»   » ಆರ್.ಜೆ ಆಯ್ತು ಇದೀಗ ಸಿಂಗರ್ ಆದ ರ‍್ಯಾಪಿಡ್‌ ರಶ್ಮಿ

ಆರ್.ಜೆ ಆಯ್ತು ಇದೀಗ ಸಿಂಗರ್ ಆದ ರ‍್ಯಾಪಿಡ್‌ ರಶ್ಮಿ

Posted By:
Subscribe to Filmibeat Kannada

ಹಾಸ್ಯ ನಟ ಕೋಮಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಡೀಲ್ ರಾಜ' ಚಿತ್ರ ಆಗಾಗ್ಗೆ ಅನೇಕ ಕಾರಣಗಳಿಗಾಗಿ ಸುದ್ದಿ ಮಾಡುತ್ತಿದೆ. ಈ ಮೊದಲು ಅಭಿಮನ್ ರಾಯ್ ಸಂಗೀತ ನೀಡಿ, ಸ್ವತಃ ಅವರೇ ರಚಿಸಿದ್ದ 'ನಿನ್ನನ್ನೇ ನಂಬಿರುವೆ ಪದ್ಮಾವತಿ' ಎನ್ನುವ ಹಾಡಿನ ಮೂಲಕ ಈ ಸಿನಿಮಾ ಸಖತ್ ಸುದ್ದಿ ಮಾಡಿತ್ತು.

ಇದೀಗ ಈ ಚಿತ್ರದ ಹಾಡೊಂದಕ್ಕೆ ರೇಡಿಯೋ ಜಾಕಿ ಆರ್ ಜೆ ರ‍್ಯಾಪಿಡ್‌ ರಶ್ಮಿ ಅವರು ತಮ್ಮ ಧ್ವನಿ ನೀಡಿದ್ದಾರೆ. 'ನಮಕ್ ಹರಾಮ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ರಶ್ಮಿ ಈಗ ಗಾಯಕಿಯಾಗಿ ಹೊಸ ಅವತಾರವೆತ್ತಿದ್ದಾರೆ.[ಗಣೇಶ್ ತಮ್ಮನ ಜೊತೆ ರ್‍ಯಾಪಿಡ್ ರಶ್ಮಿ ರೋಮ್ಯಾನ್ಸ್!]

RJ Rapid Rashmi to make her singing debut in 'Deal Raja'

'ರಿಂಗ ರಿಂಗ ರಿಂಗ ರಿಂಗ್ ಸ್ವಾಮಿ' ಎನ್ನುವ ಹೊಸ ಬಗೆಯ ಹಾಡಿಗೆ ರಶ್ಮಿ ತಮ್ಮ ಧ್ವನಿ ನೀಡಿದ್ದಾರೆ. ಈ ಹಾಡು ಕೂಡ ಕೇಳುಗರಿಗೆ ಸಖತ್ ಕಿಕ್ ಕೊಡಲಿದ್ದು, ಸದ್ಯದಲ್ಲೇ ಈ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.

ಇನ್ನು 'ಡೀಲ್ ರಾಜ' ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ 'ಯು/ಎ' ಪ್ರಮಾಣ ಪತ್ರ ನೀಡಿದ್ದಾರೆ. ವಿಶೇಷವೆಂದರೆ, ಇಡೀ ಚಿತ್ರದಲ್ಲಿ ಸೆನ್ಸಾರ್ ಮಂಡಳಿಯವರು ಯಾವುದೇ ಕತ್ತರಿ ಪ್ರಯೋಗ ಮಾಡಿಲ್ಲ.[ನಟ ಕೋಮಲ್ ನಂಬಿರುವ 'ಆ' ಪದ್ಮಾವತಿ ಬಗ್ಗೆ ಊರೆಲ್ಲಾ ಮಾತು.!]

RJ Rapid Rashmi to make her singing debut in 'Deal Raja'

ಎಸ್. ನಾರಾಯಣ್ ಅವರ ಬಳಿ ಸಹಾಯಕರಾಗಿ ದುಡಿದ ನಂತರ 'ಸಡಗರ' ಚಿತ್ರವನ್ನು ನಿರ್ದೇಶಿಸಿದ್ದ, ನಿರ್ದೇಶಕ ರಾಜ್ ಗೋಪಿ 'ಡೀಲ್ ರಾಜ' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ರವಿಚಂದ್ರ ರೆಡ್ಡಿ ಮತ್ತು ಕೃಷ್ಣಮೂರ್ತಿ ಅವರು ಮೇಘಧೂತ್ ಮೂವೀಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

RJ Rapid Rashmi to make her singing debut in 'Deal Raja'

ಅಭಿಮನ್ ರಾಯ್ ಮ್ಯೂಸಿಕ್ ಕಂಪೋಸ್ ಮಾಡಿರುವ ಈ ಚಿತ್ರದಲ್ಲಿ ಕಾಮಿಡಿ ನಟ ಕೋಮಲ್ ಜೊತೆಗೆ ನಾಯಕಿಯಾಗಿ ಭಾನುಶ್ರೀ ಮೆಹ್ರಾ ನಟಿಸಿದ್ದಾರೆ.

ಇನ್ನುಳಿದಂತೆ ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ತಬಲಾ ನಾಣಿ, ಅವಿನಾಶ್, ಸುಮನ್ ರಂಗನಾಥ್, ಜೈ ಜಗದೀಶ್, ಸುಚೇಂದ್ರ ಪ್ರಸಾದ್ ಸೇರಿದಂತೆ ರಜನಿಕಾಂತ್ ಅವರ 'ಶಿವಾಜಿ' ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ಖ್ಯಾತ ತಮಿಳು ನಟ ಬೋಸ್ ವೆಂಕಟ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

English summary
RJ Rapid Rashmi to make her singing debut in 'Deal Raja'. Kannada Movie 'Deal Raja' gets 'A' Certificate from the Censor Board. Kannada Actor Komal Kumar, Actress Bhanushree Mehra in the lead role. The movie is directed by Raj Gopi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada