Just In
Don't Miss!
- Automobiles
ಮೈಲೇಜ್'ನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ, ರದ್ದಾಯ್ತು ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ನೀಡುತ್ತಿದ್ದ ಸಬ
- News
ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ: ಸಹೋದರ ಬಾಲಚಂದ್ರ ಹೇಳಿದ್ದೇನು?
- Lifestyle
ಊಟದ ನಂತರ ನೀರು ಕುಡಿದರೆ ಬೊಜ್ಜು ಬರುವುದೇ?
- Finance
ಜಿಯೋಗೆ ಸಿಕ್ತು ಭಾರತದ 22 ವೃತ್ತಗಳಲ್ಲೂ ಸ್ಪೆಕ್ಟ್ರಮ್ ಬಳಸುವ ಹಕ್ಕು
- Sports
ಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆ
- Education
NCDIR Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಧ್ರುವ ಸಿನಿಮಾ ನೋಡೋಕೆ ಹೋದವರಿಗೆ ಸರ್ಪ್ರೈಸ್ ದರ್ಶನ ನೀಡಿದ ಡಿ ಬಾಸ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಬೆಳಗ್ಗೆಯಿಂದಲೇ ಶೋ ಆರಂಭವಾಗಿದೆ. ಧ್ರುವ ಸರ್ಜಾ ನೋಡೋಕೆ ಹೋದವರಿಗೆ ಡಿ ಬಾಸ್ ಸರ್ಪ್ರೈಸ್ ದರ್ಶನ ನೀಡಿದ್ದಾರೆ. ಇದನ್ನು ಕಂಡ ಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.
ಧ್ರುವ ಸಿನಿಮಾದ ಪ್ರದರ್ಶನದ ವೇಳೆ ದರ್ಶನ್ ನಟನೆಯ ರಾಬರ್ಟ್ ಚಿತ್ರದ ಟ್ರೈಲರ್ ಪ್ರದರ್ಶನವಾಗಿದೆ. ರಾಜ್ಯದ ಕೆಲವು ಕಡೆ ರಾಬರ್ಟ್ ಟ್ರೈಲರ್ ಇಂಟರ್‌ವಲ್‌ನಲ್ಲಿ ಪ್ರಸಾರವಾಗಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೆಬ್ರವರಿ 20 ರಂದು ರಾಬರ್ಟ್ ಚಿತ್ರದ ಹೊಸ ಹಾಡು ರಿಲೀಸ್
ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಫೆಬ್ರವರಿ 16 ರಂದು ರಾಬರ್ಟ್ ಟ್ರೈಲರ್ ಬಿಡುಗಡೆಯಾಗಿತ್ತು. ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದ ರಾಬರ್ಟ್ ಟ್ರೈಲರ್ ಪ್ರಸ್ತುತ 8 ಮಿಲಿಯನ್ (8,344,046) ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ.
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಾಬರ್ಟ್ ಸಿನಿಮಾ ತೆರೆಕಾಣಲಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾಗಿದೆ. ಖ್ಯಾತ ವಿತರಕರು ರಾಬರ್ಟ್ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಇನ್ನು ಫೆಬ್ರವರಿ 20 ರಂದು ಸಂಜೆ 4.05 ನಿಮಿಷಕ್ಕೆ 'ಕಣ್ಣು ಹೊಡೆಯೋಕಾ.....' ಎಂಬ ಹಾಡಿನ ಲಿರಿಕಲ್ ವಿಡಿಯೋ ಬರಲಿದೆ. ಇದು ದರ್ಶನ್ ಮತ್ತು ನಟಿ ಆಶಾ ಭಟ್ ನಡುವಿನ ಡ್ಯುಯೆಟ್ ಹಾಡಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಹಾಡು ಮೂಡಿಬರಲಿದೆ.
ಡಿ-ಬಾಸ್ ದರ್ಶನ್ ಬರ್ತಡೇ ಪಾರ್ಟಿಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಇದ್ದರು?
ಇನ್ನುಳಿದಂತೆ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದಾರೆ. ಜಗಪತಿ ಬಾಬು, ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.