For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ರಾಬರ್ಟ್' ಚಿತ್ರದಿಂದ ಸಿಗುವ ಸರ್ಪ್ರೈಸ್ ಇದೇನಾ?

  |

  ಡಿ ಬಾಸ್ ದರ್ಶನ್ ಅಭಿಮಾನಿಗಳ ಚಿತ್ತ ಈಗ 'ರಾಬರ್ಟ್' ಸಿನಿಮಾದ ಮೇಲಿದೆ. ಚಿತ್ರದ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ 'ರಾಬರ್ಟ್' ಚಿತ್ರದಿಂದ ಇಂದು ಬಿಗ್ ಸುದ್ದಿಯೊಂದು ಹೊರಬೀಳಲಿದೆ ಎಂದು ನಿರ್ದೇಶಕ ತರುಣ್ ಸುಧೀರ್ ಅನೌನ್ಸ್ ಮಾಡಿದ್ದಾರೆ.

  ತರುಣ್ ಸುಧೀರ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು, ಡಿ ಬಾಸ್ ಚಿತ್ರದ ಅಪ್ ಡೇಟ್ ಏನಾಗಿರಬಹುದು ಎಂದು ಕಾಯುತ್ತಿದ್ದಾರೆ. ಸದ್ಯ ಪೊಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆಡಿಯೋ ರಿಲೀಸ್ ಗೆ ಎಲ್ಲ ತಯಾರಿಗಳನ್ನು ಮಾಡುತ್ತಿದೆ.

  'ದಾಸ' ದರ್ಶನ್ ಚಿತ್ರಕ್ಕೂ ತಟ್ಟಿತು ಕೊರೊನಾ ವೈರಸ್ ಭೀತಿ.!'ದಾಸ' ದರ್ಶನ್ ಚಿತ್ರಕ್ಕೂ ತಟ್ಟಿತು ಕೊರೊನಾ ವೈರಸ್ ಭೀತಿ.!

  ಜೊತೆಗೆ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಪ್ಲಾನ್ ನಲ್ಲಿದೆ. ಹಾಗಾಗಿ ತರುಣ್ ಸುಧೀರ್ ಚಿತ್ರದ ಆಡಿಯೋ ರಿಲೀಸ್ ಡೇಟ್ ಅಥವ ಟ್ರೈಲರ್ ರಿಲೀಸ್ ಡೇಟ್ ಅನ್ನು ರಿವೀಲ್ ಮಾಡುವ ಸಾಧ್ಯತೆ ಇದೆ. ಈಗಾಗಲೆ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ರಾಬರ್ಟ್ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ತೆರೆಗೆ ಬರುತ್ತಿದೆ. ಎರಡು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು, ಏಪ್ರಿಲ್ 10ಕ್ಕೆ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇಂದು ಸಂಜೆ 5 ಗಂಟೆಗೆ ಚಿತ್ರ ನೀಡುವ ಅಪ್ ಡೇಟ್ ಈ ಎಲ್ಲಾ ಕುತೂಹಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ.

  English summary
  Kannada Actor Darshan Roberrt movie big announcement on February 29th today. This movie is directed by Tarun Sudhir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X