»   » ನಿತ್ಯಾನಂದ ಸ್ವಾಮಿ ಪಾತ್ರದಲ್ಲಿ ಋಷಿಕುಮಾರ ಸ್ವಾಮಿ

ನಿತ್ಯಾನಂದ ಸ್ವಾಮಿ ಪಾತ್ರದಲ್ಲಿ ಋಷಿಕುಮಾರ ಸ್ವಾಮಿ

Posted By:
Subscribe to Filmibeat Kannada

ಹಲವಾರು ಕಾರಣಗಳಿಗಾಗಿ ಜೋಗಿ ಪ್ರೇಮ್ ಅಭಿನಯಿಸುತ್ತಿರುವ ಸ್ವಂತ ಬ್ಯಾನರ್ ಚಿತ್ರ 'ಡಿ.ಕೆ' ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ಸನ್ನಿ ಲಿಯೋನ್ ವಿಶೇಷ ಗೀತೆಗೆ ಸ್ಟೆಪ್ ಹಾಕುತ್ತಿರುವುದು, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರದೇ ಕಥೆ ಇರಬಹುದೇ ಎಂಬ ಸಣ್ಣ ಗುಮಾನಿ ಮೂಡಿರುವುದು ಸೇರಿದಂತೆ ಹಲವಾರು ವಿಶೇಷತೆಗಳಿಂದ ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿರುವ ಚಿತ್ರ.

ಇದೀಗ ಈ ಚಿತ್ರಕ್ಕೆ ಹೊಸ ಸೇರ್ಪಡೆ ಎಂದರೆ ಕಾಳಿ ಮಠದ ಋಷಿಕುಮಾರ ಸ್ವಾಮಿ. ಚಿತ್ರದಲ್ಲಿ ಅವರದು ವಿವಾದಿತ ಸ್ವಾಮೀಜಿ ಎಂದೇ ಬಿಂಬಿತರಾಗಿರುವ ಬಿಡದಿ ಆಶ್ರಮದ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮೀಜಿ ಪಾತ್ರವನ್ನು ಪೋಷಿಸಲಿದ್ದಾರೆ. [ಡಿಕೆ 'ರಾ' ಲವ್ ಸ್ಟೋರಿಯ ಅಚ್ಚರಿ ಸೀಕ್ರೆಟ್ ಗಳು]

Rishi Kumar Swamiji

ಒಬ್ಬ ಸ್ವಾಮೀಜಿ ಇನ್ನೊಬ್ಬ ಸ್ವಾಮೀಜಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದಾರೆ ಎಂಬಂತಾಯಿತು. ಋಷಿಕುಮಾರ ಅವರು ಹೆಣ್ಣಿನ ಗೆಟಪ್ ನಲ್ಲಿರುವ ಫೊಟೋಗಳು ಈಗ ಎಲ್ಲೆಡೆ ಸುದ್ದಿ ಮಾಡುತ್ತಿವೆ. ಆದರೆ ಫೋಟೋದಲ್ಲಿರುವುದು ಅವರೇ ಎಂಬುದನ್ನು ಸೂಕ್ಷ್ಮವಾಗಿ ನೋಡಿದರೆ ಹೊರತು ಗೊತ್ತಾಗುವುದಿಲ್ಲ. ಅಷ್ಟರ ಮಟ್ಟಿಗೆ ಋಷಿಕುಮಾರ ಕಲಾವಿದರಾಗಿ ಬದಲಾಗಿದ್ದಾರೆ.

ಆದರೆ ಅವರ ಪಾತ್ರದ ಬಗ್ಗೆ ಮಾತ್ರ ಪ್ರೇಮ್ ತುಟಿ ಬಿಚ್ಚುತ್ತಿಲ್ಲ. ಆದರೆ ಮೂಲಗಳು ಮಾತ್ರ ಅದು ನಿತ್ಯಾನಂದನ ಪಾತ್ರ ಎನ್ನುತ್ತವೆ. ಈ ಚಿತ್ರದಲ್ಲಿ ಅವರು ಹಲವಾರು ಗೆಟಪ್ ಗಳಲ್ಲಿ ಕಾಣಿಸುತ್ತಾರಂತೆ. ಇದೀಗ ಹೆಣ್ಣಿನ ಗೆಟಪ್ ಚಿತ್ರಗಳು ಮಾತ್ರ ಬಿಡುಗಡೆಯಾಗಿವೆ ಅಷ್ಟೇ.

ಒಟ್ಟಾರೆಯಾಗಿ ಪ್ರೇಮ್ ಅವರು ಋಷಿಕುಮಾರ ಅವರಲ್ಲಿರುವ ಕಲಾವಿದರನ್ನು ಹೊರಗೆ ಎಳೆದು ತೆಗೆಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದೇ ಹೇಳಬೇಕು. ಇದೊಂದು ರಿಯಲ್ ಲವ್ ಸ್ಟೋರಿ ಅಂತ ನಿರ್ದೇಶಕ ಉದಯಪ್ರಕಾಶ್ ಹೇಳುತ್ತಾರೆ. ಹಾಗೆ ನೋಡಿದ್ರೆ ಚಿತ್ರತಂಡ ಬಾಯ್ಬಿಟ್ಟಿರೋದು ಇದೊಂದು ವಿಷಯವನ್ನ ಮಾತ್ರ. (ಏಜೆನ್ಸೀಸ್)

English summary
Kali Mutt seer Rishikumar Swamy playing a role in Prem's DK Movie. It is said that, that controversial god man Rishikumar will be imitating another controversial god man Nityananda in the film.
Please Wait while comments are loading...