For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಫಸ್ಟ್ ಲುಕ್ ಆರ್ಭಟ: ಇಲ್ಲೂ ಇದೆ ಆ 'ಸಾಮಾನ್ಯ ಅಂಶ'

  |
  ಅಭಿಮಾನಿಗಳಿಗೆ ಖುಷಿ ಕೊಡ್ತಾ ರಾಬರ್ಟ್ ಫಸ್ಟ್ ಲುಕ್ | ROBERT | FIRST LOOK | DARSHAN

  ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ನೇ ತಾರೀಕು ಬೆಳಿಗ್ಗೆ 11.45ಕ್ಕೆ ರಾಬರ್ಟ್ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದಂತೆ ಚಿತ್ರತಂಡ ಫಸ್ಟ್ ಲುಕ್ ಬಿಟ್ಟಿದೆ.

  ನಿರೀಕ್ಷೆಯಂತೆ ರಾಬರ್ಟ್ ಫಸ್ಟ್ ಲುಕ್ ಗೆ ಡಿ ಬಾಸ್ ಭಕ್ತಗಣ ಖುಷ್ ಆಗಿದ್ದು, ಅದ್ಧೂರಿ ಸ್ವಾಗತ ಮಾಡಿದ್ದಾರೆ. ದರ್ಶನ್ ಅವರ ಹೊಸ ಲುಕ್, ಸ್ಟೈಲ್, ಗೆಟಪ್ ಕಂಡು ಅಚ್ಚರಿಯಾಗಿದ್ದಾರೆ.

  ಡಿ ಬಾಸ್ 'ರಾಬರ್ಟ್' ತಂಡದಿಂದ ಹೊರಬಿತ್ತು ಭರ್ಜರಿ ಸುದ್ದಿಡಿ ಬಾಸ್ 'ರಾಬರ್ಟ್' ತಂಡದಿಂದ ಹೊರಬಿತ್ತು ಭರ್ಜರಿ ಸುದ್ದಿ

  ಕೈಯಲ್ಲಿ ಗನ್, ಕಪ್ಪು ಬಣ್ಣದ ಜಾಕೆಟ್, ಕತ್ತಲ್ಲಿ ಯೇಸುವಿನ ಶಿಲುಬೆ, ಲಾಂಗ್ ಹೇರ್...ಜೊತೆಗೆ ಭರ್ಜರಿ ಮ್ಯೂಸಿಕ್, ಇದೆಲ್ಲವೂ ಪ್ರೇಕ್ಷಕರು ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದೆ. ಹೀಗಿದ್ದರೂ ಈ ಫಸ್ಟ್ ಲುಕ್ನಲ್ಲಿ ಒಂದು ಸಾಮಾನ್ಯ ಅಂಶ ಕಂಡುಬಂದಿದೆ. ಏನದು? ಮುಂದೆ ಓದಿ.....

  'ಬಾಸ್' ಬಿಡದ ಡೈರೆಕ್ಟರ್

  'ಬಾಸ್' ಬಿಡದ ಡೈರೆಕ್ಟರ್

  ದರ್ಶನ್ ಅವರ ಚಿತ್ರಗಳ ಟೀಸರ್ ನಲ್ಲಿ ಬಾಸ್ ಅಥವಾ ಡಿ ಬಾಸ್ ಎನ್ನುವ ಹೆಸರು ಸಾಮಾನ್ಯವಾಗಿ ಕಂಡುಬರುತ್ತೆ. ಇದು ಅಭಿಮಾನಿಗಳಿಗೂ ಖುಷಿ ಕೊಡುತ್ತೆ. ಈಗ ರಾಬರ್ಟ್ ಚಿತ್ರದ ಮೋಷನ್ ಪೋಸ್ಟರ್ ನಲ್ಲೂ ಜೀಪ್ ಗೆ ಕಾರು ನಂಬರ್ ಬದಲು ಬಾಸ್ ಎಂದು ಬರೆಯಲಾಗಿದೆ.

  ಯಜಮಾನ ಟ್ರೈಲರ್ನಲ್ಲೂ ಇತ್ತು

  ಯಜಮಾನ ಟ್ರೈಲರ್ನಲ್ಲೂ ಇತ್ತು

  ಈ ಹಿಂದೆ ತೆರೆಕಂಡಿದ್ದ ಯಜಮಾನ ಚಿತ್ರದಲ್ಲೂ ಈ ಬಾಸ್ ಸದ್ದು ಮಾಡಿತ್ತು. ಟ್ರೈಲರ್ ನಲ್ಲಿ ದರ್ಶನ್ ಇಂಟ್ರೊಡಕ್ಷನ್ ಗೂ ಮುಂಚೆ ಆಕಾಸದಲ್ಲಿ ಮೂಡುವ ಸಿಡಿಲಿನಲ್ಲಿ ಬಾಸ್ ಎಂದು ಬಂದು ಹೋಗುತ್ತೆ. ಇದು ದರ್ಶನ್ ಚಿತ್ರಗಳಲ್ಲಿ ಸಹಜವಾಗಿ ಕಂಡು ಬರುತ್ತಿದೆ. ಇದರಿಂದ ಅಭಿಮಾನಿಗಳಲ್ಲೂ ಜೋಶ್ ಹೆಚ್ಚುತ್ತಿದೆ ಎನ್ನಲಾಗುತ್ತಿದೆ.

  ಆಶಾ ಭಟ್ ನಂತರ 'ರಾಬರ್ಟ್' ಟೀಮ್ ಗೆ ಬಂದ ಮತ್ತೊಬ್ಬ ಚೆಲುವೆಆಶಾ ಭಟ್ ನಂತರ 'ರಾಬರ್ಟ್' ಟೀಮ್ ಗೆ ಬಂದ ಮತ್ತೊಬ್ಬ ಚೆಲುವೆ

  ವಾರಾಣಸಿಯಲ್ಲಿ ರಾಬರ್ಟ್

  ವಾರಾಣಸಿಯಲ್ಲಿ ರಾಬರ್ಟ್

  ರಾಬರ್ಟ್ ಚಿತ್ರದ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬೀಡುಬಿಟ್ಟಿದೆ. ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ಭಾರತದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿರುವ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿಗಷ್ಟೆ ಈ ಫೋಟೋವನ್ನು ತರುಣ್ ಸುಧೀರ್ ಪೋಸ್ಟ್ ಮಾಡಿದ್ದರು.

  ಯಾವಾಗ ರಾಬರ್ಟ್?

  ಯಾವಾಗ ರಾಬರ್ಟ್?

  ಹೆಬ್ಬುಲಿ ನಿರ್ಮಿಸಿದ್ದ ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರ ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್ ಈ ಚಿತ್ರದಲ್ಲಿ ನಟಿಸುತ್ತಿದ್ದು, 2020ರ ಫಸ್ಟ್ ಹಾಫ್ ನಲ್ಲಿ ಈ ಸಿನಿಮಾ ನಿರೀಕ್ಷಿಸಬಹುದು.

  English summary
  Challenging star darshan starrer and tharun sudhir directional most expected Robert movie first look motion poster has released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X