For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ಸಕ್ಸಸ್: ವಿಜಯ ಯಾತ್ರೆ ಹೊರಟ ಸಿನಿಮಾತಂಡ, ಯಾವ ಊರಿಗೆ ಯಾವ ದಿನ ಭೇಟಿ?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ. ಮಾರ್ಚ್ 11ರಂದು ತೆರೆಗೆ ಬಂದ ರಾಬರ್ಟ್ ಇಂದಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಭರ್ಜರಿ ಕಲೆಕ್ಷನ್ ಮಾಡುತ್ತಾ ರಾಬರ್ಟ್ ಮುನ್ನುಗ್ಗುತ್ತಿದೆ.

  Roberrt ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ರಾಜ್ಯದ್ಯಂತ ಡಿಬಾಸ್ ಪ್ರವಾಸ | Filmibeat Kannada

  ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾ ಉತ್ತಮ ಪ್ರದರ್ಶನ ಕಾಣುತ್ತಿದೆ ರಾಬರ್ಟ್. ಇಷ್ಟು ದೊಡ್ಡ ಮಟ್ಟದ ಗೆಲುವಿಗೆ ಕಾರಣರಾದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ ತಿಳಿಸಲು ಸಿನಿಮಾತಂಡ ಅಭಿಮಾನಿಗಳನ್ನು ಭೇಟಿಯಾಗುವ ಕಾರ್ಯಕ್ರಮ ಹಮ್ಮಿಕೊಂಡಿದೆ.

  ರಿಯಲ್ ಸಾರಥಿ ಭೇಟಿಯಾದ ಸ್ಯಾಂಡಲ್ ವುಡ್ ಸಾರಥಿ: ಫೋಟೋ ಹಂಚಿಕೊಂಡ ದರ್ಶನ್

  ರಾಬರ್ಟ್ ಬಿಡುಗಡೆಗೂ ಮೊದಲು ಹುಬ್ಬಳ್ಳಿಯಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮ ಮಾಡುವ ಮೂಲಕ ಹುಬ್ಬಳ್ಳಿ ಮಂದಿಯನ್ನು ಭೇಟಿಯಾಗಿದ್ದ ಸಿನಿಮಾತಂಡ ಇದೀಗ ಇಡೀ ರಾಜ್ಯದ ಜನರನ್ನು ಭೇಟಿಯಾಗಿ ಖುಷಿ ಹಂಚಿಕೊಳ್ಳುವುದಕ್ಕೆ ಸಿದ್ಧರಾಗಿದ್ದಾರೆ.

  ರಾಬರ್ಟ್ ವಿಜಯ ಯಾತ್ರೆಗೆ ದರ್ಶನ್ ಮತ್ತು ತಂಡ ರೆಡಿಯಾಗಿದೆ. ಇದೇ ತಿಂಗಳು ಕೊನೆಯಲ್ಲಿ ರಾಬರ್ಟ್ ತಂಡ ರಾಜ್ಯದಾದ್ಯಂತ ವಿಜಯ ಯಾತ್ರೆ ಹೊರಡಲಿದೆ. ಇದೇ ತಿಂಗಳು ಮಾರ್ಚ್ 29ರಿಂದ ಪ್ರಾರಂಭವಾಗಲಿರುವ ವಿಜಯ ಯಾತ್ರೆ ಏಪ್ರಿಲ್ 1ರ ವರೆಗೂ ನಡೆಯಲಿದೆ.

  ಮಾರ್ಚ್ 29 ವಿಜಯ ಯಾತ್ರೆಯ ಮೊದಲ ದಿನ ರಾಬರ್ಟ್ ತಂಡ ತುಮಕೂರಿಗೆ ಭೇಟಿ ನೀಡುತ್ತಿದೆ. ತುಮಕೂರಿನಿಂದ ಪ್ರಾರಂಭವಾಗುವ ಯಾತ್ರೆ ಬಳಿಕ ಚಿತ್ರದುರ್ಗ, ದಾವಣಗೆರೆ ತಲುಪಿ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಮಾರ್ಚ್ 30ಕ್ಕೆ ಧಾರವಾಡ, ಹುಬ್ಬಳ್ಳಿ ಮತ್ತು ಹಾವೇರಿ ಅಭಿಮಾನಿಗಳನ್ನು ರಾಬರ್ಟ್ ತಂಡ ಭೇಟಿಯಾಗುತ್ತಿದೆ. 31ಕ್ಕೆ ಶಿವಮೊಗ್ಗ, ಹಾಸನ ಮತ್ತು ತಿಪಟೂರು ಏಪ್ರಿಲ್ 1ಕ್ಕೆ ಗುಂಡ್ಲುಪೇಟೆ, ಮೈಸೂರು, ಮಂಡ್ಯ ಮತ್ತು ಮದ್ದೂರಿಗೆ ಭೇಟಿ ನೀಡಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಲಿದ್ದಾರೆ.

  ತರುಣ್ ಸುಧೀರ್ ಸಾರಥ್ಯದಲ್ಲಿ ಮೂಡಿಬಂದಿರುವ ರಾಬರ್ಟ್ ಸಿನಿಮಾಗೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ. ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ನಟಿಸಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿ ಅಶಾ ಭಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇನ್ನು ವಿನೋದ್ ಪ್ರಭಾಕರ್, ಸೋನಲ್, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

  English summary
  Roberrt team planning to go on Vijaya Yatra from March 29th to April 1.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X