For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ನೂತನ ದಾಖಲೆ: ಯಜಮಾನ ಬಳಿಕ ಎರಡನೇ ಸ್ಥಾನ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಡಿ ಬಾಸ್ ಸಿನಿಮಾ ಎಂಟ್ರಿ ಕೊಡುತ್ತಿದ್ದು, ಈಗಾಗಲೇ ಎರಡು ರಾಜ್ಯದಲ್ಲಿ ದಾಸನ ಕ್ರೇಜ್ ಹೆಚ್ಚಾಗಿದೆ.

  ಗಂಡು ಮೆಟ್ಟಿದ ನಾಡಲ್ಲಿ ಡಿ ಬಾಸ್ ಅಬ್ಬರ | Filmibeat Kannada

  ಹುಬ್ಬಳ್ಳಿಯಲ್ಲಿ ರಾಬರ್ಟ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಅದಕ್ಕೂ ಮುಂಚೆ ನಾಲ್ಕನೇ ಹಾಡು ರಿಲೀಸ್ ಮಾಡಿದೆ. ಯೋಗರಾಜ್ ಭಟ್ ಸಾಹಿತ್ಯ ಬರೆದಿರುವ 'ಕಣ್ಣ ಹೊಡಿಯೊಕಾ' ಹಾಡು ನಿನ್ನೆಯಷ್ಟೇ ತೆರೆಕಂಡಿದ್ದು ಯೂಟ್ಯೂಬ್‌ನಲ್ಲಿ ಸದ್ದು ಮಾಡ್ತಿದೆ.

  ಗಂಡು ಮೆಟ್ಟಿದ ನಾಡಲ್ಲಿ 'ರಾಬರ್ಟ್' ಅಬ್ಬರ: ಅದ್ದೂರಿ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ

  ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿದ್ದ ರಾಬರ್ಟ್ ಟ್ರೈಲರ್ ಈಗ 10 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಮೂಲಕ ಡಿ ಬಾಸ್ ಚಿತ್ರಗಳ ಪೈಕಿ ರಾಬರ್ಟ್ ಹೊಸ ದಾಖಲೆ ನಿರ್ಮಿಸಿದೆ. ಅಷ್ಟಕ್ಕೂ, ಏನಿದು ರಾಬರ್ಟ್ ದಾಖಲೆ? ಮುಂದೆ ಓದಿ....

  10 ಮಿಲಿಯನ್ ವೀಕ್ಷಣೆ ಕಂಡ ರಾಬರ್ಟ್

  10 ಮಿಲಿಯನ್ ವೀಕ್ಷಣೆ ಕಂಡ ರಾಬರ್ಟ್

  ತರುಣ್ ಸುಧೀರ್ ನಿರ್ದೇಶನದಲ್ಲಿ ತಯಾರಾಗಿರುವ ರಾಬರ್ಟ್ ಚಿತ್ರದ ಟ್ರೈಲರ್ ಯೂಟ್ಯೂಬ್‌ನಲ್ಲಿ 10 ಮಿಲಿಯನ್ ವೀಕ್ಷಣೆ ಕಂಡಿದೆ. ಟ್ರೈಲರ್ ರಿಲೀಸ್ ಆದ 6 ದಿನಗಳಲ್ಲಿ 10 ಮಿಲಿಯನ್ ವೀಕ್ಷಣೆ ಕಾಣುವ ಮೂಲಕ ರಾಬರ್ಟ್ ಅಪರೂಪದ ದಾಖಲೆ ಬರೆದಿದೆ. ಸದ್ಯ ದರ್ಶನ್ ಸಿನಿಮಾಗಳ ಪೈಕಿ ರಾಬರ್ಟ್ ಎರಡನೇ ಸ್ಥಾನದಲ್ಲಿದೆ.

  ಮೊದಲ ಸ್ಥಾನದಲ್ಲಿ ಯಜಮಾನ

  ಮೊದಲ ಸ್ಥಾನದಲ್ಲಿ ಯಜಮಾನ

  ಎರಡು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಯಜಮಾನ ಸಿನಿಮಾ ಟ್ರೈಲರ್ 20 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಸದ್ಯ ಡಿ ಬಾಸ್ ಸಿನಿಮಾಗಳ ಪೈಕಿ ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಯಜಮಾನ ಎನಿಸಿಕೊಂಡಿದೆ. ಹರಿಕೃಷ್ಣ ನಿರ್ದೇಶನದ ಯಜಮಾನ ಸಿನಿಮಾ 2019ರಲ್ಲಿ ಬಿಡುಗಡೆಯಾಗಿತ್ತು.

  ಕುರುಕ್ಷೇತ್ರ ಟ್ರೈಲರ್ ಎಷ್ಟು ವೀಕ್ಷಣೆ?

  ಕುರುಕ್ಷೇತ್ರ ಟ್ರೈಲರ್ ಎಷ್ಟು ವೀಕ್ಷಣೆ?

  2019ರಲ್ಲಿ ತೆರೆಕಂಡಿದ್ದ ಕುರುಕ್ಷೇತ್ರ ಸಿನಿಮಾದ ಟ್ರೈಲರ್ 5.5 ಮಿಲಿಯನ್ ವೀಕ್ಷಣೆ ಕಂಡಿದೆ. ದರ್ಶನ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದ ಈ ಚಿತ್ರ ಬಹುಭಾಷೆಯಲ್ಲಿ ಬಿಡುಗಡೆಯಾಗಿತ್ತು. ಪೌರಾಣಿಕ ಸಿನಿಮಾ ಎಂಬ ಕಾರಣಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿತ್ತು. ಸಿನಿಮಾನೂ ಅಷ್ಟೇ ಯಶಸ್ಸು ಸಾಧಿಸಿತ್ತು.

  ಒಡೆಯ - ತಾರಕ್ ಟ್ರೈಲರ್

  ಒಡೆಯ - ತಾರಕ್ ಟ್ರೈಲರ್

  ಕುರುಕ್ಷೇತ್ರದ ಬಳಿಕ ರಿಲೀಸ್ ಆಗಿದ್ದ ಒಡೆಯ ಸಿನಿಮಾದ ಟ್ರೈಲರ್ 4.2 ಮಿಲಿಯನ್ ವೀಕ್ಷಣೆ ಕಂಡಿದೆ. ಅದಕ್ಕೂ ಮುಂಚೆ 2017ರಲ್ಲಿ ರಿಲೀಸ್ ಆಗಿದ್ದ ತಾರಕ್ ಟ್ರೈಲರ್ 2.5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

  English summary
  Challenging star Darshan starrer Roberrt Movie trailer crossed 10 Million views in youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X