»   » ರಾಕ್ ಸ್ಟಾರ್ ರೋಹಿತ್ 'ಕರ್ವ' ಹೀರೋ ಗುರು

ರಾಕ್ ಸ್ಟಾರ್ ರೋಹಿತ್ 'ಕರ್ವ' ಹೀರೋ ಗುರು

Posted By:
Subscribe to Filmibeat Kannada

ಸೂಪರ್ ಹಿಟ್ ಹಾರರ್ ಸಿನಿಮಾ 6-5=2 ಚಿತ್ರತಂಡದವರು 'ಕರ್ವ' ಎಂಬ ವಿಭಿನ್ನ ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೇ.

ಇನ್ನು ಹೊಸಬರ ಚಿತ್ರತಂಡದಿಂದ ಸದ್ಯಕ್ಕೆ ಹೊರ ಬಿದ್ದಿರುವ ಖಾಸ್ ಖಬರ್ ಏನಪ್ಪಾ ಅಂದ್ರೆ. ಇಲ್ಲಿಯವರೆಗೆ ಚಿತ್ರದಲ್ಲಿ ಯಾರು ಯಾರು ಕಾಣಿಸಿಕೊಳ್ಳುತ್ತಾರೆ ಎಂದು ಚಿತ್ರದ ನಿರ್ದೇಶಕ ನವನೀತ್ ಅವರು ಅವರು ಬಾಯಿ ಬಿಟ್ಟಿರಲಿಲ್ಲ. ಇದೀಗ ಚಿತ್ರದ ನಾಯಕ ಯಾರು ಎಂಬ ಸೀಕ್ರೇಟ್ ಅನ್ನು ನವನೀತ್ ಬಿಚ್ಚಿಟ್ಟಿದ್ದಾರೆ.[6-5=2 ಚಿತ್ರ ತಂಡದಿಂದ ಮತ್ತೊಂದು ಹೊಸ ಕೊಡುಗೆ]

rj-rohith-star-navaneeth-s-karvva-movie

ಈ ಬಾರಿ 'ಕರ್ವ' ಚಿತ್ರಕ್ಕೆ ನಾಯಕನಾಗಿ ಆಯ್ಕೆ ಆಗಿರುವವರು ರಾಕ್ ಸ್ಟಾರ್ ಅಂತಾನೇ ಖ್ಯಾತಿ ಗಳಿಸಿರುವ ಆರ್ ಜೆ ರೋಹಿತ್ ಅವರು. ಬೆಂಗಳೂರು ರೇಡಿಯೋ ಸಿಟಿಯಲ್ಲಿ ಆರ್.ಜೆ ಆಗಿ ಜನರ ಮೆಚ್ಚುಗೆ ಗಳಿಸಿರುವ ರೋಹಿತ್ ಬಿಗ್ ಬಾಸ್ 2ನಲ್ಲೂ ಸ್ಪರ್ಧಿಯಾಗಿ ಆಕರ್ಷಣೆಯಾಗಿದ್ದರು. [ರಿಯಾಲಿಟಿ ಶೋ ನಿರೂಪಕರಾಗಿ ಆರ್ ಜೆ ರೋಹಿತ್]

rj-rohith-star-navaneeth-s-karvva-movie

ಮಾತ್ರವಲ್ಲದೇ 'ಬಾಂಬೆ ಮಿಠಾಯಿ' ಸಿನಿಮಾದಲ್ಲೂ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಮನರಂಜಿಸಿದ್ದರು. ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ 'ಡಿವೈಡೆಡ್' ಎಂಬ ರಿಯಾಲಿಟಿ ಶೋ ಒಂದನ್ನು ನಡೆಸಿಕೊಟ್ಟಿದ್ದರು. ಇದೀಗ 'ಕರ್ವ' ಚಿತ್ರದ ಮೂಲಕ ಮತ್ತೆ ಜನಮನ ಗೆಲ್ಲಲ್ಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

6-5=2 ಸಿನಿಮಾದ ನಿರ್ಮಾಪಕ ಕೃಷ್ಣ ಚೈತನ್ಯ ಅವರು ಬಂಡವಾಳ ಹಾಕಿ ಅದೇ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ನಿರ್ದೇಶಕ ನವನೀತ್ ಅವರು ಆಕ್ಷನ್-ಕಟ್ ಹೇಳಲಿರುವ 'ಕರ್ವ' ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.

English summary
RJ Rohith Star in 'Karvva' movie. Another mystery thriller film from the makers of 6-5=2. The movie name is Karvva. Directed by Navaneeth. Produced by Krishna Chaithanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada