Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಖ್ಯಾತ ನಟ ಜಗಪತಿ ಬಾಬುಗೆ ಸ್ವಾಗತ ಕೋರಿದ 'ರಾಬರ್ಟ್' ಟೀಂ
ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ 'ರಾಬರ್ಟ್' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಇತ್ತೀಚಿಗಷ್ಟೆ ಮಹೂರ್ತ ಮಾಡಿಕೊಂಡು ಶೂಟಿಂಗ್ ನಲ್ಲಿ ಬ್ಯುಸಿ ಇರುವ ಚಿತ್ರತಂಡಕ್ಕೆ ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ವಿನಲ್ ಎಂಟ್ರಿಯಾಗಿದ್ದಾರೆ. ಹೌದು, 'ರಾಬರ್ಟ್' ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಜಗಪತಿ ಬಾಬು ಕಾಣಿಸಿಕೊಳ್ಳಲಿದ್ದಾರೆ.
ಈ ಬಗ್ಗೆ 'ರಾಬರ್ಟ್' ಚಿತ್ರತಂಡ ಅಧಿಕೃತವಾಗಿ ಬಹಿರಂಗಪಡಿಸಿದೆ. ಜಗಪತಿ ಬಾಬು ಅವರಿಗೆ ಸ್ವಾಗತ ಕೋರುವ ಮೂಲಕ ದರ್ಶನ್ ಎದುರು ಅಖಾಡಕ್ಕೆ ಇಳಿಯುತ್ತಿರುವ ಮಾಹಿತಿಯನ್ನು ಹೊರಹಾಕಿದೆ. ನಿರ್ದೇಶಕ ತರುಣ್ ಸುಧೀರ್ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Was always a big fan of him... happy to be working with @jagapathibabu sir... welcome to team #Roberrt sir.. pic.twitter.com/viB0VEqDOH
— Tharun Sudhir (@TharunSudhir) May 8, 2019
ಅಂದ್ಹಾಗೆ ಜಗಪತಿ ಬಾಬು ಮೊದಲ ಬಾರಿಗೆ ಡಿ ಬಾಸ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ಸ್ಟಾರ್ ವಿಲನ್ ಆಗಿರುವ ಜಗಪತಿ ಬಾಬು ಈ ಮೊದಲು ಕನ್ನಡದಲ್ಲಿ ಸುದೀಪ್ ಮತ್ತು ನಿಖಿಲ್ ಕುಮಾರ್ ಸ್ವಾಮಿ ಜೊತೆ ಅಭಿನಯಿಸಿದ್ದರು. ಕಿಚ್ಚ ಸುದೀಪ್ ಅಭಿನಯದ 'ಬಚ್ಚನ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಜಗಪತಿ ಬಾಬು.
ಅಂದು ಸುದೀಪ್ ಗೆ ವಿಲನ್ ಆಗಿದ್ದ 'ಈ ನಟ' ಇಂದು ದರ್ಶನ್ ಗೆ ವಿಲನ್
ಕಲಾವಿದರ ಆಯ್ಕೆ ವಿಚಾರದಲ್ಲಿ ಭಾರಿ ಕುತೂಹಲ ಮೂಡಿಸಿರುವ 'ರಾಬರ್ಟ್' ಚಿತ್ರ ಸದ್ಯ ಜಗಪತಿ ಬಾಬು ಅವರ ಹೆಸರನ್ನು ಮಾತ್ರ ಅಧಿಕೃತವಾಗಿ ಬಹಿರಂಗ ಪಡಿಸಿದೆ. ಕುತೂಹಲ ಮೂಡಿಸಿರುವ ನಾಯಕಿ ವಿಚಾರ ಮತ್ತು ಉಳಿದ ಕಲಾವಿದರ ಬಗ್ಗೆ ಯಾವುದೆ ಮಾಹಿತಿ ಹೊರಹಾಕಿಲ್ಲ. ಚಿತ್ರೀಕರಣ ಸೆಟ್ ನಲ್ಲೂ ಮೊಬೈಲ್ ಬಳಸದಂತೆ ಭಾರಿ ಕಟ್ಟುನಿಟ್ಟು ಮಾಡಿದೆ 'ರಾಬರ್ಟ್' ಟೀಂ. ಇನ್ನು ಯಾರೆಲ್ಲ 'ರಾಬರ್ಟ್' ಜೊತೆಯಾಗಲಿದ್ದಾರೆ ಎನ್ನುವುದು ಸಧ್ಯದಲ್ಲೇ ಗೊತ್ತಾಗಲಿದೆ.