For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಈ 'ರಾಬರ್ಟ್' ರಾಮನೂ ಹೌದು.. ರಾವಣನೂ ಹೌದು..

  |
  ಅಭಿಮಾನಿಗಳ ಪ್ರಶ್ನೆಗೆ ತರುಣ್ ಸುಧೀರ್ ಕೊಟ್ಟ ಉತ್ತರ ಏನು ಗೊತ್ತಾ..? | Filmibeat Kannada

  ಡಿ ಬಾಸ್ ದರ್ಶನ್ ಹುಟ್ಟುಹಬ್ಬದ ವಿಶೇಷವಾಗಿ 'ರಾಬರ್ಟ್' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಇಷ್ಟು ದಿನ ಪೋಸ್ಟರ್ ಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದ ಚಿತ್ರತಂಡ, ಮೊದಲ ಬಾರಿಗೆ ಸಿನಿಮಾದ ದೃಶ್ಯವನ್ನು ಹಂಚಿಕೊಂಡಿದೆ.

  ಟೀಸರ್ ನಲ್ಲಿ ಎರಡ್ಮೂರು ಲುಕ್ ಗಳು ಬಂದು ಹೋಗುತ್ತದೆ. ಆಕ್ಷನ್ ದೃಶ್ಯಗಳು ಗಮನ ಆಗಿವೆ. ಇಲ್ಲ ದರ್ಶನ್ ರಾಮನೂ ಆಗಿದ್ದಾರೆ, ರಾಮಣನೂ ಆಗಿದ್ದಾರೆ. ಟೀಸರ್ ಕ್ವಾಲಿಟಿ, ಮೇಕಿಂಗ್ ತುಂಬ ಚೆನ್ನಾಗಿದೆ. 'ಹ್ಯಾಪಿ ಬರ್ತ್ ಡೇ ಬಾಸ್' ಎಂದು ಚಿತ್ರತಂಡ ಶುಭಾಶಯ ತಿಳಿಸಿದೆ.

  ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂದು ದರ್ಶನ್ ಪಾತ್ರಕ್ಕೆ ಮೂರು ಶೇಡ್ ಇದೆ. ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದಾರೆ. ಜಗಪತಿ ಬಾಬು ವಿಲನ್ ಆಗಿದ್ದಾರೆ.

  ತರುಣ್ ಸುಧೀರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನಲೆ ಸಂಗೀತ ನೀಡಿದ್ದಾರೆ.

  'ರಾಬರ್ಟ್' ಸಿನಿಮಾದ ಟೀಸರ್ ಇಂದು ಹೊರಬಂದಿದ್ದು, ನಂತರ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಆಗಲಿದೆ. ಏಪ್ರಿಲ್ 10 ರಂದು ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ.

  English summary
  Actor Darshan's 'Roberrt' movie teaser released. The movie is directing by Tharun Sudhir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X