For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಕೈಲಿ ಏಟು ತಿಂದಿದ್ದರು ನಟ ರಿಶಿ ಕಪೂರ್!

  |

  ಬಾಲಿವುಡ್ ನಟ ರಿಶಿ ಕಪೂರ್ ಇಂದು ಅಗಲಿದ್ದಾರೆ. ಅಪಾರ ಅಭಿಮಾನಿ ವರ್ಗವನ್ನು ಅವರು ಬಿಟ್ಟು ಹೊರಟಿದ್ದಾರೆ.

  ದಯವಿಟ್ಟು ನಿಯಮಗಳನ್ನು ಪಾಲಿಸಿ ಎಂದ ಸುಮಲತಾ | Sumalatha Ambaresh | Follow the rules | Oneindia kannada

  ನಟ ರಿಶಿ ಕಪೂರ್‌ ಗೆ ಕರ್ನಾಟಕದೊಂದಿಗೆ ಸಂಪರ್ಕ ಹೆಚ್ಚೇನೂ ಇರಲಿಲ್ಲವಾದರೂ, ಅವರು ಮಂಡ್ಯದ ಗಂಡು ಅಂಬರೀಶ್ ಕೈಯಲ್ಲಿ ಹೊಡೆತ ತಿಂದಿದ್ದರು ಎಂಬುದು ಕುತೂಹಲದ ವಿಷಯ.

  ಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟ

  ಅಂಬರೀಶ್ ಕೈಲಿ ಹೊಡೆತ ತಿಂದಿದ್ದರು ಹೌದು, ಆದರೆ ಅದು ಸಿನಿಮಾದಲ್ಲಿ. ಹೌದು, ಅಂಬರೀಶ್ ಮತ್ತು ರಿಶಿ ಕಪೂರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ನಿರ್ದೇಶಿಸಿದ್ದು, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್.

  ಆ ಸಿನಿಮಾ ಯಾವುದು, ಯಾವ ಪಾತ್ರದಲ್ಲಿ ಅಂಬರೀಶ್ ನಟಿಸಿದ್ದರು, ವಿವರಗಳಿಗಾಗಿ ಮುಂದೆ ಓದಿ...

  ರಿಶಿ ಕಪೂರ್-ಅಂಬರೀಶ್ ಒಟ್ಟಿಗೆ ನಟಿಸಿದ್ದರು

  ರಿಶಿ ಕಪೂರ್-ಅಂಬರೀಶ್ ಒಟ್ಟಿಗೆ ನಟಿಸಿದ್ದರು

  ಕನ್ನಡದ ಮಾಸ್ಟರ್ ಪೀಸ್‌ ಸಿನಿಮಾಗಳಲ್ಲಿ ಒಂದಾದ ನಾಗರಹಾವು ಸಿನಿಮಾವನ್ನು ಹಿಂದಿಯಲ್ಲಿ ನಿರ್ದೇಶಿಸಿದ್ದರು ಪುಟ್ಟಣ್ಣ ಕಣಗಾಲ್. ಅದೇ ಸಿನಿಮಾದಲ್ಲಿ ರಿಶಿ ಕಪೂರ್ ಮತ್ತು ಅಂಬರೀಶ್ ಒಟ್ಟಿಗೆ ನಟಿಸಿದ್ದರು.

  ನಾಗರಹಾವು ಹಿಂದಿ ರೀಮೇಕ್

  ನಾಗರಹಾವು ಹಿಂದಿ ರೀಮೇಕ್

  ಕನ್ನಡದ ನಾಗರಹಾವು ಸಿನಿಮಾ ಹಿಂದಿಯಲ್ಲಿ 'ಜೆಹರೀಲಾ ಇನ್ಸಾನ್' ಆಗಿ ತೆರೆಗೆ ಬಂದಿತ್ತು. ಕನ್ನಡದಲ್ಲಿ ವಿಷ್ಣುವರ್ಧನ್ ನಿರ್ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ರಿಶಿ ಕಪೂರ್ ನಿರ್ವಹಿಸಿದ್ದರು. ಕನ್ನಡದಲ್ಲಿ ಜಲೀಲನಾಗಿದ್ದ ಅಂಬರೀಶ್ ಹಿಂದಿಯಲ್ಲಿಯೂ ಅದೇ ಪಾತ್ರ ನಿರ್ವಹಿಸಿದ್ದರು.

  ಜತೆಯಾಗಿ ಯುದ್ಧದಲ್ಲಿ ಗೆಲ್ಲೋಣ: ರಿಷಿ ಕಪೂರ್ ಕೊನೆಯದಾಗಿ ಮಾಡಿದ್ದ ಟ್ವೀಟ್ ಇದುಜತೆಯಾಗಿ ಯುದ್ಧದಲ್ಲಿ ಗೆಲ್ಲೋಣ: ರಿಷಿ ಕಪೂರ್ ಕೊನೆಯದಾಗಿ ಮಾಡಿದ್ದ ಟ್ವೀಟ್ ಇದು

  ಮಾರ್ಗರೇಟ್ ಪಾತ್ರ ಮಾಡಿದ್ದು ರಿಶಿ ಪತ್ನಿ ನೀತು

  ಮಾರ್ಗರೇಟ್ ಪಾತ್ರ ಮಾಡಿದ್ದು ರಿಶಿ ಪತ್ನಿ ನೀತು

  ಇಲ್ಲಿ ಆರತಿ ನಿರ್ವಹಿದ್ದ ನಿರ್ವಹಿಸಿದ್ದ ಅಲಮೇಲು ಪಾತ್ರವನ್ನು ಹಿಂದಿಯಲ್ಲಿ ಮೊಶುಮಿ ಚಟರ್ಜಿ ಮಾಡಿದ್ದರು. ಮಾರ್ಗರೇಟ್ ಪಾತ್ರದಲ್ಲಿ ನೀತು ಅಭಿನಯಿಸಿದ್ದರು. ಇವರನ್ನೇ ನಂತರ ರಿಶಿ ಕಪೂರ್ ಮದುವೆಯಾದರು. ಚಾಮಯ್ಯ ಮೇಷ್ಟ್ರ ಮಾತ್ರವನ್ನು ಪ್ರಾಣ್ ನಿರ್ವಹಿಸಿದ್ದರೆ, ಪೈಲ್ವಾನ್ ಪಾತ್ರದಲ್ಲಿ ಅಭಿನಯಿಸಿದ್ದುದು ಧಾರಾ ಸಿಂಗ್.

  ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು ಸಿನಿಮಾ

  ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು ಸಿನಿಮಾ

  ಜೆಹರೀಲಾ ಇನ್ಸಾನ್ ಅಷ್ಟೇನೂ ಉತ್ತಮ ಪ್ರದರ್ಶನ ಕಾಣಲಿಲ್ಲ, ಬಾಕ್ಸ್‌ಆಫೀಸ್‌ ನಲ್ಲಿ ಹೀನಾಯವಾಗಿ ಸೋತಿತು. ಅಂಬರೀಶ್ ಅವರ ಕೊನೆಯ ಹಿಂದಿ ಸಿನಿಮಾ ಸಹ ಇದೇ ಆಯಿತು. ಅಂಬರೀಶ್ ಆ ನಂತರ ಬಾಲಿವುಡ್‌ ನತ್ತ ತಲೆ ಹಾಕಲಿಲ್ಲ.

  ವೈರಲ್ ಆಗ್ತಿದೆ ರಿಶಿ ಕಪೂರ್ ಅಂತಿಮ ಕ್ಷಣದ ವಿಡಿಯೋ: ಸತ್ಯವೇನು?ವೈರಲ್ ಆಗ್ತಿದೆ ರಿಶಿ ಕಪೂರ್ ಅಂತಿಮ ಕ್ಷಣದ ವಿಡಿಯೋ: ಸತ್ಯವೇನು?

  English summary
  Actor Rishi Kapoor and Ambareesh acted in the Zehareela Insan movie. Directed by famous director Puttanna Kanagal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X