For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 29 ಸಂಜೆ 5ಕ್ಕೆ 'ರಾಬರ್ಟ್' ಚಿತ್ರದಿಂದ ಮೆಗಾ ಸರ್ಪ್ರೈಸ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಈಗಾಗಲೇ ಟಾಕಿ ಪೋಷನ್ ಚಿತ್ರೀಕರಣ ಮುಗಿಸಿದೆ. ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದ್ದು ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.

  ಪ್ರೇಮಿಗಳ ದಿನಕ್ಕೆ 'ರಾಬರ್ಟ್' ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿತ್ತು. ಫಸ್ಟ್ ಲುಕ್ ಪೋಸ್ಟರ್, ಎರಡನೇ ಪೋಸ್ಟರ್ ಹಾಗೂ ಟೀಸರ್ ಮೂಲಕ ಭಾರಿ ಕುತೂಹಲ ಮೂಡಿಸಿರುವ ಡಿ-ಬಾಸ್ ಚಿತ್ರ ಇದೀಗ ಇನ್ನೊಂದು ಸರ್ಪ್ರೈಸ್ ನೀಡಲು ತಯಾರಾಗಿದೆ.

  'ರಾಬರ್ಟ್' ಟೀಸರ್ ಯಶಸ್ಸಿನ ಹಿಂದಿರುವ ಈ ಗೌತಮ್ ರಾಜ್ ಯಾರು?'ರಾಬರ್ಟ್' ಟೀಸರ್ ಯಶಸ್ಸಿನ ಹಿಂದಿರುವ ಈ ಗೌತಮ್ ರಾಜ್ ಯಾರು?

  ಹೌದು, ಫೆಬ್ರವರಿ 29ರ ಸಂಜೆ 5 ಗಂಟೆಗೆ ರಾಬರ್ಟ್ ಚಿತ್ರಕ್ಕೆ ಸಂಬಂಧಪಟ್ಟಂತೆ ಸರ್ಪ್ರೈಸ್ ವಿಷಯವೊಂದನ್ನು ಘೋಷಣೆ ಮಾಡಲಿದೆಯಂತೆ. ಈ ಸುದ್ದಿಯನ್ನು ಖುದ್ದು ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

  ಹಾಗಾಗಿ, ನಾಳೆ ಸಂಜೆ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದಾರೆ ಎಂಬ ಚರ್ಚೆ ಡಿ ಬಾಸ್ ಅಭಿಮಾನಿಗಳನ್ನು ಕಾಡುತ್ತಿದೆ. ಸದ್ಯಕ್ಕೆ ರಾಬರ್ಟ್ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಿಸಿಲ್ಲ. ಟ್ರೈಲರ್ ಯಾವಾಗ ಎಂಬುದು ತಿಳಿದಿಲ್ಲ, ಹಾಡುಗಳ ಬಿಡುಗಡೆ ಕುರಿತು ಸುಳಿವು ಸಿಕ್ಕಿಲ್ಲ. ಹಾಗಾಗಿ, ಈ ವಿಷಯಗಳ ಬಗ್ಗೆ ಮಾಹಿತಿ ನೀಡಬಹುದಾ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.

  ಸಂಭಾವನೆ ವಿಷ್ಯದಲ್ಲಿ ನಿರ್ಮಾಪಕರಿಗೆ 'ಹೀಗೂ' ಹೇಳಿದ್ದಾರೆ ನಟ ದರ್ಶನ್.!ಸಂಭಾವನೆ ವಿಷ್ಯದಲ್ಲಿ ನಿರ್ಮಾಪಕರಿಗೆ 'ಹೀಗೂ' ಹೇಳಿದ್ದಾರೆ ನಟ ದರ್ಶನ್.!

  ಇನ್ನುಳಿದಂತೆ ಉಮಾಪತಿ ಶ್ರೀನಿವಾಸ್ ಈ ಚಿತ್ರ ನಿರ್ಮಿಸಿದ್ದು, ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿನೋದ್ ಪ್ರಭಾಕರ್ ವಿಶೇಷ ಪಾತ್ರ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

  English summary
  Darshan starrer roberrt movie going to announce big update on february 29th evening 5.00 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X