ಇತ್ತು. ಆದರೆ ಮೊದಲ ದಿನ ಸಿನಿಮಾ ತೆರೆಗಪ್ಪಳಿಸಿದ ಮೇಲೆ ನಡೆದಿದ್ದು ಚಮತ್ಕಾರ. ಮೌತ್‌ ಟಾಕ್‌ನಿಂದ 'ಕಾಂತಾರ' ಸಿನಿಮಾ ಪ್ರಪಂಚದ ಮೂಲೆ ಮೂಲೆಗೆ ತಲುಪುವಂತಾಯಿತು. ಸಿಂಪಲ್ ಕಥೆಯನ್ನು ಪರಿಣಾಮಕಾರಿ ಕಟ್ಟಿಕೊಟ್ಟು ರಿಷಬ್ ಶೆಟ್ಟಿ ಗೆದ್ದಿದ್ದರು. ಇನ್ನು ಶಿವನ ಪಾತ್ರದಲ್ಲಿ ಅವರ ಅಭಿನಯಕ್ಕೆ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದರು. ಅದರಲ್ಲೂ ಕ್ಲೈಮ್ಯಾಕ್ಸ್ ಬಗ್ಗೆ ಕೊಂಡ ಹೆಚ್ಚೇ ಮಾತನಾಡಲು ಶುರು ಮಾಡಿದರು. ಮುಂದೆ ನೋಡ ನೋಡತ್ತಲೇ 4 ಭಾಷೆಗಳಿಗೆ ಡಬ್ ಆಗಿ ಅದ್ಭುತ ಓಪನಿಂಗ್ ಪಡೆದುಕೊಂಡಿತ್ತು.

  ಕೇರಳದಲ್ಲೇ 'ಕಾಂತಾರ' ಬಜೆಟ್ ವಾಪಸ್: ಭಾರೀ ಮೊತ್ತಕ್ಕೆ ತೆಲುಗು, ಮಲಯಾಳಂ ಸ್ಯಾಟಲೈಟ್ ರೈಟ್ಸ್ ಮಾರಾಟ!ಕೇರಳದಲ್ಲೇ 'ಕಾಂತಾರ' ಬಜೆಟ್ ವಾಪಸ್: ಭಾರೀ ಮೊತ್ತಕ್ಕೆ ತೆಲುಗು, ಮಲಯಾಳಂ ಸ್ಯಾಟಲೈಟ್ ರೈಟ್ಸ್ ಮಾರಾಟ!

  ಸೂಪರ್ ಸ್ಟಾರ್ ರಜನಿಕಾಂತ್, ಜ್ಯೂ.ಎನ್‌ಟಿಆರ್, ಧನುಷ್, ಕಾರ್ತಿ ರೀತಿಯ ಸ್ಟಾರ್ ನಟರು ಸಿನಿಮಾ ನೋಡಿ ಮೆಚ್ಚಿಕೊಂಡರು. ವಾರದಿಂದ ವಾರಕ್ಕೆ ಸಿನಿಮಾ ಥಿಯೇಟರ್‌ಗಳಲ್ಲಿ ಸ್ಟ್ರಾಂಗ್‌ ಆಗುತ್ತಾ ಹೋಯಿತು. ಪ್ರೇಕ್ಷಕರು ಕುಟುಂಬ ಸಮೇತ ಸಿನಿಮಾ ನೋಡಲು ಮುಗಿಬಿದ್ದರು ಅಲ್ಲಿಂದ ಮುಂದೆ ಇತಿಹಾಸ ಸೃಷ್ಟಿಯಾಯಿತು.

  ಮೊದಲ ವಾರವೇ 50 ಕೋಟಿ ಗಳಿಕೆ

  ಮೊದಲ ವಾರವೇ 50 ಕೋಟಿ ಗಳಿಕೆ

  ಇಂಗ್ಲೀಷ್ ಸಬ್‌ ಟೈಟಲ್‌ ಜೊತೆಗೆ ಮೊದಲ ಕನ್ನಡದಲ್ಲೇ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಿತ್ತು. ಮೊದಲ ದಿನ ಅಂದಾಜು 4ರಿಂದ 5 ಕೋಟಿ ಕಲೆಕ್ಷನ್ ಮಾಡಿತ್ತು. ಮರುದಿನ 6.50 ಕೋಟಿ ಮೂರನೇ ದಿನ 8 ರಿಂದ 8 ಕೋಟಿ ಹೀಗೆ ಕಲೆಕ್ಷನ್ ಏರುತ್ತಲೇ ಹೋಯಿತು. ಒಂದೇ ವಾರಕ್ಕೆ ಅಂದಾಜು 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು. ಅಷ್ಟರಲ್ಲಾಗಲೇ ಬುಕ್‌ಮೈ ಶೋನಲ್ಲಿ 99% ರೇಟಿಂಗ್ ದಾಖಲಾಗಿತ್ತು. ಅರೇ ಇಷ್ಟು ರೇಟಿಂಗ್ ಪಡೆದ ಸಿನಿಮಾದಲ್ಲಿ ಅಂತಾದ್ದೇನಿದೆ ಎಂದು ಪರಭಾಷಿಕರು ತಿರುಗಿ ನೋಡಲು ಶುರು ಮಾಡಿದ್ದರು.

  2 ವಾರದ ನಂತರ 4 ಭಾಷೆಗೆ ಡಬ್ಬಿಂಗ್

  2 ವಾರದ ನಂತರ 4 ಭಾಷೆಗೆ ಡಬ್ಬಿಂಗ್

  ಮೊದಲ ವಾರ ಕನ್ನಡದಲ್ಲಿ ಸಕ್ಸಸ್ ಕಾಣುತ್ತಿದ್ದಂತೆ ಪರಭಾಷಿಕರು ಸಿನಿಮಾ ನೋಡಿ ಬಹುಪರಾಕ್ ಎಂದರು. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಮೆಚ್ಚಿ ಬರೆದರು. ಅಷ್ಟರಲ್ಲಾಗಲೇ ಇದು ಪರಭಾಷಾ ವಿತರಕರು, ಪ್ರದರ್ಶಕರ ಕಿವಿಗೆ ಬಿತ್ತು. ಅವರು ಸಿನಿಮಾ ನೋಡಿದರು. ಸಿನಿಮಾ ಡಬ್ ಮಾಡಿ ಕೊಡುವಂತೆ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆ ಮೇಲೆ ಒತ್ತಡ ತಂದರು. ಒಲ್ಲದ ಮನಸ್ಸಿನಿಂದಲೇ ರಿಷಬ್ ಶೆಟ್ಟಿ ಒಪ್ಪಿದರು. ಆದರೆ ಹೊರ ರಾಜ್ಯಗಳಲ್ಲಿ ಸಿನಿಮಾ ಈ ಮಟ್ಟಿಗೆ ಸಕ್ಸಸ್ ಆಗುತ್ತೆ ಎಂದು ಸ್ವತಃ ಚಿತ್ರತಂಡ ಕೂಡ ನಿರೀಕ್ಷಿಸಿರಲಿಲ್ಲ. ರಿಷಬ್ ಶೆಟ್ಟಿ ಕೊನೆ ಗಳಿಗೆಯಲ್ಲಿ ಹೈದರಾಬಾದ್, ಚೆನ್ನೈ, ಮುಂಬೈಗೆ ಹೋಗಿ ಸುದ್ದಿಗೋಷ್ಠಿ ನಡೆಸಿ ಬಂದರು. ಆದರೆ ಎಲ್ಲಾ ಕಡೆ ಸಿನಿಮಾ ಅದ್ಭುತ ಓಪನಿಂಗ್ ಪಡೆದುಕೊಂಡತ್ತು.

  ರಜನಿ, ಧನುಷ್, ಪ್ರಭಾಸ್ ಬಹುಪರಾಕ್

  ರಜನಿ, ಧನುಷ್, ಪ್ರಭಾಸ್ ಬಹುಪರಾಕ್

  ಎಲ್ಲಾ ಕಡೆ ಸಿನಿಮಾ ಬಗ್ಗೆ ಅದ್ಭುತ ಪ್ರತಿಕ್ರಿಯೆ ಬರುತ್ತಿದ್ದಂತೆ ಸ್ಟಾರ್ ನಟರೇ ಸಿನಿಮಾ ನೋಡಲು ಮುಂದಾದರು. ಪ್ರಭಾಸ್ 2 ಬಾರಿ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದರು. "ಕಾಂತಾರ ನೋಡಿ ಎಂಜಾಯ್ ಮಾಡಿದೆ. ವಿಶೇಷವಾಗಿ ಕ್ಲೈಮ್ಯಾಕ್ಸ್. ಚಿತ್ರತಂಡಕ್ಕೆ ಶುಭವಾಗಲಿ" ಎಂದು ಪ್ರಭಾಸ್ ಟ್ವೀಟ್ ಮಾಡಿದರು. "ಕಾಂತಾರ ಒಂದು ಅದ್ಭುತ ಸಿನಿಮಾ. ರಿಷಬ್ ನೀವು ನಮಗೆ ಸ್ಪೂರ್ತಿ" ಎಂದು ರಾಣಾ ದಗ್ಗುಬಾಟಿ ಬರೆದುಕೊಂಡಿದ್ದರು. ಧನುಷ್ "ಕಾಂತಾರ ಮೈಂಡ್‌ ಬ್ಲೋಯಿಂಗ್" ಎಂದರು. ತಮಿಳು ನಟ ಕಾರ್ತಿ 'ಕಾಂತಾರ' ಸಿನಿಮಾ ನೋಡಿ ಬೆರಗಾಗಿದ್ದರು. ರಿಷಬ್ ಶೆಟ್ಟಿ ಭೇಟಿ ಮಾಡಿ ಸಂತಸ ಹಂಚಿಕೊಂಡರು. ಕೊಂಚ ತಡವಾಗಿ ಸಿನಿಮಾ ನೋಡಿದ ರಜನಿಕಾಂತ್ ಅವರು ರಿಷಬ್‌ ಶೆಟ್ಟಿನ ಮನೆಗೆ ಕರೆಸಿಕೊಂಡು ಸನ್ಮಾನಿಸಿದರು.

  ಹೌಸ್‌ಫುಲ್‌ ಹೌಸ್‌ಫುಲ್ ಹೌಸ್‌ಫುಲ್

  ಹೌಸ್‌ಫುಲ್‌ ಹೌಸ್‌ಫುಲ್ ಹೌಸ್‌ಫುಲ್

  ವಾರಗಳೇ ಕಳೆದರೂ ಥಿಯೇಟರ್‌ ಬರುವ ಪ್ರೇಕ್ಷಕರ ಸಂಖ್ಯೆ ಕಮ್ಮಿ ಆಗಲಿಲ್ಲ. ಕೆಲ ಥಿಯೇಟರ್‌ಗಳಲ್ಲಿ ಲಕ್ಷಕ್ಕೂ ಹೆಚ್ಚು ಜನ ಸಿನಿಮಾ ನೋಡಿದರು. ಪದೇ ಪದೇ ಥಿಯೇಟರ್‌ ಬಂದವರಿಗೆ ಲೆಕ್ಕವಿಲ್ಲ. ವಾರಗಳ ಕಾಲ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣಲು ಶುರುವಾಯಿತು. ಪರಿಣಾಮ ಸಿನಿಮಾ 100 ಕೋಟಿ, 200 ಕೋಟಿ, 300 ಕೋಟಿ ಗಡಿ ದಾಟುತ್ತಾ ಹೋಯಿತು. ಟೊರೆಂಟೋದಲ್ಲಿ ಚಿತ್ರದ ತೆಲುಗು ವರ್ಷನ್ ನೋಡಲು ಜನ ಕ್ಯೂ ನಿಂತಿದ್ದರು.

  300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 50 ದಿನ

  300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 50 ದಿನ

  ಹೊಂಬಾಳೆ ಸಂಸ್ಥೆ ನಿರ್ಮಿಸಿರುವ ಸಿನಿಮಾಗಳಲ್ಲೇ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ 'ಕಾಂತಾರ'. ಸ್ವತಃ ಚಿತ್ರತಂಡವೇ ಕರ್ನಾಟಕದಲ್ಲಿ 'ಕಾಂತಾರ' ಚಿತ್ರದ 1 ಕೋಟಿ ಟಿಕೆಟ್ ಮಾರಾಟ ಆಗಿದೆ ಎಂದು ಘೋಷಣೆ ಮಾಡಿತ್ತು. ಅಷ್ಟರಮಟ್ಟಿಗೆ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ಸದ್ದು ಮಾಡ್ತಿದೆ. ಸಿನಿಮಾ ಓಟಿಟಿ ರಿಲೀಸ್ ಡೇಟ್ ಮುಂದೂಡಲಾಗಿದೆ. ಶೀಘ್ರದಲ್ಲೇ ಸಿನಿಮಾ ಓಟಿಟಿಗೆ ಬರುವ ಸುಳಿವು ಸಿಗುತ್ತಿದೆ. ಹಿಂದಿ ವರ್ಷನ್ 75 ಕೋಟಿಗೂ ಅಧಿಕ ಗಳಿಕೆ ಕಂಡು ಅಚ್ಚರಿ ಮೂಡಿಸಿದೆ. ರಾಜ್ಯದಲ್ಲಿ 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ 50 ದಿನ ಪೂರೈಸಿ ದಾಖಲೆ ಬರೆದಿದೆ.

  English summary
  Rishabh Shetty Starrer Kantara Movie Completes 50 Days. The film Kannada version has completed 50 days theatrical run. Kantara has become one of the most appreciated films in Indian cinema. Know more.
  Friday, November 18, 2022, 12:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X